ತಾಳಗುಪ್ಪ- ಶಿವಮೊಗ್ಗ-ಬೆಂಗಳೂರು ರೈಲುಗಳ ವೇಳಾಪಟ್ಟಿ ಬದಲು! ಯಾವ್ಯಾವ ಸ್ಟೇಷನ್​ಗೆ ಎಷ್ಟು ಬೇಗ ಬರುತ್ತವೆ ತಿಳಿಯಿರಿ

Shivamogga Train Timings ಶಿವಮೊಗ್ಗ  :  ನೈಋತ್ಯ ರೈಲ್ವೆ ವಿಭಾಗ, ತನ್ನ ವಿಭಾಗದ ಅಡಿಯಲ್ಲಿ ಸಂಚರಿಸುವ ಹಲವು ಟ್ರೈನ್​ಗಳ ವೇಳಾಪಟ್ಟಿಯಲ್ಲಿ ಬದಲಾವಣೆ ತಂದಿದೆ. ಹೊಸವರ್ಷದ ಆರಂಭದಿಂದಲೇ ಟ್ರೈನ್​ಗಳು ಹೊಸದಾಗಿ ನಿಗದಿಯಾದ ಟೈಮಿಂಗ್ಸ್​​ನ ಪ್ರಕಾರ ಸಂಚರಿಸಲಿವೆ. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರ ಮತ್ತು ಸುತ್ತಮುತ್ತಲಿನ ನಿಲ್ದಾಣಗಳನ್ನು ಸಂಪರ್ಕಿಸುವ ರೈಲುಗಳ ವೇಳಾಪಟ್ಟಿಯ ವಿವರವನ್ನ ಗಮನಿಸೋಣ

ಇನ್ಮುಂದೆ ಸೂಪರ್​ ಫಾಸ್ಟ್ ಆಗಿ ಓಡಲಿವೆ ಶಿವಮೊಗ್ಗ ಟ್ರೈನ್ಸ್! ಬೆಂಗಳೂರು, ಯಶವಂತಪುರ , ಎಂಜಿಆರ್​ ಚೆನ್ನೈ ಇನ್ನೂ ಹತ್ತಿರ

Shivamogga Train Timings

ಚೆನ್ನೈ, ಎಂ.ಜಿ.ಆರ್ ಸೆಂಟ್ರಲ್ ನಿಂದ ಶಿವಮೊಗ್ಗಕ್ಕೆ ಬರುವ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು (ಸಂಖ್ಯೆ 12691) ಈ ಹಿಂದಿಗಿಂತಲೂ ಮುಂಚಿತವಾಗಿ ಶಿವಮೊಗ್ಗ ತಲುಪಲಿದೆ.ಈ ರೈಲು ಈ ಹಿಂದೆ ಬೆಳಿಗ್ಗೆ ತಿಪಟೂರಿಗೆ 9.04 ಕ್ಕೆ ಬರುತ್ತಿತ್ತು. ಇದೀಗ 8.08 ಕ್ಕೆ ಬರಲಿದೆ. ಇನ್ನೂ ಅರಸೀಕೆರೆಗೆ 9.30 ರ ಬದಲಾಗಿ, 8.30 ಕ್ಕೆ ಬದಲಾಗಿದೆ. ಈ ಹಿಂದೆ ಇದೇ ಟ್ರೈನ್​ 10.05 ಕ್ಕೆ ಕಡೂರು ನಿಲ್ದಾಣಕ್ಕೆ ಬರುತ್ತಿತ್ತು, ಅದರೆ ಈಗ 09.03 ಕ್ಕೆ ಬರಲಿದೆ. ಬೀರೂರು ನಿಲ್ದಾಣಕ್ಕೆ 10.20 ರ ಬದಲು 09.13 ಕ್ಕೆ, ತರೀಕೆರೆ ನಿಲ್ದಾಣಕ್ಕೆ 10.47 ರ ಬದಲು 09.38 ಕ್ಕೆ ಹಾಗೂ ಭದ್ರಾವತಿ ನಿಲ್ದಾಣಕ್ಕೆ ಬೆಳಿಗ್ಗೆ 11.30 ರ ಬದಲು 09.58 ಕ್ಕೆ ಆಗಮಿಸಲಿದೆ. ಅಂತಿಮವಾಗಿ ಶಿವಮೊಗ್ಗ ಟೌನ್ ನಿಲ್ದಾಣಕ್ಕೆ ಮಧ್ಯಾಹ್ನ 12.20 ಕ್ಕೆ ತಲುಪುತ್ತಿದ್ದ ಈ ರೈಲು ಇನ್ಮುಂದೆ ಬೆಳಿಗ್ಗೆ 10.55 ಕ್ಕೆ ತಲುಪಲಿದೆ. 

South Western Railway Deepavali Special Train Kumsi Railway Station railway updates railway news 
South Western Railway Deepavali Special Train Kumsi Railway Station railway updates railway news

ಯಶವಂತಪುರ- ಶಿವಮೊಗ್ಗ ಟೌನ್ ರೈಲು ಸಂಖ್ಯೆ 20689) ಸಹ ಮುಂಚಿತವಾಗಿ ಶಿವಮೊಗ್ಗಕ್ಕೆ ಬರಲಿದೆ. ಈ ರೈಲು ಅರಸೀಕೆರೆಗೆ 11.08 ರ ಬದಲಾಗಿ, 10.52 ಕ್ಕೆ ಆಗಮಿಸಲಿದೆ. ನಂತರ ಕಡೂರು ನಿಲ್ದಾಣಕ್ಕೆ ಮಧ್ಯಾಹ್ನ 12.08 ರ ಬದಲಾಗಿ 11.50 ಕ್ಕೆ, ಬೀರೂರು ನಿಲ್ದಾಣಕ್ಕೆ 12.23 ರ ಬದಲಾಗಿ 12.02 ಕ್ಕೆ, ತರೀಕೆರೆ ನಿಲ್ದಾಣಕ್ಕೆ ಮಧ್ಯಾಹ್ನ 12.58 ರ ಬದಲಾಗಿ 12.30 ಕ್ಕೆ ಹಾಗೂ ಭದ್ರಾವತಿ ನಿಲ್ದಾಣಕ್ಕೆ ಮಧ್ಯಾಹ್ನ 13.18 ರ ಬದಲಾಗಿ 12.50 ಕ್ಕೆ ಬರಲಿದೆ. ಶಿವಮೊಗ್ಗ ಟೌನ್ ನಿಲ್ದಾಣಕ್ಕೆ 14.15 ರ ಬದಲಾಗಿ 14.05 ಕ್ಕೆ ತಲುಪಲಿದೆ.

Shivamogga Train Timings

ಶಿವಮೊಗ್ಗ – ಯಶವಂತಪುರ ಜಂಕ್ಷನ್ ವರೆಗೆ (16582 Shivamogga- YesvantpurJn.(SMET-YPR)-Tri Weekly Express (Tue/Th/Sun)) ವಾರದಲ್ಲಿ ಮೂರು ದಿನ ಅಂದರೆ ಮಂಗಳವಾರ, ಗುರುವಾರ ಮತ್ತು ಭಾನುವಾರಗಳಂದು ಸಂಚರಿಸುವ ಎಕ್ಸ್ ಪ್ರೆಸ್ ರೈಲಿನ ತರೀಕೆರೆ ನಿಲ್ದಾಣದ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಬದಲಾವಣೆ ಆಗಿದೆ. ಈ ಹಿಂದೆ ಈ ರೈಲು ತರೀಕೆರೆ ನಿಲ್ದಾಣಕ್ಕೆ ಮಧ್ಯರಾತ್ರಿ 12.32 ಕ್ಕೆ ಆಗಮಿಸಿ 12.34 ಕ್ಕೆ ಅಲ್ಲಿಂದ ಹೊರಡುತ್ತಿತ್ತು. ಆದರೆ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಈ ರೈಲು ಇನ್ಮುಂದೆ ನಾಲ್ಕು ನಿಮಿಷ ಮುಂಚಿತವಾಗಿ ಅಂದರೆ ಮಧ್ಯರಾತ್ರಿ 12.28 ಕ್ಕೆ ನಿಲ್ದಾಣಕ್ಕೆ ಆಗಮಿಸಲಿದೆ ಮತ್ತು 12.30 ಕ್ಕೆ ಸ್ಟೇಷನ್​ ಬಿಡಲಿದೆ. 

Shivamogga Train Timings
Shivamogga Train Timings

ಆಂಬ್ಯುಲೆನ್ಸ್ ರೆಡಿ ಇಟ್ಕೊಳ್ಳಿ! ನ್ಯೂ ಇಯರ್ ಪಾರ್ಟಿ ಹಿನ್ನೆಲೆ, ಆರೋಗ್ಯ ಇಲಾಖೆ ಸುತ್ತೋಲೆ! ಏನಿದು ಓದಿ

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ತಾಳಗುಪ್ಪಕ್ಕೆ ಪ್ರತಿದಿನ ಸಂಚರಿಸುವ  ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಸಂಖ್ಯೆ 20651 (20651- KSR.Bengaluru- Talguppa-(SBC-TLGP)-SF Express(Daily) ಹೊಸ ವೇಳಾಪಟ್ಟಿಯ ಪ್ರಕಾರ,  ತಿಪಟೂರು ನಿಲ್ದಾಣಕ್ಕೆ ಸಂಜೆ 16.58 ಕ್ಕೆ ಬದಲಾಗಿ 16.48 ಕ್ಕೆ ಬರಲಿದೆ. ಅರಸೀಕೆರೆ ನಿಲ್ದಾಣಕ್ಕೆ ಸಂಜೆ 17.10 ಕ್ಕೆ ಆಗಮಿಸಿ 17.15 ಕ್ಕೆ ಹೊರಡಲಿದೆ. ಕಡೂರು ನಿಲ್ದಾಣಕ್ಕೆ ಸಂಜೆ 17.45 ಕ್ಕೆ ಮತ್ತು ಬೀರೂರು ನಿಲ್ದಾಣಕ್ಕೆ ಸಂಜೆ 17.55 ಕ್ಕೆ ಆಗಮಿಸಲಿದೆ. ತರೀಕೆರೆ ನಿಲ್ದಾಣಕ್ಕೆ 18.41 ರ ಬದಲಾಗಿ  ಸಂಜೆ 18.24 ಕ್ಕೆ ರೈಲು ಬರಲಿದ್ದು, ಭದ್ರಾವತಿಗೆ ಸಂಜೆ 18.42 ಕ್ಕೆ ತಲುಪಲಿದೆ. ಶಿವಮೊಗ್ಗ ನಿಲ್ದಾಣಕ್ಕೆ (SME) ಸಂಜೆ 18.57 ಕ್ಕೆ ಆಗಮಿಸಲಿದೆ.ಶಿವಮೊಗ್ಗದಿಂದ ಕುಂಸಿಗೆ  ರಾತ್ರಿ 19.30 ಕ್ಕೆ, ಅರಸಾಳು 19.45 ಕ್ಕೆ ಮತ್ತು ಆನಂದಪುರಂಗೆ ರಾತ್ರಿ 20.03 ಕ್ಕೆ ರೈಲು ತಲುಪಲಿದೆ. ಸಾಗರ ಜಂಬಗಾರು ನಿಲ್ದಾಣಕ್ಕೆ ರಾತ್ರಿ 21.18 ರ ಬದಲಾಗಿ 20.33 ಕ್ಕೆ ಆಗಮಿಸಲಿದೆ. 

ಪರಿಷ್ಕೃತ ವೇಳಾಪಟ್ಟಿಯಂತೆ, ಜನಶತಾಬ್ದಿ ಎಕ್ಸ್ ಪ್ರೆಸ್ ರೈಲು ಸಂಖ್ಯೆ 12089 , ತಿಪಟೂರಿಗೆ 19.09 ಕ್ಕೆ ಬದಲಾಗಿ 19.00 ಗಂಟೆಗೆ ಬರಲಿದ್ದು, 19.02 ಕ್ಕೆ ಅಲ್ಲಿಂದ ಹೊರಡಲಿದೆ. ಅರಸೀಕೆರೆ ನಿಲ್ದಾಣಕ್ಕೆ 19.23 ಕ್ಕೆ ಆಗಮಿಸಿ 19.25 ಕ್ಕ್ಕೆಹೊರಡಲಿದೆ. ಕಡೂರು ನಿಲ್ದಾಣಕ್ಕೆ 20.04 ಕ್ಕೆ ದಬಲಾಗಿದೆ 19.55 ಕ್ಕೆ ತಲುಪಲಿದ್ದು, ಬೀರೂರು ನಿಲ್ದಾಣಕ್ಕೆ ರಾತ್ರಿ 20.05 ಕ್ಕೆ ಆಗಮಿಸಿ 20.06 ಕ್ಕೆ ಅಲ್ಲಿಂದ ನಿರ್ಗಮಿಸಲಿದೆ. ಭದ್ರಾವತಿ ನಿಲ್ದಾಣಕ್ಕೆ ರಾತ್ರಿ 20.48 ಕ್ಕೆ ತಲುಪಲಿದೆ. 

Shivamogga Train Timings
Shivamogga Train Timings

ಕೇಂದ್ರ ಸರ್ಕಾರದ ಮಹತ್ವದ ಆದೇಶ : ಜನವರಿ ಅಂತ್ಯದವರೆಗೆ ಬೆಳೆ ಖರೀದಿ! ವಿವರ ಓದಿ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

ಶಿವಮೊಗ್ಗ ರೈಲು ವೇಳಾಪಟ್ಟಿ ಬದಲಾವಣೆ 2026: ಸಂಪೂರ್ಣ ಮಾಹಿತಿ ಇಲ್ಲಿದೆ Shivamogga Train Timings Change 2026: Detailed Revised Schedule