ಶಿವಮೊಗ್ಗ : ಶಿವಮೊಗ್ಗ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಬ್ಲೂಮೂನ್ ವೈನ್ ಶಾಪ್ ಎದುರು ಫುಟ್‌ಪಾತ್ ಮೇಲೆ ಸುಸ್ತಾಗಿ ಮಲಗಿದ್ದ ಅಂದಾಜು 35 ರಿಂದ 40 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

Unidentified Man ದೊಡ್ಡಪೇಟೆ ಪೊಲೀಸರ ಪ್ರಕಟಣೆಯ ಪ್ರಕಾರ, ಈ ವ್ಯಕ್ತಿಯನ್ನು ಆಂಬ್ಯುಲೆನ್ಸ್ ಮೂಲಕ ತಕ್ಷಣ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಡಿಸೆಂಬರ್ 11 ರಂದು ಅವರು ಕೊನೆಯುಸಿರೆಳೆದಿದ್ದಾರೆ. ಮೃತ ವ್ಯಕ್ತಿಯ ಹೆಸರು, ವಿಳಾಸ ಅಥವಾ ಅವರ ವಾರಸುದಾರರ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಮೃತ ವ್ಯಕ್ತಿಯ ಚಹರೆ: ಅವರು ಸುಮಾರು 5.5 ಅಡಿ ಎತ್ತರವಿದ್ದು, ಎಣ್ಣೆಗೆಂಪು ಮೈಬಣ್ಣ, ದುಂಡುಮುಖ ಮತ್ತು ತೆಳುವಾದ ಮೈಕಟ್ಟು ಹೊಂದಿರುತ್ತಾರೆ. ಅವರ ದೇಹದ ಮೇಲೆ ವಿಶಿಷ್ಟವಾದ ಹಚ್ಚೆ ಗುರುತುಗಳಿವೆ. ಎದೆಯ ಮೇಲೆ “ಹುಲುಗಪ್ಪ” ಮತ್ತು “ಅಂಜನಪ್ಪ” ಎಂಬ ಹೆಸರುಗಳನ್ನು, ಎಡಗೈನ ಒಳಭಾಗದಲ್ಲಿ “ಈರಮ್ಮ” ಹಾಗೂ ಬಲಗೈನ ಒಳಭಾಗದಲ್ಲಿ ‘ಅಪ್ಪ’ ಎಂಬ ಪದ ಮತ್ತು ತ್ರಿಶೂಲದ ಚಿಹ್ನೆಯನ್ನು ಹಚ್ಚೆ ಹಾಕಲಾಗಿದೆ. ಅವರು ಮೈಮೇಲೆ ಬಿಳಿಬಣ್ಣದ ಕಪ್ಪು ಚುಕ್ಕೆಯಿರುವ ತುಂಬು ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
ಈ ಮೃತ ವ್ಯಕ್ತಿಯ ವಾರಸುದಾರರ ಬಗ್ಗೆ ಅಥವಾ ಅವರ ವಿಳಾಸದ ಬಗ್ಗೆ ಮಾಹಿತಿ ಇರುವವರು ಕೂಡಲೇ ದೊಡ್ಡಪೇಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಸಂಪರ್ಕ ಸಂಖ್ಯೆಗಳು: 08182-261414 ಅಥವಾ 9916882544.
Unidentified Man Found on BH Road Shivamogga








