ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಗೊಂದಲ- ಯಾದವ ಸಮಾಜದ ಅಸಮಧಾನ

prathapa thirthahalli
Prathapa thirthahalli - content producer

Shree krishna janmashtami : ಶಿಕಾರಿಪುರ : ದೇಶದೆಲ್ಲೆಡೆ ಇಂದು ಶ್ರೀ ಕೃಷ್ಣ ಜನ್ಮಾಷ್ಠಮಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಾರ್ಯಕ್ರಮವನ್ನು ಸರ್ಕಾರವೇ ಯಾದವ ಸಮುದಾಯದೊಂದಿಗೆ ಸ್ಥಳೀಯ ಆಡಳಿತಗಳಿಗೆ ಸರ್ಕಾರಿ ಭವನಗಳಲ್ಲಿ ಜಂಟಿಯಾಗಿ ಆಚರಿಸುತ್ತದೆ. ಅಂತೆಯೇ ಶಿಕಾರಿಪುರದಲ್ಲಿ ಗ್ರಾಮೀಣಾಭಿವೃದ್ಧಿ ಸೌಧದಲ್ಲಿ ಇಂದು ಸ್ಥಳೀಯ ಆಡಳಿತಾಧಿಕಾರಿಗಳು ಹಾಗು ಜನಪ್ರತಿನಿಧಿಗಳ ಸಮ್ಮುಖದಲ್ಲಿ ಜಯಂತಿಯನ್ನು ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಸುತ್ತಮುತ್ತಲ ಯಾದವ ಸಮುದಾಯದ 250 ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಸಾಗಿತು.ಆದರೆ ಮದ್ಯಾಹ್ನದ ಹೊತ್ತಿಗೆ ಊಟದ ಕೊಠಡಿಗೆ ಹೋದ ಜನರು ಬೇಸರಗೊಂಡರು.

ಆಯೋಜಕರು ಊಟದ ವ್ಯವಸ್ಥೆಯನ್ನೇ ಮಾಡಿರಲಿಲ್ಲ

- Advertisement -

ಸಾಮಾನ್ಯವಾಗಿ ಸರ್ಕಾರ ಆಚರಿಸುವ ಜಯಂತಿಗಳಲ್ಲಿ ಮದ್ಯಾಹ್ಮದ ಊಟ ಇಲ್ಲವೇ ಬೆಳಗಿನ ಉಪಹಾರ ಇದ್ದೇ ಇರುತ್ತೆ. ಅದರಂತೆ ಜನರು ಭಾವಿಸಿಕೊಂಡು ಬರುವುದು ಸಹಜ, ಶಿಕಾರಿಪುರದಲ್ಲೂ ಕೂಡ ಕಾರ್ಯಕ್ರಮದ ನಂತರ ಜನರು ಊಟದ ಕೊಠಡಿಗೆ ಹೋಗಿದ್ದಾರೆ. ಅಲ್ಲಿ ಊಟದ ವ್ಯವಸ್ಥೆಯನ್ನೇ ಮಾಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನರು ಕಾರ್ಯಕ್ರಮವನ್ನು ಸರ್ಕಾರಿ ಹಣದಲ್ಲಿ ಮಾಡುತ್ತಿರುವಾಗ ಪ್ರತಿ ವರ್ಷದಂತೆ ಈ ಬಾರಿ ಯಾಕೆ ಊಟದ ವ್ಯವಸ್ಥೆಯನ್ನು ಮಾಡಲಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಆಗ ಅಧಿಕಾರಿಗಳು ಸರಿಯಾದ ಸಮಜಾಯಿಸಿ ಕೊಡಲು ಹೈರಾಣಾಗಿದ್ದಾರೆ. ಇದು ಯಾದವ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಸಮಾಜದ ಭಾಂದವರು ಅಲ್ಲಿಯೇ ಪ್ರತಿಭಟನೆ ನಡೆಸಿ, ಘಟನೆಯನ್ನು ಖಂಡಿಸಿದ್ದಾರೆ.

Shree krishna janmashtami

Shree krishna janmashtami
Shree krishna janmashtami
Share This Article
Leave a Comment

Leave a Reply

Your email address will not be published. Required fields are marked *