indian railway news ರೈಲು ದುರಂತ 5 ಜನ ಪ್ರಯಾಣಿಕರ ಸಾವು, ಹಲವರಿಗೆ ಗಾಯ
ಥಾಣೆ : ಕಿಕ್ಕಿರಿದು ತುಂಬಿದ್ದ ರೈಲಿನಿಂದ ಬಿದ್ದು ಐವರು ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಈ ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
indian railway news ಜಿಲ್ಲೆಯ ಮುಂಬ್ರಾ ಠಾಣೆ ಬಳಿ ಈ ದುರ್ಘಟನೆ ನಡೆದಿದ್ದು, ಸುದ್ದಿ ತಿಳಿದ ಕೂಡಲೇ ಥಾಣೆ ಜಿಆರ್‌ಪಿ (ಸರ್ಕಾರಿ ರೈಲ್ವೆ ಪೊಲೀಸ್) ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅರ್ಚನಾ ದುಸಾನೆ ಸ್ಥಳಕ್ಕೆ ದೌಡಾಯಿಸಿದರು. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣದಿಂದ ಕಾಸರ ಕಡೆಗೆ ಹೋಗುತ್ತಿದ್ದ ಜನರಿಂದ ತುಂಬಿ ತುಳುಕುತ್ತಿದ್ದ ಲೋಕಲ್ ರೈಲಿನಿಂದ ಕೆಳಗೆ ಬಿದ್ದು ಕೆಲ ಪ್ರಯಾಣಿಕರು ಸಾವನ್ನಪ್ಪಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
9th June 2025 Monday
Accident At Mumbra Railway Station Around 9 Am In Morning A Few People Had Fallen From Train And Were Badly Injured. Does Someone Has More Details About It ? @Central_Railway @RailwaySeva @RailMinIndia pic.twitter.com/GUR7xFNQiw— khalid Chougle (@ChougleKhalid) June 9, 2025
ಈ ದುರಂತಕ್ಕೆ ರೈಲಿನ ಅತಿಯಾದ ಜನದಟ್ಟಣೆಯೇ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.

Z