shivamogga news today : 22 ವರ್ಷಗಳಿಂದ ನಕ್ಸಲ್ ಸಂಘಟನೆಯಲ್ಲಿ ತೊಡಗಿಸಿಕೊಂಡು ಕೇರಳ ಪೊಲೀಸರಿಂದ ಬಂಧಿತನಾಗಿ ಜೈಲುವಾಸ ಅನುಭವಿಸುತ್ತಿರುವ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿಯನ್ನು ಇಂದು ಶಿವಮೊಗ್ಗ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಭಾರಿ ಬಿಗಿ ಭದ್ರತೆಯೊಂದಿಗೆ ಆಗುಂಬೆ-ತೀರ್ಥಹಳ್ಳಿ ಪೊಲೀಸರು ಕೇರಳದಿಂದ ಬಿಜಿಕೆಯನ್ನು ಕರೆತಂದಿದ್ದರು. ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆಗುಂಬೆ ಪೊಲೀಸ್ ಠಾಣೆಯಲ್ಲಿ ಬಿಜಿಕೆ ವಿರುದ್ದ ಪ್ರಕರಣ ದಾಖಲಾಗಿತ್ತು.
shivamogga news today : ಮಲೆನಾಡಿನಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಗೆ ಕೊಂಡೊಯ್ಯುವಲ್ಲಿ ಪ್ರಮುಖಪಾತ್ರ ವಹಿಸಿದ್ದ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿ 2021 ರ ಡಿಸೆಂಬರ್ ತಿಂಗಳು ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಕೇರಳ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ನೆನ್ನೆ ಬಿಜೆಕೆಯನ್ನು ಬಾಡಿ ವಾರೆಂಟ್ ಮೂಲಕ ಆಗುಂಬೆ-ತೀರ್ಥಹಳ್ಳಿ ಪೊಲೀಸರು ಭಾರಿ ಭದ್ರತೆಯೊಂದಿಗೆ ಕರೆತಂದಿದ್ದರು. ಶಿವಮೊಗ್ಗದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಬಿಜಿಕೆಯನ್ನು ಇಂದು ಹಾಜರು ಪಡಿಸಲಾಯಿತು. ಬಿಜಿಕೆ ವಿರುದ್ಧ ಆಗುಂಬೆ ಠಾಣೆಯಲ್ಲಿ ಮೂರು ಪ್ರಕರಣಗಳು ದಾಖಲಾಗಿದ್ದವು.
174/2007 ತಲ್ಲೂರು ಅಂಗಡಿ ಬಳಿ ಬಸ್ ಸುಟ್ಟ ಪ್ರಕರಣ, 51/2009 ಆಗುಂಬೆ ಬಳಿ ಫಾರೆಸ್ಚ್ ಚೆಕ್ ಪೋಸ್ಟ್ ದಾಳಿ ಪ್ರಕರಣ 12 /2009 ಆಗುಂಬೆ ಬಳಿ ಅರುಣ್ ಕುಮಾರ್ ಮತ್ತು ಕಿರಣ್ ಕುಮಾರ್ ಎಂಬುವರ ಮನೆಗೆ ಬೆಂಕಿ ಹಚ್ಚಿ ಬೈಕ್ ಸುಟ್ಟ ಘಟನೆ. ಮನೆಯಲ್ಲಿದ್ದ ಸಿಂಗಲ್ ಬ್ಯಾರಲ್ ಮತ್ತು ಡಬಲ್ ಬ್ಯಾರಲ್ ಗನ್ ದೋಚಿದ ಪ್ರಕರಣದಲ್ಲಿ ಬಿಜಿಕೆ ಪ್ರಮುಖ ಆರೋಪಿಯಾಗಿದ್ದಾನೆ.

ನಕ್ಸಲ್ ಬಿಜಿ ಕೃಷ್ಣಮೂರ್ತಿ ವಿರುದ್ಧ ಚಿಕ್ಕಮಗಳೂರು , ಉಡುಪಿ ಹಾಗೂ ಶಿವಮೊಗ್ಗದಲ್ಲಿ ಕೇಸ್ಗಳು ದಾಖಲಾಗಿವೆ. ಈ ಪ್ರಕರಣಗಳ ಸಂಬಂಧ ಈಗಾಗಲೇ ಉಡುಪಿ ಹಾಗೂ ಚಿಕ್ಕಮಗಳೂರು ಪೊಲೀಸರು ಬಿಜಿಕೆಯನ್ನು ಕೋರ್ಟ್ಗೆ ಹಾಜರುಪಡಿಸಿವೆ. ಕಳೆದ ವರ್ಷ ತೀರ್ಥಹಳ್ಳಿ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು.
shivamogga news today : ದಶಕಗಳ ಹಿಂದೆ ಶೋಷಿತರ ಪರ ಹೋರಾಟಗಾರರಾಗಿದ್ದ ಬಿಜಿಕೆ
ದಶಕದ ಹಿಂದೆ ಶಿವಮೊಗ್ಗ ನ್ಯಾಷನಲ್ ಕಾಲೇಜಿನಲ್ಲಿ ಎಲ್.ಎಲ್.ಬಿ ಓದುತ್ತಲೇ ಶೋಷಿತ ದಮನಿತರ ಪರ ಹೋರಾಟಗಳನ್ನು ಮಾಡುತ್ತಾ ಬಂದಿದ್ದ ಬಿಜಿಕೆ ಸಮಾಜದ ಮುಖ್ಯವಾಹಿನಿಯಲ್ಲಿ ಒಬ್ಬ ಹೋರಾಟಗಾರನಾಗಿ ರೂಪಿತವಾಗುತ್ತಾನೆ ಎಂದು ಸ್ನೇಹಿತರು ಭಾವಿಸಿದ್ದರು. ಆದರೆ ಪರಿಸರ ಸಂರಕ್ಷಣೆ ನೆಪದಲ್ಲಿ ಶಿವಮೊಗ್ಗದಲ್ಲಿ ಕಣ್ಮರೆಯಾದ ಯುವಕ ಯುವತಿಯರ ಗುಂಪು ಮುಂದೆ ನಕ್ಸಲ್ ಸಂಘಟನೆ ಸೇರುತ್ತಾರೆ ಎಂದು ಊಹಿಸಿರಲಿಲ್ಲ. ನಕ್ಸಲ್ ನಾಯಕಿ ಹೊಸಗದ್ದೆ ಪ್ರಭಾಳನ್ನೇ ಮದುವೆಯಾಗಿದ್ದ ಬಿಜಿಕೆ ಎರಡು ದಶಕಕ್ಕೂ ಹೆಚ್ಚು ಕಾಲ ಭೂಗತರಾಗಿದ್ದ. ಮಲೆನಾಡಿನಲ್ಲಿ ಸಂಘಟನೆ ನಿಷ್ಕ್ರೀಯವಾಗುತ್ತಿದ್ದಂತೆ ಕೇರಳದತ್ತ ಮುಖ ಮಾಡಿದ್ದ ಬಿಜಿಕೆ ಗ್ರೂಪ್ ಗೆ ಒಂದು ಹಂತದಲ್ಲಿ ನೆಲೆಯೂರಲು ಅವಕಾಶ ಸಿಕ್ಕಿತು. ಆದರೆ ಕೇರಳ ಪೊಲೀಸರು ಹೊಸಗದ್ದೆ ಪ್ರಭಾ ಮತ್ತು ಬಿಜಿ ಕೃಷ್ಣಮೂರ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
14-05-25 ರ ರಾತ್ರಿ ಬಿಜಿಕೆಯನ್ನು ಶಿವಮೊಗ್ಗದ ಸೆಂಟ್ರಲ್ ಜೈಲಿಗೆ ಕರೆತರಲಾಗಿತ್ತು. ಇಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.