sigandur bridge : ಸಿಗಂದೂರು ಸೇತುವೆಯ ಕೊನೆ ಹಂತದ  ನಿರ್ಮಾಣ ಕಾಮಗಾರಿಯನ್ನು ವೀಕ್ಷಿಸಿದ ಸಂಸದ ಬಿವೈ ಆರ್​ | ಹೇಳಿದ್ದೇನು

sigandur bridge : ಸಂಸದ ಬಿವೈ ರಾಘವೇಂದ್ರರವರು ಇಂದು ಸಿಗಂದೂರು ಸೇತುವೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸೇತುವೆಯ ಕೊನೆ ಹಂತದ ನಿರ್ಮಾಣ ಕಾಮಗಾರಿಯ ವೀಕ್ಷಣೆಯನ್ನು ಮಾಡಿದರು.

sigandur bridge : ಬಿವೈ ರಾಘವೇಂದ್ರ ಹೇಳಿದ್ದೇನು

ಈ ವೇಳೆ ಮಾತಣಾಡಿದ ಅವರು ಕಳಸವಳ್ಳಿ – ಅಂಬಾರಗೋಡ್ಲು ಮಧ್ಯೆ ಸೇತುವೆ ಆಗಬೇಕು ಎಂಬುದು ಬಹು ವರ್ಷದ ಕನಸಾಗಿತ್ತು. ಈ ಸೇತುವೆ ನಿರ್ಮಾಣಕ್ಕಾಗಿ ಜನರು ಅನೇಕ ವರ್ಷ ಹೋರಾಟ ನಡೆಸಿದ್ದರು. ಹಾಗಾಗಿ ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಯಿತು. ಸಾಗರ – ಮರಕುಟಿಕ ರಸ್ತೆಗೆ ಎನ್‌.ಹೆಚ್‌ 369 ಇ ಎಂದು ಘೋಷಿಸಲಾಯಿತು. ಯಡಿಯೂರಪ್ಪ ಅವರು ಪ್ರಯತ್ನಪಟ್ಟು ಕೇಂದ್ರದಿಂದ ಸೇತುವೆ ನಿರ್ಮಾಣಕ್ಕೆ 550 ಕೋಟಿ ರೂ. ಹಣ ತರಿಸಿಕೊಟ್ಟಿದ್ದರು. ಒಟ್ಟು 423 ಕೋಟಿ ರೂ. ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣವಾಗುತ್ತಿದೆ. ಸೇತುವೆ ನಿರ್ಮಾಣ ಕಾರ್ಯಕ್ಕೆ ನಾಲ್ಕೂವರೆ ವರ್ಷ ಬೇಕಾಯಿತು. ಕಾಮಗಾರಿ ಪೂರ್ಣಗೊಳ್ಳಲು ಆಗಸ್ಟ್‌ ತಿಂಗಳವರೆಗೆ ಕಾಲವಕಾಶವಿದ್ದು, ಅದಕ್ಕೂ ಮುಂಚೆಯೇ ಈ ಮಳೆಗಾಲದಲ್ಲಿಯೇ ಸೇತುವೆ ಉದ್ಘಾಟನೆ ಆಗಬೇಕು ಎಂಬುದು ನಮ್ಮ ಅಪೇಕ್ಷೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಸಿಗಂದೂರು ಸೇತುವೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.  ಈ ಸಂಬಂಧ ಭೂ ಸಾರಿಗೆ ಸಚಿವ ನಿತಿನ ಗಡ್ಕರಿ ಅವರಿಗೆ ಮನವಿ ಮಾಡಿದ್ದೇವೆ. ಈ ಹಿನ್ನೆಲೆ ಕೇಂದ್ರದಿಂದ ರೀಜನಲ್‌ ಆಫೀಸರ್‌ ಶರ್ಮಾ ಎಂಬುವವರ ನೇತೃತ್ವದ ತಂಡ ಪರಿಶೀಲಿಸಿದ್ದಾರೆ ಎಂದರು.

sigandur bridge
sigandur bridge ಅಧಿಕಾರಿಗಳೊಂದಿಗೆ ಸೇತುವೆ ವೀಕ್ಷಿಸಿದ ಬಿ ವೈ ರಾಘವೇಂದ್ರ

 ಸಿಗಂದೂರು ಸೇತುವೆ ಮೇಲೆ ಕಾರಿನಲ್ಲಿಯೇ ತೆರಳಿದ ಸಂಸದರು ಸೇತುವೆಯನ್ನು ವೀಕ್ಷಿಸಿ ನಂತರ ಸಿಗಂದೂರು ದೇವಿ ಸನ್ನಿಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. 

sigandur bridge
sigandur bridge ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ

 

Leave a Comment