army drone footage shows : ಜಮ್ಮು ಮತ್ತು ಕಾಶ್ಮೀರದ ಟ್ರಾಲ್‌ನಲ್ಲಿ ಗುರುವಾರ ಮೂವರು ಉಗ್ರರನ್ನು ಹೊಡೆದು ಉರುಳಿಸಲಾಗಿದೆ. ಭದ್ರತಾ ಪಡೆಗಳೊಂದಿಗೆ ನಡೆದ ಭಾರಿ ಗುಂಡಿನ ಚಕಮಕಿಯಲ್ಲಿ ಮೂವರು ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಇದಕ್ಕೂ ಮೊದಲು ಉಗ್ರರನ್ನು ಬೇಟೆಯಾಡುವ ನಿಟ್ಟಿನಲ್ಲಿ ಇಂಡಿಯನ್ ಆರ್ಮಿ ಡ್ರೋನ್ ಕ್ಯಾಮರಾವನ್ನು ಹಾರಿಸಿದ್ದು, ಅದರಲ್ಲಿ ಉಗ್ರರು ಅವಿತಿರುವ ದೃಶ್ಯಗಳು ಸೆರೆಯಾಗಿವೆ. ಸೇನಾ ಪಡೆಯ ಗುಂಡಿನ ದಾಳಿಯಲ್ಲಿ ಹೆದರಿ, ಸಂದು ಮೂಲೆಯಲ್ಲಿ ಅಡಗಿ ಕುಳಿತಿದ್ದ ಉಗ್ರರು ಆತಂಕದಲ್ಲಿರುವುದು ದೃಶ್ಯದಲ್ಲಿ ಸೆರೆಯಾಗಿದೆ. ಕೈಯಲ್ಲಿ ರೈಫಲ್‌ಗಳನ್ನು ಹಿಡಿದಿದ್ದ ಉಗ್ರರು ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅಡಗಿದ್ದರು. ಇನ್ನೂ ತಮ್ಮನ್ನು ಡ್ರೋನ್ ಕ್ಯಾಮರಾದ ಮೂಲಕ ಸೇನೆ ಗಮನಿಸುತ್ತಿರುವುದನ್ನು ಅರಿತ ಉಗ್ರರು , ಡ್ರೋನ್ ಟಾರ್ಗೆಟ್ ಮಾಡಿ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸೇನಾಪಡೆ ಪ್ರತಿದಾಳಿ ನಡೆಸಿದ್ದು ಮೂವರು ಉಗ್ರರು ಸ್ಪಾಟ್ ಡೆತ್ ಆಗಿದ್ದಾರೆ. ಇವೆಲ್ಲದಕ್ಕಿಂತಲೂ ಮೊದಲು ಉಗ್ರನೊಬ್ಬನಿಗೆ ಶರಣಾಗುವಂತೆ ಅವರ ಸಹೋದರಿಯ ಮೂಲಕ ವಿಡಿಯೋ ಕರೆ ಮಾಡಿಸಿದ್ದರು. ಸೇನೆಯ ಈ ಪ್ರಯತ್ನವೂ ಸಹ ವಿಫಲವಾಗಿತ್ತು.

army drone footage shows jammu kashmir attack video
ಎನ್‌ಕೌಂಟರ್‌ನಲ್ಲಿ ಹತರಾದ ಭಯೋತ್ಪಾದಕರನ್ನು ಆಸಿಫ್ ಅಹ್ಮದ್ ಶೇಖ್, ಅಮೀರ್ ನಜೀರ್ ವಾನಿ ಮತ್ತು ಯಾವರ್ ಅಹ್ಮದ್ ಭಟ್ ಎಂದು ಗುರುತಿಸಲಾಗಿದೆ . ಇವರಲ್ಲರೂ ಸಹ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ನಿವಾಸಿಗಳು. ಇದಕ್ಕೂ ಎರಡು ದಿನ ಮೊದಲು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮೂವರು ಲಷ್ಕರ್-ಎ-ತೈಬಾ ಭಯೋತ್ಪಾದಕರನ್ನು ಹೊಡೆದು ಉರಳಿಸಿತ್ತು. ಆ ಘಟನೆಯಲ್ಲಿ ಶೋಪಿಯಾನ್ ನಿವಾಸಿಗಳಾದ ಶಾಹಿದ್ ಕುಟ್ಟಯ್ ಮತ್ತು ಅದ್ನಾನ್ ಶಫಿ ಸಾವನ್ನಪ್ಪಿದ್ದರು.
ಇವರು ಬಿಜೆಪಿ ಸರ್ಪಂಚ್ ಹತ್ಯೆ ಹಾಗೂ ರೆಸಾರ್ಟ್ ಅಟ್ಯಾಕ್ನಲ್ಲಿ ಶಾಮೀಲಾಗಿದ್ದರು. ಅಲ್ಲದೆ ಕುಟ್ಟಯ್ ಪಾಕಿಸ್ತಾನದ ಲಿಂಕ್ ಹೊಂದಿದ್ದ. ಸದ್ಯದ ಮಾಹಿತಿ ಪ್ರಕಾರ, ಸೇನೆಯು ಇನ್ನಷ್ಟು ಕೂಂಬಿಂಗ್ ನಡೆಸ್ತಿದ್ದು, ಉಗ್ರರಿಗಾಗಿ ತೀವ್ರ ಶೋಧ ನಡೆಸ್ತಿದೆ.
