ಸಿಟಿಯಲ್ಲೆ ಮನೆ ಮುಂದಿದ್ದ ಶ್ರೀಗಂಧ ಮರ ಕದ್ದರು!/ ಹುಡುಗ,ಹುಡುಗಿ ಮೆಸೇಜ್ , ದೊಡ್ಡವರ ಕಿತ್ತಾಟ/ ಪ್ರಕ್ಲಾಮೇಷನ್​​ ಆಸಾಮಿ ಅರೆಸ್ಟ್

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 10  2025: ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಅಪರಾಧ ಘಟನೆಗಳಿಗೆ ಸಂಬಂಧಿಸಿದ ಸಂಕ್ಷಿಪ್ತ ವರದಿ ಇಲ್ಲಿದೆ

ಜಯನಗರದಲ್ಲಿ ಗಂಧದ ಮರ ಕಳವು 

ಶಿವಮೊಗ್ಗ ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮನೆಯೊಂದರ ಮುಂಭಾಗದಲ್ಲಿದ್ದ ಗಂಧದ ಮರವನ್ನು ಕಳ್ಳತನ ಮಾಡಲಾಗಿದೆ. ಸಿಟಿ ಮಧ್ಯೆದಲ್ಲಿಯೇ ಶ್ರೀಗಂಧದ ಮರವನ್ನು ಕಳ್ಳತನ ಮಾಡಿರುವುದು ಅಚ್ಚರಿ ಮೂಡಿಸಿದೆ. ಈ ಸಂಬಂಧ ದೂರುದಾರರು ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿದ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪ್ರಕರಣದ ವಿಚಾರಣೆ ನಡೆಸಿದೆ. 

- Advertisement -
shivamogga today short news
shivamogga today short news

ಮೆಸೇಜ್ ವಿಚಾರಕ್ಕೆ ಕಿರಿಕ್

ಇತ್ತ ಭದ್ರಾವತಿ ಹೊಸಮನೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನೆರೆಹೊರೆಯ ಹುಡುಗ ಹುಡುಗಿ ನಡುವೆ ಮೆಸೇಜ್​ ಚಾಟಿಂಗ್ ನಡೆಯುತ್ತಿದೆ ಎಂಬ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆಯಾಗಿದೆ. ಪರಸ್ಪರ ಮೆಸೇಜ್ ಮಾಡುತ್ತಿದ್ದವರ ವಿಷಯದಲ್ಲಿ ಎರಡು ಮನೆಯ ಕುಟುಂಬಸ್ಥರು ಕಿತ್ತಾಡಿಕೊಂಡಿದ್ದು, ಸ್ಥಳಕ್ಕೆ ಪೊಲೀಸರು ಬಂದು ವಿಚಾರವನ್ನು ಇತ್ಯರ್ಥಗೊಳಿಸಿದ್ದಾರೆ.  

Money Transfer Fraud  Street Dog Attack Job Scam Areca Nut TheftPocket Picking Incident shivamogga cyber crime Man Killed by Own Buffaloshivamogga
Money Transfer Fraud Street Dog Attack  Job Scam Areca Nut TheftIncident shivamogga cyber crime Man Killed by Own Buffaloshivamogga Thirthahalli car accident Auto bike accident Shivamogga news Shivamogga road accidentChatpat newstheft case  Theft caseTraffic Diversion

ಪ್ರಕಾಮೇಷನ್​ ವಾರಂಟ್ ಆಸಾಮಿ ಅರೆಸ್ಟ್

ಇನ್ನೂ ಸಾಗರ ಪೊಲೀಸರು ಇತ್ತೀಚೆಗೆ ಕೋರ್ಟ್​ ವಾರಂಟ್​ ಇದ್ದರೂ ವಿಚಾರಣೆಗೆ ಹಾಜರಾಗದ ವ್ಯಕ್ತಿಗಳನ್ನು ಹುಡುಕಿ ಹುಡುಕಿ ಕರೆದುಕೊಂಡು ಬಂದು ಕೋರ್ಟ್​ ಮುಂದೆ ಹಾಜರುಪಡಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ಮಹಿಳೆಯೊಬ್ಬರನ್ನು ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಸಾಗರದ PCJ & JMFC ನ್ಯಾಯಾಲಯ  2018 ರಲ್ಲಿ ಕೇಸ್​ಗ ವೊಂದರಲ್ಲಿ ಪ್ರಕಾಮೇಷನ್ ವಾರಂಟ್ ಆಗಿದ್ದವರನ್ನು ಪೊಲೀಸರು ಹುಡುಕಿ ಕರೆತಂದು ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.

 ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ! shivamogga today short news and events  shivamogga today short news

Share This Article
Leave a Comment

Leave a Reply

Your email address will not be published. Required fields are marked *