new town police station / ಕಳುವಾದ ಮನೆ ಏರಿಯಾದಲ್ಲಿಯೇ ಸಿಕ್ಕಿಬಿದ್ದ ಕಳ್ಳ! ನಡೆದಿದ್ದೇನು?

Malenadu Today

new town police station  /ಶಿವಮೊಗ್ಗ ಪೊಲೀಸರು ಮತ್ತೊಂದು ಪ್ರಕರಣವನ್ನು ಭೇದಿಸಿದ್ದಾರೆ. ಜಿಲ್ಲೆಯ ಭದ್ರಾವತಿ ತಾಲ್ಲೂಕು ನ್ಯೂಟೌನ್ ಪೊಲೀಸರು ಇತ್ತೀಚೆಗೆ ನಡೆದಿದ್ದ  ಕಳವು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ  ಮೀನುಗಾರರ ಬೀದಿಯ ನಿವಾಸಿ ಜೈಕಾಂತ್ ಪಿ. ಬಂಧಿತ ಆರೋಪಿ. ಈತನು ಕಳೆದ ಮೇ 2ರ ರಾತ್ರಿ ಬಿ.ಎಚ್.ರಸ್ತೆಯ ಮೀನುಗಾರರ ಬೀದಿಯ ಮನೆಯೊಂದರಲ್ಲಿ ಸಿಮೆಂಟ್ ಶೀಟು ಒಡೆದು ಅಂದಾಜು ₹ 1.12 ಲಕ್ಷ ಮೌಲ್ಯದ ಆಭರಣ, ವಾಚ್ ಮತ್ತು ನಗದು ಕಳವು ಮಾಡಿದ್ದ. ಈ ಪ್ರಕರಣದ ಸಂಬಂಧ ಭದ್ರಾವತಿಯ ನ್ಯೂಟೌನ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು, ಪ್ರಕರಣ ಸಂಬಂಧ ವಿಚಾರಣೆ ಆರಂಭಿಸಿದ್ದ ನ್ಯೂಟೌನ್ ಪೊಲೀಸರಿಗೆ ಕೃತ್ಯವನ್ನು ಸ್ಥಳೀಯವಾಗಿ ಯಾರೋ ಕಳ್ಳರು ಎಸೆಗಿರುವ ಅನುಮಾನ ಬಂದಿತ್ತು. ಅದರಂತೆ ತನಿಖೆ ಕೈಗೊಂಡ ಪೊಲೀಸರಿಗೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಆತನಿಂದ ಕಳವು ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣವನ್ನು ಇತ್ಯರ್ಥ ಪಡಿಸಿದ್ದಾರೆ. 

 

- Advertisement -
Share This Article