KARNATAKA NEWS/ ONLINE / Malenadu today/ May 27, 2023 SHIVAMOGGA NEWS
ಶಿವಮೊಗ್ಗ / KSRTC/ Shivamogga banglore bus/ ನಿರೀಕ್ಷೆಯಂತೆಯೇ ಶಿವಮೊಗ್ಗಕ್ಕೂ ಕೆಎಸ್ಆರ್ಸಿ ರಸ್ತೆಗಿಳಿಸಿರುವ ಇ-ಬಸ್ಸುಗಳ (e bus) ಸೇವೆ ಲಭ್ಯವಾಗಿದೆ. ನೂತನ ಹವಾ ನಿಯಂತ್ರಿತ ಇ-ಬಸ್ಸುಗಳ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ.
ಒಟ್ಟಾರೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಸುಸರ್ಜಿತವಾದ ನೂತನ ಹವಾ ನಿಯಂತ್ರಿತ 10 ಇ-ಬಸ್ಸುಗಳನ್ನು ಶಿವಮೊಗ್ಗ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ದಿನಾಂಕ:27.05.2023ರಂದು ಅಂದರೆ ಇವತ್ತು ಒಂದು ಇ-ಬಸ್ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ತನ್ನ ಪ್ರಯಾಣವನ್ನು ಆರಂಭಿಸಿದೆ. ಉಳಿದ 9 ಬಸ್ಗಳ ಪ್ರಯಾಣವನ್ನು ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ (ksrtc shivamogga to bangalore) ಶೀಘ್ರದಲ್ಲಿ ಪ್ರಾರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಿಕೆಟ್ ದರ ಎಷ್ಟು (shimoga to bangalore ksrtc bus ticket cost)
ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ಓಡಾಡುವ ಇ-ಬಸ್ಸಿನಲ್ಲಿ ಟಿಕೆಟ್ ದರ ರೂ.600/-ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಈ ಬಸ್ಗಳಿಗೆ ಆನ್ಲೈನ್ ಬುಕ್ಕಿಂಗ್ ವ್ಯವಸ್ಥೆ (shivamogga to bangalore bus booking)ಲಭ್ಯವಿದ್ದು, (https://awatar.ksrtc.in) ನಲ್ಲಿ ಟಿಕೆಟ್ ಬುಕ್ ಮಾಡಬಹುದಾಗಿದೆ.
ಹಿಂದಿನಿಂದ ಬಂದು ಡಿಕ್ಕಿ ಹೊಡೆಯುತ್ತಾರೆ ಹುಷಾರ್! ಭದ್ರಾವತಿ ರಸ್ತೆಯಲ್ಲಿ ಸ್ವಲ್ಪದರಲ್ಲಿಯೇ ಉಳಿತು ಜೀವ! ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ!
ಭದ್ರಾವತಿ/ ಬೈಕ್ನಲ್ಲಿ ಹೋಗುತ್ತಿದ್ದ ಇಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದು ಸ್ಪೀಡಾಗಿ ಮುಂದಕ್ಕೆ ಹೋದ ಘಟನೆಯೊಂದರ ವಿಡಿಯೋ ಇದೀಗ ಹೊರಬಿದ್ದಿದೆ. ಮಾಧ್ಯಮವೊಂದಕ್ಕೆ ಲಭ್ಯವಾದ ವಿಡಿಯೋದಲ್ಲಿ ಕಾಣುತ್ತಿರುವ ದೃಶ್ಯ ಭದ್ರಾವತಿಯದ್ದು ಎಂದು ಹೇಳಲಾಗಿದೆ.
ಇಷ್ಟಕ್ಕೂ ನಡೆದಿದ್ದೇನು?
ಬೈಕ್ನಲ್ಲಿ ಇಬ್ಬರು ಸವಾರರು ಹೋಗುತ್ತಿರುತ್ತದೆ. ಅವರ ಎಡಭಾಗದಲ್ಲಿ ಒಂದು ಒಮಿನಿ ಹೋಗುತ್ತಿರುತ್ತದೆ. ಇನ್ನೊಂದು ಭಾಗದಲ್ಲಿ ಕಾರೊಂದು ಓವರ್ ಟೇಕ್ ಮಾಡಲು ಟ್ರೈ ಮಾಡುತ್ತಾನೆ. ಈ ವೇಳೆ ಬೈಕ್ಗೆ ಡಿಕ್ಕಿ ಹೊಡೆದ ಕಾರು, ಅಲ್ಲಿಂದ ಎಸ್ಕೇಪ್ ಆಗುತ್ತದೆ. ಈ ಘಟನೆ ಹಿಂದೆ ಬರುತ್ತಿದ್ದ ಕಾರಿನ ಡ್ಯಾಶ್ ಬೋರ್ಡ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.
ಕೃಷ್ಣ ಮೂರ್ತಿ ಮತ್ತು ಸಂತೋಷ್ ಎಂಬವರು, ಶಿವಮೊಗ್ಗದಿಂದ ತರೀಕೆರೆಗೆ ಬೈಕಿನಲ್ಲಿ ತೆರಳುತ್ತಿದ್ದರು. ಭದ್ರಾವತಿ ಬೈಪಾಸ್ ರಸ್ತೆಯ ಸಿದ್ಧಾಪುರದ ಬಳಿ ಈ ಘಟನೆ ಸಂಭವಿಸಿದೆ.ಘಟನೆಯಲ್ಲಿ ಬೈಕ್ಗೆ ಡಿಕ್ಕಿ ಹೊಡೆದ ಬೆನ್ನಲ್ಲೆ ಐ10 ಕಾರು ಅಲ್ಲಿಂದ ಓವರ್ ಸ್ಪೀಡನಲ್ಲಿ ತೆರಳಿದೆ.
ಹಿಟ್ ಅಂಡ್ ರನ್ ಅಪಘಾತದ ದೃಶ್ಯ ಬೈಕ್ ಹಿಂಬದಿಯಲ್ಲಿ ಬರುತ್ತಿದ್ದ ಮೈಸೂರು ಮೂಲದ ದೀಪಕ್ ಎಂಬವರ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ (dash cam) ಸೆರೆಯಾಗಿದೆ