ಶಿವಮೊಗ್ಗ ಜಿಲ್ಲೆಯ ಇವತ್ತಿನ ಚಟ್​ ಪಟ್​ ಸುದ್ದಿ ! / 46 ವೆಹಿಕಲ್ ಹರಾಜು, ಇನ್​ಸ್ಪೆಕ್ಟರ್​ಗಳ ವರ್ಗಾವಣೆ, ವ್ಯಾಪಾರಸ್ಥರಿಗೆ ಶಾಕ್ !​

ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ವಿವಿಧ ಘಟನೆಗಳಿಗೆ ಸಂಬಂಧಿಸಿದಂತೆ ಸಂಕ್ಷಿಪ್ತ ವರದಿ ನೀಡುವ ಮಲೆನಾಡು ಟುಡೆಯ ಇವತ್ತಿನ ಚಟ್​ ಪಟ್​ ಸುದ್ದಿಕಾಲಂ ನಿಮ್ಮ ಮುಂದೆ . 

ಭದ್ರಾವತಿಯಲ್ಲಿ ವ್ಯಾಪಾರಸ್ಥರಿಗೆ ಶಾಕ್

ಭದ್ರಾವತಿ ತಾಲ್ಲೂಕು ಆರೋಗ್ಯಾಧಿಕಾರಿ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳ ತಂಡ ಹೊಸಮನೆ ಮುಖ್ಯರಸ್ತೆಯ ಹೋಟೆಲ್, ಅಂಗಡಿ ಮುಂಗಟ್ಟುಗಳಿಗೆ ದಾಳಿ ನಡೆಸಿ  ಕೋಪ್ಟಾ ಕಾಯ್ದೆಯನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಿ ಮಾಹಿತಿ ನೀಡಿದರು. ಈ ಸಂಬಂಧ ಒಟ್ಟು 30 ಪ್ರಕರಣ ದಾಖಲಿಸಿ ₹3,800 ದಂಡ ಸಂಗ್ರಹಿಸಲಾಗಿದೆ ಎಂದು ಮಾದ್ಯಮಗಳಿಗೆ ಮಾಹಿತಿ ನೀಡಿದರು. 

ತುಂಗಾನಗರದ ಬಳಿಕ ಇದೀಗ ಗ್ರಾಮಾಂತರದಲ್ಲಿ ಹರಾಜು

ತುಂಗಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸೀಜ್ ಆದ ವೆಹಿಕಲ್ಗಳ ಹರಾಜಿಗೆ ಪ್ರಕಟಣೆ ನೀಡಲಾಗಿತ್ತು. ಇದೀಗ ಶಿವಮೊಗ್ಗ ಗ್ರಾಮಾಂತರ ಠಾಣೆಯಿಂದ ಇದೇ ರೀತಿಯ ಪ್ರಕಟಣೆ ಹೊರಬಿದ್ದಿದೆ. ಮೇ.12 ರಂದು ಠಾಣೆಯಲ್ಲಿ  ವಾರಸುದಾರರು ಪತ್ತೆಯಾಗದ 46 ದ್ವಿಚಕ್ರ ವಾಹನಗಳ ಹರಾಜಿಗೆ ನಿರ್ದರಿಸಲಾಗಿದ್ದು,  ಬಹಿರಂಗ ಹರಾಜು ನಡೆಯಲಿದೆ. ಈ ಸಂಬಂಧ  3ನೇ ಜೆ ಎಂ ಎಫ್ ಸಿ ನ್ಯಾಯಲಯದಿಂದ ಆದೇಶ ಪಡೆದುಕೊಳ್ಳಲಾಗಿದ್ದು, ಅಂದು ಬೆಳಗ್ಗೆ 10.00 ಗಂಟೆಗೆ ಹರಾಜು ನಡೆಯಲಿದೆ. 

ಶಿವಮೊಗ್ಗ ಜಿಲ್ಲೆ / ವಿದ್ಯಾರ್ಥಿಗೆ ಪೊಲೀಸರ ಸನ್ಮಾನ

ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು  ಈ ವರ್ಷ  SSLC ಯಲ್ಲಿ 625 ಅಂಕಕ್ಕೆ 624 ಅಂಕ ಪಡೆದ ಸಿಬ್ಬಂದಿಯೊಬ್ಬರ ಮಗಳನ್ನು ತಮ್ಮ ಠಾಣೆಗೆ ಆಹ್ವಾನಿಸಿ, ಸನ್ಮಾನಿಸಿದ್ದಾರೆ.  ಆದಿಚುಂಚನಗಿರಿ ಶಾಲೆಯಲ್ಲಿ ಓದುತ್ತಿದ್ದ ಸಹಾನ ಹೆಚ್ ರನ್ನು, ಠಾಣೆಯ ಪೊಲೀಸರು ಸನ್ಮಾನಿಸಿದರು. ಈಕೆ  ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಸುರೇಶ್ ಅವರ ಮಗಳು. ಈಕೆಯ ಸಾದನೆಗೆ ಇಡೀ ಪೊಲೀಸ್ ಠಾಣೆಯ ಸಿಬ್ಬಂದಿ ಹೆಮ್ಮೆ ಪಡುತ್ತಿದ್ದಾರೆ. 

 ಪೊಲೀಸ್ ಇನ್​ಸ್ಪೆಕ್ಟರ್​ ವರ್ಗಾವಣೆ

ಶಿವಮೊಗ್ಗದಲ್ಲಿನ ಕೆಲವು ಇನ್​ಸ್ಪೆಕ್ಟರ್ ವರ್ಗಾವಣೆ ಗೊಂಡಿದ್ದಾರೆ. ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯ ಪಿಐ ಸಂತೋಷ್​ ಇದೀಗ ವಿನೋಬನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.  ಗಾಯಿತ್ರಿ ಆರ್ ಅವರು ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯ ಪಿಐ ಆಗಿ ವರ್ಗಾವಣೆಗೊಂಡಿದ್ದರು. ಈ ಆದೇಶ ಇದೀಗ ರದ್ದಾಗಿದೆ. ಇನ್ನೂ ಸಂಚಾರಿ ಪೊಲೀಸ್ ಠಾಣೆಯ ಪಿಐ ಆಗಿ ಮಣಿಪಾಲ್ ಪೊಲೀಸ್ ಠಾಣೆಯ ದೇವರಾಜ್ ಟಿವಿಯವರನ್ನ ವರ್ಗಾಯಿಸಲಾಗಿದೆ. ಇತ್ತ ವಿನೋಬ ನಗರ ಪೊಲೀಸ್ ಠಾಣೆಗೆ ಪಿಐ ಆಗಿ ವರ್ಗವಾಗಿದ್ದ  ಭರತ್ ಕುಮಾರ್ ಮಹಿಳಾ ಠಾಣೆ ಪಿಐ ಆಗಿ ಮುಂದುವರಿಯಲಿದ್ದಾರೆ. 

ಶಿವಮೊಗ್ಗ ಜಿಲ್ಲೆ

Leave a Comment