alcohol test for school van drivers  ಸ್ಕೂಲ್​ ವ್ಯಾನ್​ ಡ್ರೈವರ್​ಗಳಿಗೆ ಎಣ್ಣೆ ಮೀಟರ್ ಹಿಡಿದ ಶಿವಮೊಗ್ಗ ಟ್ರಾಫಿಕ್ ಪೊಲೀಸ್​, ದಾಖಲಾಯ್ತು 4 ಕೇಸ್​ 

ಹಂಚಿಕೊಳ್ಳಿ
WhatsApp Facebook X Telegram
alcohol test for school van drivers 
alcohol test for school van drivers 

alcohol test for school van drivers  ಸ್ಕೂಲ್​ ವ್ಯಾನ್​ ಡ್ರೈವರ್​ಗಳಿಗೆ ಎಣ್ಣೆ ಮೀಟರ್ ಹಿಡಿದ ಶಿವಮೊಗ್ಗ ಟ್ರಾಫಿಕ್ ಪೊಲೀಸ್​, ದಾಖಲಾಯ್ತು 4 ಕೇಸ್​ 

alcohol test for school van drivers ಮಲೆನಾಡು ಟುಡೆ ಸುದ್ದಿ ಶಿವಮೊಗ್ಗ: ಶಾಲಾ ಮಕ್ಕಳ ಸುರಕ್ಷತೆಗಾಗಿ ಶಿವಮೊಗ್ಗ ನಗರ ಸಂಚಾರ ಪೊಲೀಸರು ಸೋಮವಾರ ವಿಶೇಷ ಕಾರ್ಯಾಚರಣೆ ನಡೆಸಿದರು. ಈ ವೇಳೆ, ಅತಿಯಾದ ಮಕ್ಕಳ ಸಾಗಾಟ, ಮದ್ಯ ಸೇವಿಸಿ ವಾಹನ ಚಾಲನೆ ಹಾಗೂ ಫಿಟ್‌ನೆಸ್ ಪ್ರಮಾಣಪತ್ರವಿಲ್ಲದ ವಾಹನಗಳ ಪ್ರಕರಣಗಳು ಪತ್ತೆಯಾಗಿವೆ

ನಗರದ ಪೂರ್ವ ಮತ್ತು ಪಶ್ಚಿಮ ಸಂಚಾರ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಶಿವಮೊಗ್ಗದಾದ್ಯಂತ ಹಲವು ಪ್ರಮುಖ ವೃತ್ತಗಳಲ್ಲಿ ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುವ ವಾಹನಗಳನ್ನು ಪರಿಶೀಲಿಸಿದರು. ಪರಿಶೀಲನೆ ವೇಳೆ, ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ಸಾಗಿಸುತ್ತಿದ್ದ 17 ಶಾಲಾ ವಾಹನಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

ಇದರೊಂದಿಗೆ, ಮದ್ಯ ಸೇವಿಸಿ ವಾಹನ ಚಲಾಯಿಸಿದ್ದ 4 ಪ್ರಕರಣಗಳು ಮತ್ತು ಫಿಟ್‌ನೆಸ್ ಪ್ರಮಾಣಪತ್ರ (ಎಫ್‌ಸಿ) ಇಲ್ಲದ 3 ಪ್ರಕರಣಗಳನ್ನೂ ದಾಖಲಿಸಲಾಗಿದೆ. ಚಾಲಕರಿಗೆ ವಾಹನದ ವಿಮೆ, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಎಮಿಷನ್ ರಿಪೋರ್ಟ್) ಮತ್ತು ಫಿಟ್‌ನೆಸ್ ಪ್ರಮಾಣಪತ್ರಗಳನ್ನು ನವೀಕೃತವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಲಾಯಿತುಪೊಲೀಸರು ವಾಹನ ಚಾಲಕರಿಗೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅರಿವು ಮೂಡಿಸಿದರು. ಪಿಎಸ್‌ಐ ಭಾರತಿ ಮತ್ತು ಇತರೆ ಸಿಬ್ಬಂದಿಯ ನೇತೃತ್ವದಲ್ಲಿ ಆಲ್ಕೊಳ ವೃತ್ತದಲ್ಲಿ 100ಕ್ಕೂ ಹೆಚ್ಚು ಶಾಲಾ ವಾಹನ ಚಾಲಕರಿಗೆ ಜಾಗೃತಿ ನೀಡಲಾಯಿತು

 

alcohol test for school van drivers ವಾಹನಗಳನ್ನು ಚೆಕ್​ ಮಾಡುತ್ತಿರುವ ಪೊಲೀಸರು
alcohol test for school van drivers ವಾಹನಗಳನ್ನು ಚೆಕ್​ ಮಾಡುತ್ತಿರುವ ಪೊಲೀಸರು

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor