ಒಂದೇ ಕರೆಗೆ ಸ್ಥಳಕ್ಕೆ ಬಂದ 112! ಅನುಮಾನಸ್ಪದ ವ್ಯಕ್ತಿ ವಶಕ್ಕೆ, ಎಸ್ಕೆಪ್ ಆಗ್ತಿದ್ದವರಿಗೆ ವಾರ್ನಿಂಗ್, 3 ಪ್ರತ್ಯೇಕ ಪ್ರಕರಣದ ವರದಿ

Shivamogga  | ಶಿವಮೊಗ್ಗ ಜಿಲ್ಲೆಯಲ್ಲಿ 112 ಪೊಲೀಸರು  ಕಳೆದ ಎರಡು ದಿನಗಳಲ್ಲಿ ಮೊಬೈಲ್ ಕಳ್ಳತನ, ಬೋರ್‌ವೆಲ್ ಹೆಸರಿನಲ್ಲಿ ಹಣ ವಂಚನೆ ಮತ್ತು ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವ ಮೂಲಕ ಶಿವಮೊಗ್ಗ ಪೊಲೀಸರು ಸ್ಥಳೀಯವಾಗಿ ಜನರಿಗೆ ನೆರವಾಗಿದ್ದಾರೆ.ಆ ಬಗೆಗಿನ ವಿವರ ಗಮನಿಸುವುದಾದರೆ ಸಂಕ್ಷಿಪ್ತ ವರದಿ ಇಲ್ಲಿದೆ.

ಕೈದಿ ನೋಡೋಕೆ ಅಂತಾ ಶಿವಮೊಗ್ಗ ಜೈಲಿಗೆ ಹೋದ ಮದರಿಪಾಳ್ಯದ ಇಬ್ಬರು ಗೇಟ್​ನಲ್ಲಿಯೇ ಅರೆಸ್ಟ್ ಆದ್ರು!

ಓಲ್ಡ್ ಟೌನ್, ನರ್ಸಿಂಗ್ ಹೋಮ್‌ನಲ್ಲಿ ಮೊಬೈಲ್ ಕಳ್ಳತನ

ಭದ್ರಾವತಿ ಓಲ್ಡ್ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ನರ್ಸಿಂಗ್ ಹೋಮ್ ಒಂದರಲ್ಲಿ ಮೊಬೈಲ್ ಕಳ್ಳತನವಾದ ಘಟನೆ ವರದಿಯಾಗಿದೆ. ನರ್ಸಿಂಗ್ ಹೋಮ್‌ನಲ್ಲಿದ್ದ ವ್ಯಕ್ತಿಯೊಬ್ಬರ ಮೊಬೈಲ್ ಕಾಣೆಯಾಗಿದ್ದು, ಅವರು 112 ಸಹಾಯವಾಣಿಗೆ  ಕರೆ ಮಾಡಿದ್ದರು. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಮೊಬೈಲ್ ಕಳ್ಳತನ ಮಾಡುತ್ತಿರುವುದು ಕಂಡುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಭದ್ರಾವತಿ: ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ ವ್ಯಕ್ತಿ  

ಇನ್ನೂ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೇವಸ್ಥಾನವೊಂದರ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿ ಅನುಮಾನಸ್ಪದ ವ್ಯಕ್ತಿಯನ್ನು ತಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆತ ನೀಡಿದ ಉತ್ತರ ಸಮಂಜಸವಾಗಿರದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ಸ್ಟೆಷನ್​ಗೆ ಕರೆದೊಯ್ದು SHO ಮುಂದೆ ಹಾಜರು ಪಡಿಸಿದರು.

ಶಿವಮೊಗ್ಗ: 112 ಪೊಲೀಸರ ಕಾರ್ಯಾಚರಣೆ - ಕಳ್ಳತನ, ವಂಚನೆ ಪ್ರಕರಣ , Shivamogga Police 112 Action Mobile Theft, Fraud and Suspicious Person Cases Handled Swiftly
ಶಿವಮೊಗ್ಗ: 112 ಪೊಲೀಸರ ಕಾರ್ಯಾಚರಣೆ – ಕಳ್ಳತನ, ವಂಚನೆ ಪ್ರಕರಣ , Shivamogga Police 112 Action Mobile Theft, Fraud and Suspicious Person Cases Handled Swiftly

ಶಿವಮೊಗ್ಗದಲ್ಲಿ ನಡೆದಿದ್ದ 2017ರ ಕೊಲೆ ಕೇಸ್​: ಸೆಷನ್ಸ್​ ಕೋರ್ಟ್ ಜಡ್ಜ್​ಮೆಂಟ್​ ಬದಲಿಸಿ ಹೈಕೋರ್ಟ್‌ ಮಹತ್ವದ ತೀರ್ಪು!

ಕೆಲಸ ಮಾಡದೆ ತಮಿಳುನಾಡಿಗೆ ಪರಾರಿಯಾಗುತ್ತಿದ್ದ ಬೋರ್‌ವೆಲ್ ಕಾರ್ಮಿಕರು/Shivamogga Police 112 Action

ಮತ್ತೊಂದು ಘಟನೆಯಲ್ಲಿ ಬೋರ್‌ವೆಲ್ ಕೆಲಸ ಮಾಡುವುದಾಗಿ  ಹಣ ಪಡೆದು, ಕೆಲಸ ಮಾಡದೆ ತಮಿಳುನಾಡಿಗೆ ಪರಾರಿಯಾಗಲು ಯತ್ನಿಸಿದ ಘಟನೆ ನ್ಯೂ ಟೌನ್ ಪೊಲೀಸ್ ಸ್ಟೆಷನ್​ ಲಿಮಿಟ್ಸ್​ನಲ್ಲಿ ವರದಿಯಾಗಿದೆ.ಬೋರ್‌ವೆಲ್ ಕೆಲಸಕ್ಕಾಗಿ ಹಣ ಪಡೆದಿದ್ದ ವ್ಯಕ್ತಿಗಳು, ಕೆಲಸ ಮಾಡದೆಯೇ ತಮಿಳುನಾಡಿಗೆ ಹೋಗಲು ಬಸ್ ಸ್ಟಾಂಡ್‌ನಲ್ಲಿ ನಿಂತಿದ್ದರು. ಈ ವೇಳೆ ದೂರಿನನ್ವಯ ಸ್ಥಳಕ್ಕೆ ಬಂದ ಪೊಲೀಸರು ಬಸ್ ನಿಲ್ದಾಣದಲ್ಲಿ ವ್ಯಕ್ತಿಗಳನ್ನ ತಡೆದು ಹಣಕಾಸಿನ ವಿಚಾರದಲ್ಲಿ ಸಮಸ್ಯೆ ಬಗೆಹರಿಸಿಕೊಂಡು ತೆರಳುವಂತೆ ಸೂಚಿಸಿದರು 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು. 

ಶಿವಮೊಗ್ಗ: 112 ಪೊಲೀಸರ ಕಾರ್ಯಾಚರಣೆ – ಕಳ್ಳತನ, ವಂಚನೆ ಪ್ರಕರಣ , Shivamogga Police 112 Action Mobile Theft, Fraud and Suspicious Person Cases Handled Swiftly
ಶಿವಮೊಗ್ಗ: 112 ಪೊಲೀಸರ ಕಾರ್ಯಾಚರಣೆ - ಕಳ್ಳತನ, ವಂಚನೆ ಪ್ರಕರಣ , Shivamogga Police 112 Action Mobile Theft, Fraud and Suspicious Person Cases Handled Swiftly
ಶಿವಮೊಗ್ಗ: 112 ಪೊಲೀಸರ ಕಾರ್ಯಾಚರಣೆ – ಕಳ್ಳತನ, ವಂಚನೆ ಪ್ರಕರಣ , Shivamogga Police 112 Action Mobile Theft, Fraud and Suspicious Person Cases Handled Swiftly
ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು