ಶಿವಮೊಗ್ಗ ಸ್ವಿಫ್ಟ್ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಸಾಗಾಟ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ದೊಡ್ಡಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಅಲ್ತಾಪ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಶಿವಮೊಗ್ಗ ನಗರದ ತೀರ್ಥಹಳ್ಳಿ ರಸ್ತೆಯಲ್ಲಿರುವ ನಮೋಶಂಕರ ಲೇಔಟ್ ಒಳಗೆ ಒಬ್ಬ ವ್ಯಕ್ತಿ ಮಾರುತಿ ಸ್ವಿಫ್ಟ್ ಸಿಲ್ವರ್ ಕಲರ್ ಕಾರಿನಲ್ಲಿ ಗಾಂಜಾ ಇರಿಸಿಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ದೊಡ್ಡಪೇಟೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು.ಮಾಹಿತಿಯ ಮೇರೆಗೆ, ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನಾರಾಯಣ ಮಧುಗಿರಿ ನೇತೃತ್ವದ ವಿಶೇಷ ತಂಡವು ಸ್ಥಳಕ್ಕೆ ದಾಳಿ ಮಾಡಿತು. ಸಿಬ್ಬಂದಿಗಳಾದ ಎಎಸ್‌ಐ ಚೂಡಾಮಣಿ ಕೆ., ಸಿಹೆಚ್‌ಸಿ ಗೋವರ್ದನ, ಸಿಹೆಚ್‌ಸಿ ಸಂದೀಪ ಎಸ್ ಡಿ., ಸಿಪಿಸಿ ಗುರುನಾಯ್ಕ, ಸಿಪಿಸಿ ಚಂದ್ರನಾಯ್ಕ, ಸಿಪಿಸಿ ಗಣೇಶ, ಸಿಪಿಸಿ ಪ್ರಶಾಂತ್ ಶೆಟ್ಟಣ್ಣನವರ್ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ದಾಳಿಯ ಸಂದರ್ಭದಲ್ಲಿ, ಸ್ಥಳಕ್ಕೆ ಆಗಮಿಸಿದ ಇಲಾಖೆಯ ಹಿರಿಯ ಅಧಿಕಾರಿಗಳಾದ ಡಿವೈಎಸ್‌ಪಿ ಬಾಬು ಅಂಜನಪ್ಪ ಮತ್ತು SOCO (Scene of Crime Officer) ಅಧಿಕಾರಿಗಳ ಸಮ್ಮುಖದಲ್ಲಿ ಆರೋಪಿತನನ್ನು ವಶಕ್ಕೆ ಪಡೆಯಲಾಯಿತು. ಬಂಧಿತ ಆರೋಪಿಯನ್ನು ಸಾಗರ ಟೌನ್‌ನ ಇಬ್ರಾಹಿಂ ಮಸೀದಿ ಹತ್ತಿರದ ಅಣಲೆಕೊಪ್ಪ, ಶಿರುವಾಳ ರಸ್ತೆಯ ನಿವಾಸಿ ಮೊಹಮ್ಮದ್ ಅಲ್ತಾಪ್ ಎಂದು ಗುರುತಿಸಲಾಗಿದೆ. ಆತನ ಬಳಿ ಇದ್ದ ಸ್ವಿಫ್ಟ್ ಸಿಲ್ವರ್ ಕಲರ್ ಕಾರಿನಿಂದ 4 ಕೆ.ಜಿ. 130 ಗ್ರಾಂ ತೂಕದ, ಸುಮಾರು 2,00,000 ರೂಪಾಯಿ ಮೌಲ್ಯದ ಗಾಂಜಾ ಸೊಪ್ಪನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ NDPS (ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟೆನ್ಸಸ್) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Shivamogga Police Seize ₹2 Lakh Worth Ganja
