Chilur double attack/ ಚೀಲೂರು ಸ್ಪಾಟ್​ಗೆ ಶಿವಮೊಗ್ಗ ಎಸ್​ಪಿ ಭೇಟಿ! ಅಣ್ಣಿ ಆರೋಪಿಗಳ ಮೇಲೆ ಅಟ್ಯಾಕ್​ ಮಾಡಿದವರು ಸೆರೆಂಡರ್ ಆಗಿಲ್ಲ! ಬಂಧನ ಎಂದರು ದಾವಣಗೆರೆ ಎಸ್​ಪಿ! ಏನಿದು ಡಿಟೇಲ್ಸ್​

Malenadu Today

Chilur  double attack/ ಶಿವಮೊಗ್ಗದ ಹಂದಿ ಅಣ್ಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಕೋರ್ಟ್​ಗೆ ಹಾಜರಾಗಿ ವಾಪಾಸ್ಸಾಗುತ್ತಿದ್ದ ವೇಳೆ, ಮಧು ಹಾಗೂ ಆಂಜನೇಯನ ಮೇಲೆ  ಚೀಲೂರಿನ ಗೋವಿನ ಕೋವಿ ಬಳಿಯಲ್ಲಿ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿತ್ತು. ಮೊನ್ನೆ ಮಾರ್ಚ್​ 15 ರಂದು ನಡೆದಿದ್ದ ಘಟನೆಯಲ್ಲಿ  ಅಂದು ರಾತ್ರಿ ಆರೋಪಿಗಳು ಹೊನ್ನಾಳಿಯ ಶಿಗ್ಗಾವಿಯಲ್ಲಿ ಪೊಲೀಸರಿಗೆ ಶರಣಾಗಿದ್ದರು ಎಂಬ ಮಾಹಿತಿ ಲಭ್ಯವಾಗಿತ್ತು. ಆದರೆ ಅವರು ಶರಣಾಗತಿ ಆಗಿಲ್ಲ, ಅವರನ್ನ ಅರೆಸ್ಟ್ ಮಾಡಲಾಗಿದೆ ಎಂದು ದಾವಣಗೆರೆ ಎಸ್​ಪಿ ಹೇಳಿದ್ದಾರೆ. 

Malenadu Today

ಈ ಸಂಬಂಧ ನಿನ್ನೆ ಸುದ್ದಿ ಮಾದ್ಯಮಗಳ ಜೊತೆಗೆ ಮಾತನಾಡಿರುವ ದಾವಣಗೆರೆ ಜಿಲ್ಲಾ ರಕ್ಷಣಾಧಿಕಾರಿ ಸಿ.ಬಿ.ರಿಷ್ಯಂತ್, ಬಂಧಿತರನ್ನು ತಮಿಳು ಸುನೀಲ್, ವೆಂಕಟೇಶ್, ಅಭಿಲಾಷ್ ಹಾಗೂ ಪವನ್ ಎಂದು ತಿಳಿಸಿದ್ದಾರೆ ಅಲ್ಲದೆ,   ಆರೋಪಿಗಳನ್ನ  ಶಿಗ್ಗಾವಿಯಲ್ಲಿ ಬಂಧಿಸಲಾಗಿದೆ. ಅವರು ಶರಣಾಗಿಲ್ಲ,  ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಗಳನ್ನು ಸಂಬಂಧಪಟ್ಟ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆಯ ನಂತರ ಇನ್ನುಳಿದಂತೆ ಮಾಹಿತಿ ಬಹಿರಂಗಗೊಳ್ಳಲಿದೆ ಎಂದಿದ್ದಾರೆ. 

READ / ಜನರ ಭಾವನೆಗಳನ್ನು ನಾನು ಹೇಳೋನೆ! ಎಷ್ಟು ಪ್ರತಿಭಟನೆ ಮಾಡಿದರೂ ಎದುರಿಸುತ್ತೇನೆ! ಅಜಾನ್ ಕುರಿತಾದ ಹೇಳಿಕೆಗೆ ಈಶ್ವರಪ್ಪನವರ ಉತ್ತರ!

Malenadu Today

ಘಟನಾ ಸ್ಥಳಕ್ಕೆ ಶಿವಮೊಗ್ಗ ಎಸ್​ಪಿ ಭೇಟಿ

ಇದರ ನಡುವೆ ಶಿವಮೊಗ್ಗ ರೌಡಿಸಂಗೆ ಸಂಬಂಧಿಸಿದ ಘಟನೆ ಇದಾಗಿದ್ದರಿಂದ ಶಿವಮೊಗ್ಗ ಎಸ್​ಪಿ ಮಿಥುನ್​ ಕುಮಾರ್​ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಚೆನ್ನಗಿರಿ ಡಿವೈಎಸ್​ಪಿ ಹಾಗೂ ದಾವಣಗೆರೆ ಎಸ್​ಪಿಯವರ ಭೇಟಿ ಸಂದರ್ಭದಲ್ಲಿಯೇ ಸ್ಥಳಕ್ಕೆ ತೆರಳಿದ್ದ ಎಸ್​​ಪಿಯುವರು ಘಟನೆ ಹಾಗೂ ಅದರ ಹಿನ್ನೆಲೆ ಸಂಬಂಧ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. 

READ |ಸೇಮ್ ಅಟ್ಯಾಕ್​ !? ಚೀಲೂರಿನ ಗೋವಿನ ಕೋವಿಯಲ್ಲಿ ನಡೆದಿದ್ದೇನು? ಆಂಜನೇಯ ಸಾವು! ಮಧು ಗಂಭೀರ

Malenadu Today

ಘಟನೆಯ ಡಿಟೇಲ್ಸ್​!

ಶಿವಮೊಗ್ಗದ ಹಂದಿ ಅಣ್ಣಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಧು ಹಾಗೂ ಆಂಜನೇಯ, ಶಿವಮೊಗ್ಗದ ನ್ಯಾಯಾಲಯಕ್ಕೆ ಹಾಜರಾಗಿ, ಊರಿಗೆ ಬೈಕ್‌ನಲ್ಲಿ ಮರಳುತ್ತಿದ್ದರು. ಈ ವೇಳೆ ಅವರ ಮೇಲೆ  ಗೋವಿನಕೋವಿ  ಬಳಿ  ತಲ್ವಾರ್‌ನಿಂದ ದಾಳಿ ಮಾಡಲಾಗಿತ್ತು.  ಈ ವೇಳೆ ಆಂಜನೇಯ ಸ್ಥಳದಲ್ಲಿಯೆ ಸಾವನ್ನಪ್ಪಿದ್ದರೇ, ಮಧುವನ್ನ  ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

READ |ಇಲ್ಲಿದೆ ನೋಡಿ ವಿಷಯ!! ಡಬ್ಬಲ್ ಮರ್ಡರ್ ಅಟ್ಯಾಕ್! ಮಧು ಬದುಕಿದ್ದು ಹೇಗೆ? ಶಿವಮೊಗ್ಗ ಸಿಟಿಯಲ್ಲಿಯೇ ನಡೆಯುತ್ತಿತ್ತಾ ಕೃತ್ಯ

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynews #firstnewsshivamogga shivamogga, Chilur  double attack, cow gun, pig anni murder case: Davanagere SP C B Ryshyanth, Shivamogga SP Mithun Kumar, Chennagiri DySP, Honnali police, Shiggavi police, accused, Madhu, Anjaneya, Banuvalli, Cheylur Honnali-Shivamogga road, Hebbettu Manja, Navule Ananda, Chikkal Ramesh, Ambu Anil, ಚೀಲೂರು ಡಬ್ಬಲ್ ಅಟ್ಯಾಕ್, ಗೋವಿನ ಕೋವಿ, ಹಂದಿ ಅಣ್ಣಿ ಕೊಲೆ ಪ್ರಕರಣದ ಆರೋಪಿಗಳ ಮೇಲೆ ದಾಳಿ,  ದಾವಣಗೆರೆ ಎಸ್​ಪಿ ಸಿ.ಬಿ.ರಿಷ್ಯಂತ್, ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್, ಚೆನ್ನಗಿರಿ ಡಿವೈಎಸ್​ಪಿ, ಹೊನ್ನಾಳಿ ಪೊಲೀಸ್​, ಶಿಗ್ಗಾವಿ ಪೊಲೀಸರು, ಆರೋಪಿಗಳು, ಮಧು , ಆಂಜನೇಯ, ಬಾನುವಳ್ಳಿ, ಚೀಲೂರು ಹೊನ್ನಾಳಿ-ಶಿವಮೊಗ್ಗ ರಸ್ತೆ, ಹೆಬ್ಬೆಟ್ಟು ಮಂಜ, ನವುಲೆ ಆನಂದ, ಚಿಕ್ಕಲ್ ರಮೇಶ, ಅಂಬು ಅನಿಲ, 

Share This Article