shivamogga news today : ಮಲೆನಾಡು ಸೇರಿದಂತೆ ಕೇರಳ ರಾಜ್ಯದಲ್ಲಿ ನಕ್ಸಲ್ ಸಂಘಟನೆಯನ್ನು ಮಂಚೂಣಿಗೆ ಕೊಂಡೊಯ್ಯುವಲ್ಲಿ ಪ್ರಮುಖಪಾತ್ರ ವಹಿಸಿದ್ದ ನಕ್ಸಲ್ ನಾಯಕ ಬಿ.ಜಿ ಕೃಷ್ಣಮೂರ್ತಿಯನ್ನು ಪೊಲೀಸರು ಶಿವಮೊಗ್ಗ ಕೋರ್ಟ್ ಗೆ ಹಾಜರು ಪಡಿಸಿದರು. ಮೂರು ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದ ಬಿ.ಜಿ ಕೃಷ್ಣಮೂರ್ತಿಯ ವಿಚಾರಣೆ ಮುಗಿದಿದ್ದು, ಇಂದು ಆರೋಪಿಯ ಹೇಳಿಕೆ ಪಡೆಯಬೇಕಾದ್ದರಿಂದ ಕೇರಳ ತ್ರಿಶೂರ್ ಜಿಲ್ಲೆಯ ವಿಯೂರ್ ಜೈಲಿನಿಂದ ಬಿಜಿಕೆಯನ್ನು ಭಾರಿ ಭದ್ರತೆಯಲ್ಲಿ ಕರೆತರಲಾಗಿತ್ತು. ತೀರ್ಥಹಳ್ಳಿ ಆಗುಂಬೆ ಪೊಲೀಸರು ಆರೋಪಿಯನ್ನು ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿರಿಸಿದ್ದರು. ಇಂದು ಬಿಜಿಕೆಯನ್ನು ಶಿವಮೊಗ್ಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. 174/2007 ತಲ್ಲೂರು ಅಂಗಡಿ ಬಳಿ ಬಸ್ ಸುಟ್ಟ ಪ್ರಕರಣದಲ್ಲಿ ಬಿಜೆಕೆ ಮೂರನೇ ಆರೋಪಿ 51/2009 ಆಗುಂಬೆ ಬಳಿ ನೆಟ್ಟಾರು ಬಳಿ ಸ್ಪೋಟಕಗಳು ಬಂದೂಕು ಜಿಲೆಟಿನ್ ಕಡ್ಡಿಗಳು ಕರಪತ್ರಗಳು ಪತ್ತೆಯಾಗಿದ್ದವು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ.
12/2009 ಆಗುಂಬೆ ಬಳಿ ಅರುಣ್ ಕುಮಾರ್ ಮತ್ತು ಕಿರಣ್ ಕುಮಾರ್ ಎಂಬುವರ ಮನೆಗೆ ಬೆಂಕಿ ಹಚ್ಚಿ ಬೈಕ್ ಸುಟ್ಟ ಘಟನೆ. ಮನೆಯಲ್ಲಿದ್ದ ಸಿಂಗಲ್ ಬ್ಯಾರಲ್ ಮತ್ತು ಡಬಲ್ ಬ್ಯಾರಲ್ ಗನ್ ದೋಚಿದ ಪ್ರಕರಣದಲ್ಲಿ ಬಿಜಿಕೆ ಮೊದಲ ಆರೋಪಿಯಾಗಿದ್ದಾನೆ.
shivamogga news today : ಆರೋಪಿ ಪರ ವಕೀಲ ಶ್ರೀಪಾಲ್ ಹೇಳಿದ್ದೇನು
ಕೃಷ್ಣಮೂರ್ತಿ ಆರೋಪಿಯಾಗಿದ್ದ ಮೂರು ಪ್ರಕರಣಗಳ ವಿಚಾರಣೆ ಮುಗಿದಿದ್ದು, ಆರೋಪಿಯ ಹೇಳಿಕೆಯನ್ನು ಪಡೆಯಲಾಯಿತು.ಈಗ ಹೇಳಿಕೆಯೂ ಮುಗಿದಿದ್ದು, ವಿಚಾರಣೆಯನ್ನು 16-06-25 ಕ್ಕೆ ಮುಂದೂಡಲಾಗಿದೆ. ಮುಂದಿನ ವಿಚಾರಣೆ ವಿಸಿಯಲ್ಲಿ ನಡೆಸಬಹುದು ಎಂದು ಆರೋಪಿ ಪರ ವಕೀಲ ಕೆ.ಪಿ ಶ್ರೀಪಾಲ್ ಹೇಳಿದ್ದಾರೆ. ಕೇರಳ ಜೈಲಿನಲ್ಲಿ ಕನ್ನಡ ಪುಸ್ತಕಗಳನ್ನು ಓದಲು ನ್ಯಾಯಾಲಯ ಅವಕಾಶ ಕಲ್ಪಿಸಿದೆ. ಕೇರಳ ಜೈಲಿನಲ್ಲಿ ಆರೋಪಿ ಯಾವ ಭಾಷೆಯ ಯಾವ ಸಿದ್ದಾಂತದ ಪುಸ್ತಕ ಓದುತ್ತಿದ್ದಾನೆಂಬ ಭಾಷೆಯ ಕೊರತೆ ಇದ್ದ ಕಾರಣಕ್ಕೆ, ನ್ಯಾಯಾಲಯವೇ ಕನ್ನಡ ಭಾಷೆಯ ಲಾ ಬುಕ್ ಸಾಹಿತ್ಯ ಪುಸ್ತಕ ಓದಲು ಅವಕಾಶ ನೀಡಿದೆ ಎಂದು ಅವರು ತಿಳಿಸಿದರು.
