Daily Astrology Predictions ಶಿವಮೊಗ್ಗ : ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಪುಷ್ಯ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿಯು ರಾತ್ರಿ 11.10 ರವರೆಗೆ ಇರಲಿದ್ದು, ಆನಂತರ ತ್ರಯೋದಶಿ ಆರಂಭವಾಗಲಿದೆ. ಕೃತ್ತಿಕಾ ನಕ್ಷತ್ರವು ರಾತ್ರಿ 11.33 ರವರೆಗೆ ಇರಲಿದ್ದು, ತದನಂತರ ರೋಹಿಣಿ ನಕ್ಷತ್ರ ಇರಲಿದೆ. ರಾತ್ರಿ 9.17 ರಿಂದ 10.48 ರವರೆಗೆ ಅಮೃತ ಘಳಿಗೆ ಇರಲಿದೆ. ಮಧ್ಯಾಹ್ನ 12.00 ರಿಂದ 1.30 ರವರೆಗೆ ರಾಹುಕಾಲ ಹಾಗೂ ಬೆಳಿಗ್ಗೆ 7.30 ರಿಂದ 9.00 ರವರೆಗೆ ಯಮಗಂಡ ಕಾಲವಿದೆ.

ಶಿವಮೊಗ್ಗ : ಮನೆಯಂಗಳದಲ್ಲಿ ನಿಲ್ಲಿಸಿದ್ದ 18 ಲಕ್ಷದ ಎಕ್ಸ್‌ಯುವಿ 700 ನಾಪತ್ತೆ!
ಇವತ್ತಿನ ರಾಶಿಫಲ
ಮೇಷ : ಕೈಗೆತ್ತಿಕೊಂಡ ಕೆಲವು ಕೆಲಸ ಮುಂದೂಡಲ್ಪಡುವ ಸಾಧ್ಯತೆ ಇದೆ. ಶ್ರಮ ಹೆಚ್ಚಾಗಲಿದ್ದು, ಆಪ್ತರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ದೇವಸ್ಥಾನಗಳಿಗೆ ಭೇಟಿ, ಉದ್ಯೋಗ ಮತ್ತು ವ್ಯವಹಾರದಲ್ಲಿ ಅನಿರೀಕ್ಷಿತ ಬದಲಾವಣೆ, ಕುಟುಂಬದಲ್ಲಿ ಒತ್ತಡ.
ವೃಷಭ : ಹೊಸ ಪರಿಚಯ, ಸಮಾಜದಲ್ಲಿ ಗೌರವ ಹೆಚ್ಚಲಿದೆ. ನಿರುದ್ಯೋಗಿಗಳಿಗೆ ಸಂದರ್ಶನದ ಕರೆ ಬರಲಿದೆ. ವಿವಾದಗಳಿಂದ ಮುಕ್ತಿ. ಸಹೋದರರಿಂದ ಶುಭ ಸುದ್ದಿ ಮತ್ತು ಧನಲಾಭ, ಉದ್ಯೋಗ ಹಾಗೂ ವ್ಯವಹಾರ ಉತ್ಸಾಹದಿಂದ ಸಾಗಲಿವೆ.
ಮಿಥುನ : ಕೆಲಸ ಕಾರ್ಯಗಳಲ್ಲಿ ವಿಳಂಬ, ಆದಾಯದ ಕೊರತೆ, ನಿರುತ್ಸಾಹ , ಸಂಬಂಧಿಕರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ, ದೈವಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಅನಾರೋಗ್ಯ, ಉದ್ಯೋಗ ಮತ್ತು ವೃತ್ತಿಯಲ್ಲಿ ಅಡಚಣೆ

ಶಿವಮೊಗ್ಗದ ನಿರಂಜನಿ ರವೀಂದ್ರ ಅವರಿಗೆ ಸೌತ್ ಇಂಡಿಯನ್ ವುಮೆನ್ ಅಚೀವರ್ಸ್ ಅವಾರ್ಡ್
ಕರ್ಕಾಟಕ : ವ್ಯಾಪಾರಸ್ಥರಿಗೆ ಇಂದು ಲಾಭದಾಯಕ ದಿನ, ಉದ್ಯೋಗಿಗಳಲ್ಲಿ ಹೊಸ ಉತ್ಸಾಹ. ಪ್ರಮುಖ ಕಾರ್ಯಗಳಲ್ಲಿ ಯಶಸ್ಸು ಹಾಗೂ ಶುಭ ವಾರ್ತೆ. ಧನಲಾಭ.
ಸಿಂಹ : ಹೊಸ ಅವಕಾಶ ದೊರೆಯಲಿದ್ದು, ಮುಖ್ಯ ಕೆಲಸಗಳಲ್ಲಿ ಪ್ರಗತಿ. ದೇವಸ್ಥಾನಕ್ಕೆ ತೆರಳುವಿರಿ ಮತ್ತು ವಾಹನ ಸೌಲಭ್ಯ ಸಿಗವುದು, ಬಂಧುಗಳ ಮಿಲನ. ವ್ಯವಹಾರ ಮತ್ತು ಉದ್ಯೋಗದಲ್ಲಿ ಈ ದಿನ ಆಶಾದಾಯಕ.
ಕನ್ಯಾ : ಸಣ್ಣಪುಟ್ಟ ಕಲಹ ಹಾಗೂ ಅಸ್ವಸ್ಥತೆ. ಕುಟುಂಬದ ಸಮಸ್ಯೆ ಕಾಡಲಿದ್ದು, ದೈವಿಕ ಕಾರ್ಯಗಳಲ್ಲಿ ಭಾಗಿಯಾಗುವಿರಿ. ಉದ್ಯೋಗ ಮತ್ತು ವ್ಯವಹಾರವೂ ಮಂದಗತಿಯಲ್ಲಿ ಸಾಗಲಿವೆ.
ತುಲಾ : ಸಂಬಂಧಿಕರೊಡನೆ ವಿವಾದ, ಅನಿರೀಕ್ಷಿತ ವೆಚ್ಚ. ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ, ಆರೋಗ್ಯದ ಬಗ್ಗೆ ಗಮನಹರಿಸುವುದು ಉತ್ತಮ. ಕಲಾವಿದರಿಗೆ ಹಿನ್ನಡೆ, ಉದ್ಯೋಗದಲ್ಲಿ ಬದಲಾವಣೆ, ವ್ಯವಹಾರದಲ್ಲಿ ಸಾಮಾನ್ಯ ದಿನ
ಶಿವಮೊಗ್ಗಕ್ಕೆ ಹೊಸ ವರ್ಷ ಸಿಗಲಿದೆ ಬಂಪರ್, ಬಂಗಾರ ಪುಣ್ಯಸ್ಮರಣೆ ಸೇರಿದಂತೆ ಇನ್ನಿತರೇ ಸುದ್ದಿಗಳು ಇ-ಪೇಪರ್ನಲ್ಲಿ
ವೃಶ್ಚಿಕ : ಹೊಸ ವಿಷಯಗಳನ್ನು ತಿಳಿದುಕೊಳ್ಳಲಿದ್ದು, ಸ್ನೇಹಿತರ ಮೂಲಕ ಶುಭ ಸಮಾಚಾರ ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿ, ಆಸ್ತಿ ಲಾಭ. ವೃತ್ತಿ ರಂಗದಲ್ಲಿ ಪ್ರೋತ್ಸಾಹದಾಯಕ ವಾತಾವರಣ, ದೇವಾಲಯಗಳಿಗೆ ಭೇಟಿ ನೀಡುವಿರಿ.

ಧನುಸ್ಸು : ಹೆಚ್ಚುವರಿ ಆದಾಯದ ಮೂಲ ಸಿಗಲಿದೆ. ಭೂಮಿ ಮತ್ತು ಗೃಹ ಸಂಬಂಧಿ ಯೋಗವಿದ್ದು, ಹಳೆಯ ಸ್ನೇಹಿತರ ಭೇಟಿಯಾಗಲಿದೆ. ಮನೆಯಲ್ಲಿ ಶುಭ ಕಾರ್ಯ, ವೃತ್ತಿಯಲ್ಲಿ ಅಭಿವೃದ್ಧಿ
ಮಕರ : ಸಾಲದ ಪ್ರಯತ್ನ, ಕೆಲಸದಲ್ಲಿ ವಿಳಂಬವಾಗಲಿದೆ. ಬಂಧುಮಿತ್ರರೊಂದಿಗೆ ವೈಮನಸ್ಸು , ಕೈ ಹಾಕಿದ ಯೋಜನೆಗಳು ಕೈಗೂಡುವುದು . ಕೌಟುಂಬಿಕ ಜವಾಬ್ದಾರಿ ಹೆಚ್ಚಾಗಲಿದ್ದು, ವ್ಯವಹಾರದಲ್ಲಿ ಎಂದಿನಂತೆ ದಿನ ಸಾಗಲಿದೆ, ಉದ್ಯೋಗದಲ್ಲಿ ಕಿರಿಕಿರಿ ಉಂಟಾಗಬಹುದು.
ಕುಂಭ : ಬರಬೇಕಾದ ಹಣ ಕೈಗೆ ಸಿಗುವುದು. ಕುಟುಂಬದ ಸದಸ್ಯರೊಂದಿಗೆ ವಾಗ್ವಾದ , ಉದ್ಯೋಗ ಹಾಗೂ ವೃತ್ತಿ ಜೀವನದಲ್ಲಿ ಒತ್ತಡ ಕಂಡುಬರಲಿವೆ. ದೈವಾರಾಧನೆ, ಅಡೆತಡೆಗಳು ಎದುರಾಗಲಿವೆ.
ಮೀನ : ಸಮಾಜದಲ್ಲಿ ಪ್ರಭಾವ ಹೆಚ್ಚಾಗಲಿದ್ದು, ವಸ್ತು ಲಾಭವಾಗಲಿದೆ. ಉದ್ಯೋಗದ ಪ್ರಯತ್ನ ಯಶಸ್ವಿಯಾಗಲಿದ್ದು, ಶುಭ ಸುದ್ದಿಕೇಳಿಬರಲಿವೆ. ಧನಲಾಭದ ಯೋಗವಿದ್ದು, ವೃತ್ತಿಯಲ್ಲಿ ಈ ದಿನ ಆಶಾದಾಯಕವಾಗಿದೆ

ರೈಲು ಪ್ರಯಾಣಿಕರ ಗಮನಕ್ಕೆ! ಶಿವಮೊಗ್ಗ-ಬೆಂಗಳೂರು ಜನಶತಾಬ್ದಿ ಸೇರಿ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!