lucky baskar movie : ದಾವಣಗೆರೆ : ಗ್ರಾಹಕರು ಬ್ಯಾಂಕ್‌ನಲ್ಲಿ ಅಡ ಇಟ್ಟ ಚಿನ್ನವನ್ನು ಕದ್ದು ಬೇರೆ ಬ್ಯಾಂಕ್‌ನಲ್ಲಿ ಅಡವಿಟ್ಟು 2 ಕೋಟಿಗೂ ಅಧಿಕ ಸಾಲ ಪಡೆದಿದ್ದ ಬ್ಯಾಂಕ್ ಅಧಿಕಾರಿಯೊಬ್ಬರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಟಿಪಿ ಸಂಜಯ್ (33) ಬಂಧಿತ ಆರೋಪಿಯಾಗಿದ್ದಾರೆ.
lucky baskar movie : ಏನಿದು ಪ್ರಕರಣ
ಟಿಪಿ ಸಂಜಯ್ ಅಕ್ಟೋಬರ್ 2024ರಿಂದ ದಾವಣಗೆರೆಯ ಕ್ಯಾಥೊಲಿಕ್ ಸಿರಿಯನ್ ಬ್ಯಾಂಕ್‌ನಲ್ಲಿ ಚಿನ್ನಾಭರಣ ಸಾಲ ವಿಭಾಗದ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಆ ವೇಳೆ ಹೆಚ್ಚು ಹಣಗಳಿಸಬಹುದು ಎಂಬ ಉದ್ದೇಶದಿಂದ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ನಿಂದ ಗ್ರಾಹಕರು ಅಡವಿಟ್ಟಿದ್ದ ಚಿನ್ನಾಭರಣವನ್ನು ಕದ್ದು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟಿದ್ದರು. ಹೀಗೆ ಬೇರೆ ಬ್ಯಾಂಕ್‌ಗಳಲ್ಲಿ ಅಡವಿಟ್ಟಿದ್ದ 3 ಕೆ.ಜಿ 643 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗ್ರಾಹಕರ ಚಿನ್ನಾಭರಣವನ್ನು ಪರಿಶೀಲಿಸಿ ಅಡವಿಟ್ಟುಕೊಂಡು ದಾಖಲೆಗಳನ್ನು ಪರಿಶೀಲಿಸಿವುದು ಆರೋಪಿಯ ಜವಾಬ್ದಾರಿ ಯಾಗಿತ್ತು. ಈ ಅವಕಾಶವನ್ನು ಬಳಸಿಕೊಂಡ ಟಿಪಿ ಸಂಜಯ್ ಅಸಲಿ ಚಿನ್ನಾಭರಣವನ್ನು 6 ತಿಂಗಳಲ್ಲಿ ಹಂತಹಂತವಾಗಿ ಕಳವು ಮಾಡಿದ್ದಾರೆ. ಹಾಗೆಯೇ ಚಿನ್ನವನ್ನು ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಖಾಸಗಿ ಫೈನಾನ್ಸ್‌ನಲ್ಲಿ ತಂದೆ, ತಾಯಿ ಹಾಗೂ ತನ್ನ ಹೆಸರಿನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದಿದ್ದರು. ಅದರಲ್ಲಿ ಬಂದ ಹಣವನ್ನು ಆನ್‌ಲೈನ್ ಜೂಜು ಹಾಗೂ ಮೋಜು ಮಸ್ತಿಗೆ ಬಹುತೇಕ ಖರ್ಚು ಮಾಡಿದ್ದಾರೆ. ಎಂದು ತನಿಖೆ ವೇಳೆ ತಿಳಿದು ಬಂದಿದೆ.

lucky baskar movie : ಪ್ರಕರಣ ಬಯಲಿಗೆ ಬಂದಿದ್ದು ಹೇಗೆ
ಬ್ಯಾಂಕ್ ಅಧಿಕಾರಿಗಳು ಚಿನ್ನಾಭರಣ ಸಾಲದ ಲೆಕ್ಕ ಪರಿಶೋಧನೆ ನಡೆಸುವ ವೇಳೆ ಗ್ರಾಹಕರು ಅಡವಿಟ್ಟಿದ್ದ ಚಿನ್ನ ಕಳವಾಗಿರುವುದು ಗೊತ್ತಾಗಿದೆ. ಆಗ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲಿಸಿದ ಇತರ ಅಧಿಕಾರಿಗಳು ಪ್ರಕರಣ ಸಲುವಾಗಿ ಕೆ.ಟಿ.ಜೆ ನಗರ ಠಾಣೆಯಲ್ಲಿ ದೂರನ್ನು ನೀಡಿದ್ದರು. ನಂತರ . ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿದ ಚಿನ್ನಾಭರಣವನ್ನು ಬೇರೆಡೆ ಅಡವಿಟ್ಟದ್ದು ಬೆಳಕಿಗೆ ಬಂದಿದೆ.
lucky baskar movie : ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದುಕೊಂಡಿದ್ದ ಆರೋಪಿ
ಬ್ಯಾಂಕ್‌ನ ಎಲ್ಲ ಅಧಿಕಾರಿಗಳ ವಿಶ್ವಾಸ ಗಳಿಸಿದ್ದ ಆರೋಪಿ ಚಿನ್ನಾಭರಣ ಸಾಲಕ್ಕೆ ಸಂಬಂಧಿಸಿದ ಎಲ್ಲ ಜವಾಬ್ದಾರಿಯನ್ನು ಪಡೆದು ಕೊಂಡಿದ್ದರು. ಹಾಗೆಯೇ ಇದೇ ಅವಕಾಶವನ್ನು ಬಳಸಿಕೊಂಡು ನಕಲಿ ಚಿನ್ನವನ್ನು ಅಡವಿಟ್ಟುಕೊಂಡು ತಾನೇ ಸಾಲ ಪಡೆದಿದ್ದ ಸಂಗತಿ ತನಿಖೆಯ ವೇಳೆ ಪತ್ತೆಯಾಗಿದೆ.
ಈ ಹಿಂದೆ ಮಳಯಾಳಂನಲ್ಲಿ ಲಕ್ಕಿ ಭಾಸ್ಕರ್ ಎಂಬ ಸಿನಿಮಾವೊಂದು ಬಿಡುಗಡೆಯಾಗಿತ್ತು. ಆ ಸಿನಿಮಾದ ನಾಯಕ ಕೂಡಾ ಬ್ಯಾಂಕ್ ಅಧಿಕಾರಿಯಾಗಿದ್ದು, ಗ್ರಾಹಕರ ಹಣವನ್ನೆಲ್ಲಾ ಬೇರೆ ರೀತಿಯ ವ್ಯವಹಾರಗಳಿಗೆ ಬಳಸಿಕೊಂಡಿ ಶ್ರೀಮಂತನಾಗುತ್ತಾರೆ. ಆದರೆ ಆಗಿನ ಕಾಲದಲ್ಲಿ ಸಿಸಿ ಟಿವಿ ಕ್ಯಾಮರಾಗಳ ಇರಲಿಲ್ಲ ಆದ್ದರಿಂದ ಆತ ಹೇಗೋ ಬಚಾವ್ ಆದ. ಆದರೆ ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಿಕ್ಕಿ ಬೀಳುತ್ತೇನೆಂದು ಗೊತ್ತಿದ್ದರೂ ಈ ಬ್ಯಾಂಕ್ ಅಧಿಕಾರಿ ಭಂಡ ದೈರ್ಯದಿಂದ ಈ ರೀತಿ ಕಳ್ಳತನ ಮಾಡಿದ್ದು ವಿಪರ್ಯಾಸವೇ ಸರಿ