alcohol price hike :  ಮದ್ಯಪ್ರಿಯರಿಗೆ ಶಾಕ್​, ಇಂದಿನಿಂದ ಹೆಚ್ಚಾಗಲಿದೆ ಮದ್ಯದ ದರ

ಹಂಚಿಕೊಳ್ಳಿ
WhatsApp Facebook X Telegram
liquor shop bandh
liquor shop bandh ಈ ದಿನ ಮದ್ಯದಂಗಡಿ ಬಂದ್​

alcohol price hike : ಬಿಯರ್​ ಹಾಗೂ ಇತರೆ ಮದ್ಯಗಳ ಅಬಕಾರಿ ಸುಂಕವನ್ನು ಹೆಚ್ಚಿಸಿ  ರಾಜ್ಯ ಸರ್ಕಾರ ಮಂಗಳವಾರ ಅಂತಿಮ ಅಧಿಸೂಚನೆ ಹೊರಡಿಸಿದ್ದು, ಪರಿಷ್ಕೃತ ದರವು ಇಂದಿನಿಂದ  (ಮೇ 15) ಜಾರಿಗೆ ಬರಲಿದೆ.

ತೆರಿಗೆ ಸ್ಲ್ಯಾಬ್‌ಗಳ ಬದಲಾವಣೆ ಮತ್ತು ಮದ್ಯದ ಮೇಲಿನ ಸುಂಕ ಪರಿಷ್ಕರಣೆಯಿಂದಾಗಿ ಹಣಕಾಸು ಇಲಾಖೆಯು, ಕರ್ನಾಟಕ ಅಬಕಾರಿ ನಿಯಮಗಳು–2025ರ ಗಜೆಟ್‌ ಅಧಿಸೂಚನೆ ಹೊರಡಿಸಿದೆ. ಐಎಂಎಲ್‌ನ ತೆರಿಗೆ ಸ್ಲ್ಯಾಬ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗಿದೆ. 

alcohol price hike :  ಎಷ್ಟು ಹೆಚ್ಚಾಗಲಿದೆ ಬೆಲೆ

ಈ ಅಬಕಾರಿ ಸುಂಕ ಹೆಚ್ಚಳದಿಂದ ಈ ಹಿಂದೆ ಸ್ವಲ್ಪ ದರದಲ್ಲಿ ಸಿಗುತ್ತಿದ್ದ  ವಿಸ್ಕಿ, ಜಿನ್‌, ಬ್ರ್ಯಾಂಡಿ, ರಮ್‌ನ ಬೆಲೆ ರಾಜ್ಯದಲ್ಲಿ ಹೆಚ್ಚಾಗಲಿದೆ. 180 ಎಂಎಲ್‌ನ ಬಾಟಲಿ ಮತ್ತು ಪ್ಯಾಕೆಟ್​ಗಳ ಬೆಲೆಯಲ್ಲಿ ಗರಿಷ್ಠ ₹ 15 ಏರಿಕೆ ಆಗಲಿದೆ ಎಂದು ತಿಳಿದುಬಂದಿದೆ.

ಈಗ ಜಾರಿಯಲ್ಲಿರುವ ನಿಯಮಗಳ ಪ್ರಕಾರ ಐಎಂಎಲ್‌ ಗಳಲ್ಲಿ ಒಟ್ಟು 18 ತೆರಿಗೆ ಸ್ಲ್ಯಾಬ್‌ಗಳಿವೆ. ಈ ಸ್ಲ್ಯಾಬ್‌ಗಳನ್ನು 16ಕ್ಕೆ ಇಳಿಸಲಾಗಿದೆ. ಮೊದಲ ನಾಲ್ಕು ಸ್ಲ್ಯಾಬ್‌ಗಳನ್ನು ಗರಿಷ್ಠ ಬೆಲೆಯನ್ನು ಪರಿಷ್ಕರಿಸಲಾಗಿದೆ.

ಅಬಕಾರಿ ಸುಂಕ ಹೆಚ್ಚಳದಿಂದ ಪ್ರೀಮಿಯಂ ಅಥವಾ ಇತರೆ ಬಿಯರ್‌ ಬ್ರ್ಯಾಂಡ್‌ಗಳ ಬೆಲೆಯು ಉತ್ಪಾದನಾ ವೆಚ್ಚವನ್ನು ಅವಲಂಬಿಸಿ ಪ್ರತಿ ಬಾಟಲಿಗೆ ಸರಾಸರಿ ₹ 5ರಿಂದ ₹ 15 ಏರಿಕೆ ಆಗಲಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor