shivamogga news today : ಮುನಿಸು ಬದಿಗೊತ್ತಿ ಬಿಎಸ್​ವೈ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್​ ಈಶ್ವರಪ್ಪ ಭಾಗಿ

shivamogga news today : ಮುನಿಸು ಬದಿಗೊತ್ತಿ ಬಿಎಸ್​ವೈ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್​ ಈಶ್ವರಪ್ಪ

ಬಿವೈ ರಾಘವೇಂದ್ರರವರ ಮಗನ ಮದುವೆ ಅದ್ಧೂರಿಯಾಗಿ ನಡೆದಿದ್ದು ಇವತ್ತು ಶಿಕಾರಿಪುರದಲ್ಲಿ ಆರತಕ್ಷತೆ ನಡೆಯುತ್ತಿದೆ. ವಿಶೇಷ ಅಂದರೆ, ಈ ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಕೆಎಸ್​ ಈಶ್ವರಪ್ಪ ಪಾಲ್ಗೊಂಡಿದ್ದು, ತಮ್ಮ ಬಹುಕಾಲದ ಗೆಳಯರು ಆದ ಬಿಎಸ್​ವೈ ರನ್ನು ಕುಶಲೋಪಚರಿ ವಿಚಾರಿಸಿದರಷ್ಟೆ ಅಲ್ಲದೆ ವಿಜಯೇಂದ್ರ ಹಾಗೂ ರಾಘವೇಂದ್ರರನ್ನು ಬೆನ್ನುತಟ್ಟಿ ಆಶೀರ್ವಾದ ಮಾಡಿದರು. ವಿವಿಧ ಕಾರಣಕ್ಕೆ ಬಿಎಸ್​ ವೈ ಕುಟುಂಬದ ವಿರುದ್ಧ ಸಿಡಿದಿದ್ದ ಕೆಎಸ್​ ಈಶ್ವರಪ್ಪ ಕಳೆದ ಲೋಕಸಭಾ ಎಲೆಕ್ಷನ್​ನಲ್ಲಿ ಬಂಡಾಯವಾಗಿ ಸ್ಪರ್ಧಿಸಿದ್ದರು. 

ಈ ಸಂದರ್ಭದಲ್ಲಿ ಹಾಗೂ ಚುನಾವಣೆ ಮುಗಿದ ಬಳಿಕವೂ  ಈಶ್ವರಪ್ಪನವರರು ಯಡಿಯೂರಪ್ಪನವರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಬಂದಿದ್ದರು. ಅವರನ್ನು ಸಮಧಾನ ಪಡಿಸುವ ಸಂಧಾನ ಕ್ರಮಗಳು ಯಶಸ್ವಿ ಕಾಣದೆ, ಕೊನೆಗೆ ಕೆ ಎಸ್​ ಈಶ್ವರಪ್ಪರವರನ್ನು ಬಿಜೆಪಿ ಹೈಕಮಾಂಡ್ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿತ್ತು.ಇದು ಒಂದು ಕಾಲದ ಆತ್ಮೀಯ ಗೆಳಯರ ನಡುವೆ ಬಿರುಕಿನ ದೊಡ್ಡ ಗೋಡೆಯನ್ನು ಸೃಷ್ಟಿ ಮಾಡಿತ್ತು. ಇದೆಲ್ಲದರ ನಡುವೆ ಬಿಎಸ್​ವೈ ಮೊಮ್ಮಗನ ಮದುವೆ ಆರತಕ್ಷತೆಯಲ್ಲಿ ಕೆಎಸ್​ ಈಶ್ವರಪ್ಪನವರು ಕುಟುಂಬ ಸಮೇತರಾಗಿ ಕಾಣಿಸಿಕೊಂಡಿದ್ದಾರೆ. ಇದು ರಾಜಕಾರಣವನ್ನು ಹತ್ತಿರದಿಂದ ನೋಡುವವರ ಕಣ್ಣಗಳಲ್ಲಿ ಅಚ್ಚರಿ ಮೂಡಿಸಿದೆ. ಇತ್ತೀಚೆಗೆ ನಡೆದ ಹಿರಿಯೂರು ಕೃಷ್ಣ ಮೂರ್ತಿಗಳ ಸಂಸ್ಕರಣ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಬಿಎಸ್​ವೈ ಹಾಗೂ ಕೆಎಸ್​ಇ ಜೊತೆಗೆ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರಾದರೂ ಸಹ ಪರಸ್ಪರ ಮಾತನಾಡಿರಲಿಲ್ಲ. ತಮ್ಮ ತಮ್ಮ ಭಾಷಣದಲ್ಲಿ ಮಾತ್ರ ಪರಸ್ಪರ ಹೆಸರುಗಳನ್ನು ಉಲ್ಲೇಖಿಸಿದ್ದರು. ಇದೀಗ ತಮ್ಮೆಲ್ಲಾ ಮುನಿಸನ್ನು ಬದಿಗೊತ್ತಿ ಕೆಎಸ್​ಇ ಬಿಎಸ್​ವೈ ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. 

shivamogga news today ಬಿಸ್​ಐ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್​ ಈಶ್ವರಪ್ಪ ಭಾಗಿ
shivamogga news today ಬಿಸ್​ಐ ಮೊಮ್ಮಗನ ಆರತಕ್ಷತೆಯಲ್ಲಿ ಕೆ ಎಸ್​ ಈಶ್ವರಪ್ಪ ಭಾಗಿ

shivamogga news today  ಶಿಕಾರಿಪುರದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುತ್ತಿರುವ ಈ  ಆರತಕ್ಷತೆ ಕಾರ್ಯಕ್ರಮ ಕೆಎಸ್​ ಈಶ್ವರಪ್ಪ ಹಾಗೂ ಬಿಎಸ್​ವೈ ಕುಟುಂಬದ ಮರು ಸಮಾಗಮಕ್ಕೆ ಸಾಕ್ಷಿಯಾಗಿದ್ದು, ಈ ಸೌಹಾರ್ಧ ಭೇಟಿಯು ರಾಜಕಾರಣದಲ್ಲಿ ಟ್ವಿಸ್ಟ್​ ಕೊಟ್ಟರು ಕೊಡಬಹುದು.

 

Leave a Comment