Shivamogga to Mantralayam Padayatra : july 10, ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಅರ್ಚಕ ಪವನ್ ಭಟ್ ಪಾದಯಾತ್ರೆ

Shivamogga to Mantralayam Padayatra : july 10, ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಅರ್ಚಕ ಪವನ್ ಭಟ್ ಪಾದಯಾತ್ರೆ

ನಾಡಿನ ಸಮಸ್ತ ಜನತೆಯ ಒಳಿತಿಗಾಗಿ ಶಿವಮೊಗ್ಗದ ಅರ್ಚಕರೊಬ್ಬರು ಶಿವಮೊಗ್ಗದಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಇಂದು ಪಾದಯಾತ್ರೆ ಹೊರಟಿದ್ದಾರೆ.

ಅರ್ಚಕ ಪವನ್​ ಭಟ್​ ಕಳೆದ ಎರಡು ವರ್ಷದಿಂದ ಅವರು ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ.  ನಾಡಿನ ಸಮಸ್ತ ಜನರ ಹಾಗೂ ತಮ್ಮ ಕುಟುಂಬದ ಆರೋಗ್ಯ ವೃದ್ದಿಗಾಗಿ ಈ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ.

ಈ ಕುರಿತು ಮಾತನಾಡಿದ ಪವನ್​ ಕುಮಾರ್​ ಭಟ್​  ಇದು ನನ್ನ 2 ನೇ ವರ್ಷದ ಪಾದಯಾತ್ರೆಯಾಗಿದೆ. ಇವತ್ತು ಹೊರಟರೆ ಮಂತ್ರಾಲಯಕ್ಕೆ ತಲುಪಲು ಸರಿಸುಮಾರು 13 ದಿನ ಬೇಕಾಗುತ್ತದೆ. ಅಲ್ಲಿಗೆ ತೆರಳಿ ಅಲ್ಲಿಂದ ನಾನು ರೈಲಿನ ಮೂಲಕ ಪ್ರಯಾಗ್​ ರಾಜ್​ ಹಾಗೂ ರಾಜಸ್ಥಾನ್​ಗೆ ತೆರಳುತ್ತೇನೆ. ನನ್ನ ಉಸಿರು ಇರುವವರೆಗೂ ನಾನೂ ಪ್ರತಿ ವರ್ಷ ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುತ್ತೇನೆ ಎಂದಿದ್ದಾರೆ.

shivamogga to mantralayam padayatra ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟಿರುವ ಅರ್ಚಕರು
shivamogga to mantralayam padayatra ಶಿವಮೊಗ್ಗದಿಂದ ಮಂತ್ರಾಲಯಕ್ಕೆ ಪಾದಯಾತ್ರೆ ಹೊರಟಿರುವ ಅರ್ಚಕರು

Leave a Comment