Shivamogga breaking news june 24 / ಮೊಬೈಲ್​ ವಿಚಾರಕ್ಕೆ ಎಎ ಸರ್ಕಲ್​ನಲ್ಲಿ ನಡೀತಾ ಕಿಡ್ನಾಪ್..? ಶಿವಮೊಗ್ಗದ ಕ್ರೈಂ ಸುದ್ದಿಗಳು

ಹಂಚಿಕೊಳ್ಳಿ
WhatsApp Facebook X Telegram
malenadutoday image
Railway technical inspection Cyber crime Shivamogga District Court

Shivamogga breaking news june 24 /  ಮೊಬೈಲ್​ ವಿಚಾರಕ್ಕೆ ಎಎ ಸರ್ಕಲ್​ನಲ್ಲಿ ನಡೀತಾ ಕಿಡ್ನಾಪ್? ಶಿವಮೊಗ್ಗದ ಕ್ರೈಂ ಸುದ್ದಿಗಳು

ಶಿವಮೊಗ್ಗದಲ್ಲಿ ನಡೆದ ಘಟನೆಗಳನ್ನು ಸಂಕ್ಷಿಪ್ತವಾಗಿ ವಿವರಿಸುವ ಮಲೆನಾಡು ಟುಡೆಯ ಇವತ್ತಿನ ಚಟ್​ ಪಟ್ ನ್ಯೂಸ್ ಇಲ್ಲಿದೆ. 

Shivamogga breaking news june 24 /  ಸುದ್ದಿ 1: ಮೊಬೈಲ್ ವಿಚಾರಕ್ಕೆ ಯುವಕನ ಅಪಹರಣ, ಜೀವಬೆದರಿಕೆ ಆರೋಪ 

ಹಳೇ ಮೊಬೈಲ್ ಮಾರಾಟದ ವಿಚಾರಕ್ಕೆ ಸಂಬಂಧಿಸಿ ಶಿವಮೊಗ್ಗದಲ್ಲಿ ಯುವಕನೊಬ್ಬನನ್ನು ಅಪಹರಿಸಿ, ಜೀವಬೆದರಿಕೆ ಹಾಕಿದ ಪ್ರಕರಣದಲ್ಲಿ ಏಳು ಜನರ ವಿರುದ್ಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇಲ್ಲಿನ ಅಮೀರ್ ಅಹ್ಮದ್ ಸರ್ಕಲ್‌ನ ಸಮೀಪದಲ್ಲಿರುವ   ಸೆಕೆಂಡ್ ಹ್ಯಾಂಡ್ ಮೊಬೈಲ್ ಅಂಗಡಿಯಾತನನ್ನು ಮೊಬೈಲ್ ವಿಚಾರಕ್ಕೆ ಬೆದರಿಸಿ, ಆತನನ್ನು ಅಜ್ಞಾತ ಸ್ಥಳಕ್ಕೆ ಎಳೆದೊಯ್ದು ಹಲ್ಲೆ ನಡೆಸಿದ ಆರೋಪ ಸಂಬಂದ ಈ ಎಫ್​ಐಆರ್ ದಾಖಲಾಗಿದೆ. ಪ್ರಕರಣದಲ್ಲಿ  ಸಂತ್ರಸ್ತಿನಿಗೆ ಏಟು ಬಿದ್ದಿದ್ದು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ದೊಡ್ಡಪೇಟೆ ಪೊಲೀಸರು ಈ ಬಗ್ಗೆ ತನಿಖೆ ನಡೆಸ್ತಿದ್ದಾರೆ. 

ಸುದ್ದಿ 2:  ಅಶ್ಲೀಲ ಚಿತ್ರ ಎಡಿಟ್​ ಮಾಡಿ ಇನ್​ಸ್ಪಾಗ್ರಾಮ್​ನಲ್ಲಿ ಅಪ್​ಲೋಡ್ ಮಾಡಿದ ಆರೋಪ 

 ಯುವತಿಯೊಬ್ಬಳ ಭಾವಚಿತ್ರವನ್ನು ಅಶ್ಲೀಲ ಚಿತ್ರದೊಂದಿಗೆ ಎಡಿಟ್‌ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ ಆರೋಪ ಸಂಬಂಧ  ಶಿವಮೊಗ್ಗದ ಸಿ.ಇ.ಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತ್ರೆಗೆ ಅಪರಚಿತ ಖಾತೆಯಿಂದ ವ್ಯಕ್ತಿಯೊಬ್ಬ ತನ್ನ ಪ್ರೀತಿಸುವಂತೆ ಮೆಸೇಜ್ ಮಾಡಿದ್ದಷ್ಟೆ ಅಲ್ಲದೆ ಆಕೆ ಅಕೌಂಟ್ ಬ್ಲಾಕ್ ಮಾಡಿದ್ದರೂ ಬೇರೆ ಬೇರೆ ಖಾತೆ ತೆರೆದು, ಆಕೆ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್​ಸ್ಟಾಗ್ರಾಮ್​ಗೆ ಅಪ್​ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಯುವತಿ ನೀಡಿದ ದೂರಿನನ್ವಯ ಎಫ್​ಐಆರ್ ದಾಖಲಿಸಲಾಗಿದೆ. 

Shivamogga breaking news june 24 /  ಸುದ್ದಿ 3:  ವ್ಯಾನಿಟಿ ಬ್ಯಾಗ್​ನಲ್ಲಿದ್ದ 1.75 ಲಕ್ಷ ರೂಪಾಯಿ ಕಳ್ಳತನ 

ಶಿವಮೊಗ್ಗ ಕೆಎಸ್​ ಆರ್​ಟಿಸಿ ಬಸ್​ ನಿಲ್ದಾಣದಿಂದ  ಎನ್‌.ಆರ್‌.ಪುರಕ್ಕೆ ಹೊರಟಿದ್ದ ಮಹಿಳೆಯ ವ್ಯಾನಿಟಿ ಬ್ಯಾಗ್‌ನಲ್ಲಿದ್ದ  ₹1.75 ಲಕ್ಷ ಕಳ್ಳತನವಾಗಿದೆ  ಎಂದು ಮಹಿಳೆಯೊಬ್ಬರು ಶಿವಮೊಗ್ಗದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ malenadu today ದೂರು ದಾಖಲಿಸಿದ್ದಾರೆ.  ಚಿಕ್ಕಮಗಳೂರು ಜಿಲ್ಲೆ ನಿವಾಸಿ ಎನ್‌.ಆರ್‌.ಪುರದಲ್ಲಿರುವ ಮಗಳ ಮನೆಗೆ ತೆರಳುತ್ತಿದ್ದರು. ಮಗಳಿಗೆ ಕೊಡಲು ₹1.75 ಲಕ್ಷ ರೂ. ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬಂದಿದ್ದರು.ಈ ಹಣವನ್ನು ದುಷ್ಕರ್ಮಿಗಳು ಕದ್ದಿದ್ದಾರೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor