Shivamogga Police Report Shivamogga news / ಶಿವಮೊಗ್ಗದ ಅಪರಾಧ ಲೋಕದಲ್ಲಿ ಪ್ರತಿನಿತ್ಯ ಸಾಕಷ್ಟು ಘಟನೆಗಳು ನಡೆಯುತ್ತಿರುತ್ತವೆ. ಕೆಲವೊಂದು ಪ್ರಕರಣಗಳು ದೊಡ್ಡದಾಗಿ ಸದ್ದುಮಾಡುತ್ತವೆ. ಮತ್ತೆ ಕೆಲವು ಪ್ರಕರಣಗಳು ಹೊರಜಗತ್ತಿಗೆ ತಿಳಿಯದೆ ಮರೆಯಾಗುತ್ತವೆ. ಅಂತಹ ಪ್ರಕರಣಗಳನ್ನು ಇತ್ಯರ್ಥ ಪಡಿಸುವಲ್ಲಿ ಪೊಲೀಸರ ಸಹನೆ ಹಾಗೂ ತಾಳ್ಮೆಯು ಮಹತ್ವದ ಪಾತ್ರವಹಿಸುತ್ತದೆ. ಹೀಗೆ ಪೊಲೀಸರು ಆನ್ ದಿ ಸ್ಪಾಟ್ ಬಗೆಹರಿಸಿದ ಘಟನೆಗಳನ್ನು ತಿಳಿಸುವ ಸಂಕ್ಷಿಪ ವರದಿ ನಿಮ್ಮ ಮಲೆನಾಡು ಟುಡೆಯಲ್ಲಿ
ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ತೆಂಗಿನಕಾಯಿ ಕಳ್ಳತನ ಪ್ರಯತ್ನ Shivamogga Police Report
ಇತ್ತೀಚೆಗೆ ತೆಂಗಿನ ಕಾಯಿ ದರ ಏರಿಕೆಯಾಗುತ್ತಿರುವುದರಿಂದ ಕಾಯಿ ಕಳ್ಳತನದ ಪ್ರಕರಣವೂ ಹೆಚ್ಚಾಗುತ್ತಿದೆ. ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿಯೇ ಈ ಬಗ್ಗೆ ವರದಿಯಾಗಿತ್ತು. ಇದೀಗ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ತೋಟದಲ್ಲಿ ವ್ಯಕ್ತಿಯೊಬ್ಬ ತೆಂಗಿನಕಾಯಿ ಕಳ್ಳತನಕ್ಕೆ ಪ್ರಯತ್ನಿಸುತ್ತಿದ್ದನ್ನು ಗಮನಿಸಿದ ತೋಟದ ಮಾಲೀಕ ಸ್ವತಃ ಆತನೇ ಕಳ್ಳನನ್ನು ಹಿಡಿದು ERV (Emergency Response Vehicle) ಸಿಬ್ಬಂದಿಗೆ ಮಾಹಿತಿ ನೀಡಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದರು.
ಗಂಡನಿಂದಲೆ ಚಿನ್ನದ ಸರ ಕಳ್ಳತನ ಶಂಕೆ
ಇನ್ನೊಂದು ಘಟನೆಯಲ್ಲಿ ಮಹಿಳೆಯೊಬ್ಬರು ತಮ್ಮ ಗಂಡ, ತಮ್ಮ ಅತ್ತೆಯ ಚಿನ್ನದ ಸರವನ್ನು ಕದ್ದಿರಬಹುದು ಎಂದು ಶಂಕಿಸಿ ಪೊಲೀಸರಿಗೆ ಕರೆ ಮಾಡಿದ ಘಟನೆಯೊಂದು ಭದ್ರಾವತಿಯಲ್ಲಿ ನಡೆದಿದೆ. ಈ ಸಂಬಂಧ ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿ, ಪ್ರಕರಣ ಕುರಿತು ಠಾಣೆಗೆ ಬಂಧು ದೂರು ನೀಡುವಂತೆ ಸೂಚಿಸಿದ್ದರು. ಕೇಸ್ ಸದ್ಯ ವಿಚಾರಣಾ ಹಂತದಲ್ಲಿದೆ.

ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕಳ್ಳರು
ಇತ್ತ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದಕ್ಕೆ ನುಗ್ಗಿ ಕಳ್ಳತನ ಯತ್ನಿಸಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ಆರೋಪಿಗಳು ಮಾಲಕೀನ ಜಾಣ್ಮೆಯಿಂದಾಗಿ ಮನೆಯೊಳಗೆ ಸಿಕ್ಕಿ ಹಾಕಿಕೊಂಡಿದ್ದರು. ಈ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು.
Shivamogga Police Report 02 shivamogga news Bhadravathi, Hosamane, and Doddapete Police Station limits. ERV personnel ಶಿವಮೊಗ್ಗ, ಅಪರಾಧ, ಕಳ್ಳತನ, ತೆಂಗಿನಕಾಯಿ ಕಳ್ಳತನ, ಚಿನ್ನದ ಸರ ಕಳ್ಳತನ, ಭದ್ರಾವತಿ, ಹೊಸಮನೆ, ದೊಡ್ಡಪೇಟೆ, 112, ERV, ಪೊಲೀಸ್, crime, Shivamogga, theft, coconut theft, gold chain theft, Bhadravathi, Hosamane, Doddapete, police, Karnataka crime news