Shivamogga police news today / ಶಿವಮೊಗ್ಗ ಸಿಟಿ ರಸ್ತೆಯಲ್ಲಿ Walk and Run  ನಡೆಸಿದ ಎಸ್​ಪಿ ಮಿಥುನ್ ಕುಮಾರ್ & ಟೀಂ

Malenadu Today

SHIVAMOGGA  |  Jan 14, 2024  |    ಶಿವಮೊಗ್ಗ ಜಿಲ್ಲಾ ಪೊಲೀಸ್  ಮಾದಕ ವಸ್ತುಗಳ ಕುರಿತು ಜನಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದೆ. 

Walk and Run 

ಈ  ಹಿನ್ನೆಲೆಯಲ್ಲಿ ಈ ದಿನ ದಿನಾಂಕ 14-01-2024 ರಂದು ಬೆಳಗ್ಗೆ  ಶಿವಮೊಗ್ಗ ನಗರದಲ್ಲಿ Walk and Run (ನಡಿಗೆ ಮತ್ತು ಓಟ) ವನ್ನು ಹಮ್ಮಿಕೊಳ್ಳಲಾಗಿತ್ತು.  

ಎಸ್​ಪಿ ಮಿಥುನ್ ಕುಮಾರ್ /SP Mithun Kumar

ಮಿಥುನ್ ಕುಮಾರ್ ಜಿ ಕೆ ಐಪಿಎಸ್  ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು  Walk and Run ಗೆ ಚಾಲನೆ ನೀಡಿದ್ದಾರೆ.  DAR ಕವಾಯತು ಮೈದಾನದಿಂದ ಪ್ರಾರಂಭಿಸಿ, ಅಶೋಕ ವೃತ್ತ, ಎ ಎ ವೃತ್ತ,  ಕರ್ನಾಟಕ ಸಂಘ,  ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐ ಬಿ ವೃತ್ತದ ಮುಖಾಂತರ ಪುನಃ ಶಿವಮೊಗ್ಗ DAR ಕವಾಯತು ಮೈದಾನಕ್ಕೆ ಬಂದು ಮುಕ್ತಾಯ ಮಾಡಲಾಯಿತು.

ಅನಿಲ್ ಕುಮಾರ್ ಭೂಮರಡ್ಡಿ 

Walk and Run (ನಡಿಗೆ ಮತ್ತು ಓಟ) ನಲ್ಲಿ ಅನಿಲ್ ಕುಮಾರ್ ಭೂಮರಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ,  ಸುರೇಶ್ ಎಂ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಬಿ ಉಪ ವಿಭಾಗ,ಮಂಜುನಾಥ್ ಪೊಲೀಸ್ ಉಪಾಧೀಕ್ಷಕರು (ಪ್ರೊ) ಮತ್ತು ಶಿವಮೊಗ್ಗ ನಗರದ ಪೊಲೀಸ್ ನಿರೀಕ್ಷಕರು, ಪೊಲೀಸ್ ಉಪ ನಿರೀಕ್ಷಕರು, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಭಾಗವಹಿಸಿದ್ದರು.


Share This Article