shivamogga traffic fine ಶಿವಮೊಗ್ಗ : ದಿನಾಂಕ 13.05.2025 ರಂದು ಟ್ರಾಫಿಕ್ ಹೆಲ್ಪ್ಲೈನ್ ನಂಬರ್ ಗೆ ಸಾರ್ವಜನಿಕರೊಬ್ಬರು, ನಗರದಲ್ಲಿ ಸಂಚಾರ ಮಾಡುವ ಖಾಸಗಿ ಬಸ್ ನ ಚಾಲಕ ಮೊಬೈಲ್ನಲ್ಲಿ ಮಾತನಾಡಿಕೊಂಡು ಬಸ್ಸನ್ನು ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವೊಂದನ್ನು ರೆಕಾರ್ಡ್ ಮಾಡಿ ಕಳುಹಿಸಿದ್ದರು. ಈ ವಿಡಿಯೋ ದೃಶ್ಯವನ್ನು ಆಧರಿಸಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ & ಮಂಜುನಾಥ್ ಎ. ಹೆಚ್. ಸಿ., ಪ್ರವೀಣ್ ಪಾಟೀಲ್ ಸಿಹಿಚ್ ಸಿ., ಮಂಜುನಾಥ್ ಪಿಸಿ ಹರೀಶ್ ಪಿಸಿ ಒಳಗೊಂಡ ತಂಡ, ಖಾಸಗಿ ಬಸ್ಸು ಸಮೇತ ಅದರ ಚಾಲಕನನ್ನು ಠಾಣೆಗೆ ಕರೆಯಿಸಿಕೊಂಡಿದ್ದಾರೆ. ಆ ಬಳಿಕ ಚಾಲಕನಿಗೆ 5,000 ದಂಡವನ್ನು ವಿಧಿಸಸಿದ್ದಾರೆ.