shivamogga theft case : ಮನೆ ಮಾರುವುದಾಗಿ ನಂಬಿಸಿ  45 ಲಕ್ಷ ರೂಪಾಯಿ ವಂಚಿಸಿದ ಖತರ್ನಾಕ್​ ಮಹಿಳೆ | ಏನಿದು ಘಟನೆ

shivamogga theft case ಮಹಿಳೆಯೊಬ್ಬರು ತನ್ನ ಮನೆ ಮಾರುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 45 ಲಕ್ಷ ರೂಪಾಯಿಯಷ್ಟು ಹಣ ಪಡೆದು  ವಂಚನೆ ಮಾಡಿರುವ ಘಟನೆ ವಿನೋಬಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

shivamogga theft case : ಏನಿದು ಪ್ರಕರಣ

 ಶಿವಮೊಗ್ಗ ಟೌನ್​​ ನಿವಾಸಿ ಸೋಮೇಶ್ವರ್​​ ಎಂಬುವವರು ವಿದ್ಯಾನಗರದ ನಿವಾಸಿ ಮಹಿಳೆಯೊಬ್ಬರಿಂದ ಮನೆ ತೆಗೆದುಕೊಳ್ಳಲು ನಿರ್ಧರಿಸಿದ್ದರು. ಇದರ ಸಲುವಾಗಿ ಇಬ್ಬರ ನಡುವೆ ಮಾತುಕತೆ ನಡೆದು ಕೊನೆಗೆ ಆ ಮಹಿಳೆ 75 ಲಕ್ಷ ರೂಪಾಯಿಗೆ ಮನೆ ಮಾರುವುದಾಗಿ ಸೋಮೇಶ್ವರ್​ ಅವರಿಗೆ ತಿಳಿಸಿದ್ದರು. ಈ ಹಿನ್ನೆಲೆ ಸೋಮೇಶ್ವರ್​ ಮೊದಲ ಹಂತದಲ್ಲಿ 10 ಲಕ್ಷ ರೂಪಾಯಿಯನ್ನು ನೀಡಿದ್ದರು. ನಂತರ ಮಹಿಳೆ  35 ಲಕ್ಷ ರೂಪಾಯಿ ಹಣವನ್ನು ಸಬ್​ ರಿಜಿಸ್ಟ್​​ರ್​ ಆಫಿಸ್​ ಬಳಿ  ತಂದು ಕೊಡಿ ಅಲ್ಲಿ  ನಾನು ಮನೆಯನ್ನು ರಿಜಿಸ್ಟರ್​ ಮಾಡಿಸಿ ಕೊಡುತ್ತೇನೆಂದು ಸೋಮೇಶ್ವರ್​ಗೆ ನಂಬಿಸಿದ್ದರು. ಇದರಿಂದಾಗಿ  ಸೋಮೇಶ್ವರ್​  35 ಲಕ್ಷ ರೂಪಾಯಿಯನ್ನು ತಂದಿದ್ದರು. ಆಗ ಸಬ್​ ರಿಜಿಸ್ಟ್​​ರ್ ಆಫೀಸ್​ ಬಳಿ  ಕಾರಿನಲ್ಲಿ ಬಂದ ಮಹಿಳೆ ಸೋಮೇಶ್ವರ್​ ಬಳಿ ಇದ್ದ 35 ಲಕ್ಷ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. 

ಇತ್ತ ಮನೆಯೂ ಇಲ್ಲದೆ ಹಣವನ್ನೂ ಕಳೆದುಕೊಂಡ ಸೋಮೇಶ್ವರ್​​​ ವಿನೋಬಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇದೀಗ ಕಳ್ಳರ ಪತ್ತೆಗಾಗಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು