shivamogga news : ಐರನ್ ಕ್ಯಾಸ್ಟಿಂಗ್ ಯಂತ್ರ​ ಸ್ಪೋಟ | 4 ಜನ ಕಾರ್ಮಿಕರಿಗೆ ಗಂಭೀರ ಗಾಯ

prathapa thirthahalli
Prathapa thirthahalli - content producer

shivamogga news : ಐರನ್ ಕ್ಯಾಸ್ಟಿಂಗ್ ಯಂತ್ರ​ ಸ್ಪೋಟ | 4 ಜನ ಕಾರ್ಮಿಕರಿಗೆ ಗಂಭೀರ ಗಾಯ

ಶಿವಮೊಗ್ಗ ಜಿಲ್ಲೆಯಲ್ಲಿರುವ ಅಬ್ಬಲಗೆರೆ ಕೃಷಿ ವಿವಿಯ ಬಳಿ ಇರುವ ಇಂಡಿಯಾ ಪಿಸ್ಟನ್  ಲಿಮಿಟೆಡ್ ಕಂಪನಿಯಲ್ಲಿ ಇಂದು ಬೆಳಿಗ್ಗೆ  ಐರನ್ ಕ್ಯಾಸ್ಟಿಂಗ್​ ಮಾಡುತ್ತಿರುವಾಗ ಯಂತ್ರ ಸಿಡಿದಿದೆ. ಇದರ ಪರಿಣಾಮ 4 ಜನ ಕಾರ್ಮಿಕರ ಕಾಲಿಗೆ ಸುಟ್ಟ ಗಾಯಗಳಾಗಿವೆ.

ಇಂದು ಬೆಳಿಗ್ಗೆ ಸುಮಾರು 7:30 ರ ಹೊತ್ತಿಗೆ ಫಸ್ಟ್​ ಶಿಫ್ಟ್​ನಲ್ಲಿ ಕೆಲಸಕ್ಕೆ ಕಾರ್ಮಿಕರು ಐರನ್​ ಕ್ಯಾಸ್ಟಿಂಗ್​​ ಮಾಡುತ್ತಿದ್ದರು. ಆವೇಳೆ ಯಂತ್ರ ಸಿಡಿದಿದೆ. ಇದರಿಂದ 4 ಜನ ಕಾರ್ಮಿಕರ ಕಾಲಿಗೆ ಸುಟ್ಟ ಗಾಯಗಳಾಗಿವೆ. ಕೂಡಲೇ ಅವರನ್ನು ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಎಲ್ಲಾ ಕಾರ್ಮಿಕರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಕಂಪನಿಯ ಹೆಚ್ಆರ್ ತಿಳಿಸಿದ್ದಾರೆ.

Share This Article