ನಿನ್ನೆ ಸಾಗರದಲ್ಲಿ ನಡೆದಿದ್ದ ಹಲ್ಲೆ ಯತ್ನಕ್ಕೆ ಕಾರಣವೇ ಬೇರೆ! ಹಗೆತನಕ್ಕೆ ನಾಲ್ಕು ತಿಂಗಳಲ್ಲಿ ನಡೆದ ಘಟನೆಗಳೆ ಪ್ರೇರಣೆ! ಎಸ್​ಪಿ ಮಿಥುನ್​ಕುಮಾರ್​ ಹೇಳಿದ್ದೇನು?

Shivamogga police have arrested the accused in connection with an attempt to assault case that took place in Sagar town yesterday and SP Mithun Kumar said.

ಶಿವಮೊಗ್ಗ ಜಿಲ್ಲೆ ಸಾಗರ ಪಟ್ಟಣದಲ್ಲಿ ನಿನ್ನೆ ನಡೆದಿದ್ದ  ಹಲ್ಲೆ ಯತ್ನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬಜರಂಗದಳ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ ನಡೆದಿದ್ದ ಬಗ್ಗೆ ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದವು. ಇದೀಗ ಶಿವಮೊಗ್ಗ ಎಸ್​ಪಿಯವರು ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. 

BREAKING NEWS/ ಶಿವಮೊಗ್ಗದ ಭೂಪಾಳಂ ರವರ ಮನೆಯಲ್ಲಿ ಶಾರ್ಟ್​ ಸರ್ಕಿಟ್​-ಬೆಂಕಿ/ ಶರತ್​ ಸಾವುಮಗು ಸ್ಥಿತಿ ಗಂಭೀರ

ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದ್ದು ಏನು? 

ಶಿವಮೊಗ್ಗ ಪೊಲೀಸ್ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಘಟನೆಯು ವೈಯಕ್ತಿಕ ದ್ವೇಷದಿಂದ ನಡೆದಿದೆ ಎನ್ನಲಾಗಿದೆ.  ಕೊಲೆ ಯತ್ನ ಆರೋಪದ ಅಡಿಯಲ್ಲಿ ಸಾಗರ ಟೌನ್ ಸ್ಟೇಷನ್​ನಲ್ಲಿ ಐಪಿಸಿ ಸೆಕ್ಷನ್ 307, 149, 506, 504 ಅಡಿ ಕೇಸ್ ದಾಖಲಾಗಿತ್ತು. ಇದೀಗ ಘಟನೆ ಸಂಬಂದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರ ವಿಚಾರಣೆ ವೇಳೆ  ಬಜರಂಗದಳ ಕಾರ್ಯಕರ್ತ ಸುನೀಲ್, ಸಮೀರ್ ಸಹೋದರಿಗೆ ಚುಡಾಯಿಸುತ್ತಿದ್ದನಂತೆ.  ನಾಲ್ಕೈದು ತಿಂಗಳಿನಿಂದ ಆತ ಚುಡಾಯಿಸುತ್ತಿದ್ದು ಈ ಸಂಬಂಧ ಸಮೀರ್​ ಎಚ್ಚರಿಕೆ ನೀಡಿದ್ದ ಎಂದು  ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

ಸಾಗರ ಟೌನ್​ ಘಟನೆ/ ಪೊಲೀಸರ ಕ್ವಿಕ್ ಆ್ಯಕ್ಷನ್​/ ಹಾಲಿ ಶಾಸಕರು- ಮಾಜಿ ಶಾಸಕರು ಹೇಳಿದ್ದೇನು?

ನಾಲ್ಕು ತಿಂಗಳಿನಿಂದ ತಂಗಿಯನ್ನ ಚುಡಾಯಿಸುತ್ತಿದ್ದ 

ಎಸ್ಪಿ ಮಿಥುನ್ ಕುಮಾರ್ ಹೇಳುವಂತೆ ಸಮೀರ್ ಎಂಬಾತನ ತಂಗಿಯನ್ನು ಸುನೀಲ್ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿದ್ದ..ಈ ಬಗ್ಗೆ ಸಮೀರ್ ತನ್ನ ತಂಗಿಯ ತಂಟೆಗೆ ಬರದಂತೆ ಸನೀಲ್ ಗೆ ಹೇಳಿದ್ದ,. ಇದಲ್ಲದೆ ಸುನೀಲ್ ತಂಗಿಯ ನಂಬರ್ ಕೊಡುವಂತೆ ಸಮೀರ್ ಗೆ ಹೇಳಿದ್ದ. ಹಲವು ಬಾರಿ ತಂಗಿಯ ತಂಟೆಗೆ ಬರದಂತೆ ಎಚ್ಚರಿಕೆ ನೀಡಿದ್ರೂ ಚುಡಾಯಿಸೋದನ್ನು ನಿಲ್ಲಿಸಿರಲಿಲ್ಲ. ನೆನ್ನೆ ಸಮೀರ್ ಬೈಕ್ ನಲ್ಲಿ ಬರುವಾಗ ಸುನೀಲ್ ರೇಗಿಸಿದ್ದ. ಹೀಗಾಗಿ ಕುಪಿತಗೊಂಡ ಸಮೀರ್ ತನ್ನ ಬೈಕ್ ನಲ್ಲಿದ್ದ ಮಚ್ಚನ್ನು ತೆಗೆದುಕೊಂಡು ಸುನೀಲ್ ಮೇಲೆ ಹಲ್ಲೆ ನಡೆಸಲು ಮುಂದಾದೆ ಎಂದು ಸಮೀರ್ ವಿಚಾರಣೆಯಲ್ಲಿ ತಿಳಿಸಿರುವುದಾಗಿ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.

ಆರೋಪಿ ಬಂಧನಕ್ಕೆ 3 ತಂಡ/ ಸ್ನೇಹಿತನೇ ಹಲ್ಲೆ ಮಾಡಲು ಕಾರಣವಾದ ಹಗೆತನವೇನು? / ಹಿಂದೂ ಸಂಘಟನೆಗಳು ಹೇಳಿದ್ದೇನು?

ಹುಲ್ಲು ಕೊಯ್ಯುವ ಕತ್ತಿ

ಸಮೀರ್ ಕುರಿಗಾಹಿಯಾಗಿದ್ದು, ಕುರಿಗಳಿಗೆ ಸೊಪ್ಪು ಹುಲ್ಲು ತರಲು ಬೈಕ್ ನಲ್ಲಿ ಮಚ್ಚನ್ನು ಇಟ್ಟುಕೊಂಡಿದ್ದ.ಅದೇ ಮಚ್ಚಿನಿಂದಲೇ ಹಲ್ಲೆ ನಡೆಸಲು ಸಮೀರ್ ಮುಂದಾಗಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ.ಸಮೀರ್ ಜೊತೆ ಇಬ್ಬರು ಆರೋಪಿಗಳಾದ ಇಮಿಯಾನ್ ಮತ್ತು ಮನ್ಸೂರ್ ಇಬ್ಬರನ್ನು ಬಂಧಿಸಿದ್ದು, ಪ್ರಕರಣದಲ್ಲಿ ಇವರಿಬ್ಬರ ಪಾತ್ರದ ಕುರಿತು ವಿಚಾರಣೆ ನಂತರ ತಿಳಿಸುವುದಾಗಿ ಎಸ್ಪಿ ಮಿಥುನ್ ಕುಮಾರ್ ಹೇಳಿದ್ದಾರೆ..

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ / ಸಂಘಟನೆಗಳ ಪ್ರತಿಭಟನೆ

24 ಗಂಟೆಯಲ್ಲಿ ಆರೋಪಿಗಳ ಅರೆಸ್ಟ್​

ಇನ್ನೂ ಆರೋಪಿಗಳನ್ನು ಪೊಲೀಸರು ಕೇವಲ 15 ಗಂಟೆಯಲ್ಲಿ ಅರೆಸ್ಟ್ ಮಾಡಿದ್ದಾರೆ. ಇನ್ನೂ ಆರೋಪಿಗಳು ಸಾಗರದವರೇ ಆದರೂ ಸಹ ಲಾಡ್ಜ್​ನಲ್ಲಿ ಉಳಿದುಕೊಂಡಿದ್ದು ಏಕೆ ಎಂಬುದರ ತನಿಖೆಯನ್ನ ಪೊಲೀಸರು ಮುಂದುವರಿಸಿದ್ದಾರೆ. ಅಲ್ಲದೆ ತಮ್ಮವರಿಗೆ ಸಮಸ್ಯೆಯಾದಾಗ ಪೊಲೀಸರ ಗಮನಕ್ಕೆ ತನ್ನಿ ಅದನ್ನ ಬಿಟ್ಟು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ ಎಂದು ಎಸ್​ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.