shivamogga news june 28 / ಬೆಲೆ ಜಾಸ್ತಿ ಬೆನ್ನಲ್ಲೆ, ಕಾಯಿ ಕದಿಯಲು ಹೋಗಿ ಸಿಕ್ಕಿಬಿದ್ದ ಕಳ್ಳ/ ನ್ಯೂಸೆನ್ಸ್, ಸಾಲ, ಕಳ್ಳತನ ಇನ್ನಷ್ಟು ಸುದ್ದಿ!

ಶಿವಮೊಗ್ಗ ಶಾರ್ಟ್ ನ್ಯೂಸ್ / ಜೂನ್ 26-28, 2025ರ ವರದಿ shivamogga news june 28 

ನ್ಯೂಟೌನ್‌ನಲ್ಲಿ ಬೈಕ್ ಮತ್ತು ಹಣ ಕಳ್ಳತನ, ಆರೋಪಿ ಪತ್ತೆ: 

ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಬೈಕ್ ಹಾಗೂ ಅವರ ಬಳಿ ಇದ್ದ ಹಣವನ್ನು ಅಪರಿಚಿತ ವ್ಯಕ್ತಿಯೊಬ್ಬ ಕಿತ್ತೊಯ್ದ ಘಟನೆ ನಡೆದಿದೆ. ಈ ಸಂಬಂಧ ಅವರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಡಮಾಡದ  ERV ಸಿಬ್ಬಂದಿ ಕಳ್ಳನ ಮಾಹಿತಿ ಪಡೆದು ಪತ್ತೆ ಹಚ್ಚಿ ಠಾಣೆಗೆ ಕರೆತಂದು SHO ಬಳಿ ಹಾಜರುಪಡಿಸಿ ಪ್ರಕರಣ ಇತ್ಯರ್ಥ ಪಡಿಸಿದರು.

ತುಂಗಾನಗರದಲ್ಲಿ ವಾಹನ ಸಾಲದ ಗಲಾಟೆ ಬಗೆಹರಿಸಿದ ಪೊಲೀಸರು shivamogga news june 28 

ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ  ವಾಹನದ ಸಾಲದ ಕಂತು ಪಾವತಿಸದೆ ವ್ಯಕ್ತಿಯೊಬ್ಬರು ಗಲಾಟೆ ಮಾಡುತ್ತಿರುವ ಬಗ್ಗೆ ಎದುರುದಾರರೆ ಪೊಲೀಸರಿಗೆ ಕಂಪ್ಲೆಂಟ್ ಮಾಡಿದ್ದರು. ಈ ಸಂಬಂಧ  ಸ್ಥಳಕ್ಕೆ ತೆರಳಿದ ಪೊಲೀಸರು  ಎರಡೂ ಕಡೆಯವರಿಗೆ ತಿಳುವಳಿಕೆ ನೀಡಿ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚಿಸಿದರು.

 ಭದ್ರಾವತಿ ಗ್ರಾಮಾಂತರದಲ್ಲಿ ತೆಂಗಿನಕಾಯಿ ಕಳ್ಳರು ಸಿಕ್ಕಿಬಿದ್ದರು

ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ,  ತೋಟದಲ್ಲಿ ತೆಂಗಿನಕಾಯಿ ಕದಿಯಲು ಬಂದ ಕಳ್ಳರು ತೋಟದ ಮಾಲೀಕರಿಗೆ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ. ಈ ಸಂಬಂಧ ಕಳ್ಳರನ್ನು ಹಿಡಿದು ಸ್ಥಳೀಯರು 112ಗೆ ಕರೆ ಮಾಡಿ  ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಳನ್ನು ಠಾಣೆಗೆ ಕರೆದೊಯ್ದರು 

shivamogga news june 28 
shivamogga news june 28

ಭದ್ರಾವತಿ ಗ್ರಾಮಾಂತರದಲ್ಲಿ ನ್ಯೂಸೆನ್ಸ್ ಮಾಡುತ್ತಿದ್ದ ಯುವಕನಿಗೆ ತಿಳುವಳಿಕೆ

ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯ ಪಬ್ಲಿಕ್ ಶಾಲೆಯ ಬಳಿ ಯುವಕನೊಬ್ಬ ನ್ಯೂಸೆನ್ಸ್ ಮಾಡುತ್ತಿರುವ ಬಗ್ಗೆ ಸ್ಥಳೀಯರು ಕಂಪ್ಲೆಂಟ್ ಮಾಡಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ 112 ಪೊಲೀಸರು ತೆರಳಿ ಆಪಾದಿತ ಯುವಕನಿಗೆ ತಕ್ಕ ತಿಳುವಳಿಕೆ ಹಾಗೂ ಎಚ್ಚರಿಕೆ ನೀಡಿದ್ದಾರೆ. 

shivamogga news june 28 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು