ಅಣ್ಣಾ ಎಂದು ಕರೆದಿಲ್ಲ ಎಂಬ ಕಾರಣಕ್ಕೆ ಮಾರಣಾಂತಿಕ ಹಲ್ಲೆ

ಕೆಲವೊಮ್ಮೆ ಸಣ್ಣ ಸಣ್ಣ ವಿಚಾರಗಳು  ಒಬ್ಬ ವ್ಯಕ್ತಿಯ ಇಗೋಗೆ ಹರ್ಟ್​ ಮಾಡುತ್ತದೆ  ಇದಕ್ಕೆ ಪೂರಕ ಎಂಬಂತಹ ಘಟನೆಯೊಂದು  ಶಿವಮೊಗ್ಗ ತಾಲೂಕಿನ ಕಾಚಿನ ಕಟ್ಟೆ ಬಳಿ ನಡೆದಿದೆ.   ಕೇವಲ  ಅಣ್ಣ ಎಂದು ಕರೆಯಲಿಲ್ಲ ಎಂಬ ಕಾರಣಕ್ಕೆ  ಒಬ್ಬ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

assault cases reported in Shivamogga
Shivamogga news  assault cases reported in Shivamogga

ಮಾಚೇನಹಳ್ಳಿ ಸೇರಿದಂತೆ ಶಿವಮೊಗ್ಗದ ವಿವಿಧ ಕ್ಯಾಂಪ್‌ಗಳಲ್ಲಿ ಡಿಸೆಂಬರ್ 24 ಕ್ಕೆ ವಿದ್ಯುತ್ ಸ್ಥಗಿತ

ಕಾಚಿನಕಟ್ಟೆಯ ನಿವಾಸಿ ಗಣೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ತಮ್ಮ ಸ್ನೇಹಿತನೊಂದಿಗೆ ಟೀ ಕುಡಿಯುತ್ತಿದ್ದಾಗ ಈ ಘಟನೆ ನಡೆದಿದೆ. ಅವರೆಲ್ಲರೂ ಸಹ ಗಣೇಶ್​ನ ಸ್ನೇಹಿತನಿಗೆ ಪರಿಚಯವಿದ್ದರು. ಆದರೆ ಗಣೇಶ್​ಗೆ ಅವರ ಹೆಸರು ಅಷ್ಟೇ ತಿಳಿದಿತ್ತು, ಆದರೆ ಅವರ ಮುಖ ಪರಿಚಯ ವಿರಲಿಲ್ಲ. ಈ ವೇಳೆ ಗಣೇಶ್​ಗೆ ಆತನ ಸ್ನೇಹಿತ ಉಳಿದವರು ಪರಿಚಯವನ್ನು ಮಾಡಲು ಮುಂದಾದರು. ಆಗ ಈತನ ಹೆಸರು ಈಶ್ವರ್ (ಹೆಸರನ್ನು ಬದಲಾಯಿಸಲಾಗಿದೆ) ​ ಎಂದು ಒಬ್ಬನನ್ನು ಪರಿಚಯ ಮಾಡಿಕೊಟ್ಟರು. ಆಗ ಗಣೇಶ್​ ಈಶ್ವರ್​ ಎಂದರೆ ಇವರೇನಾ ಎಂದು ಪರಿಚಯ ಮಾಡಿಕೊಂಡರು. ಆದರೆ ಅದು ಈಶ್ವರ್​ನ ಈಗೋವನ್ನು ಹರ್ಟ್​ ಮಾಡಿದಂತಾಯಿತು. ಆಗ ಈಶ್ವರ್​  ನನ್ನನ್ನು ಈಶ್ವರ್ ಎಂದು ಕರೆಯಬೇಡ, ಅಣ್ಣ ಎಂದು ಕರೆಯಬೇಕು ಎಂದು ಜಗಳ ಆರಂಭಿಸಿದ್ದಾನೆ.

Shivamogga news   ಜಗಳದ ನಂತರ ಗಣೇಶ್ ಮತ್ತು ಆತನ ಸ್ನೇಹಿತ ಬೈಕ್‌ನಲ್ಲಿ ಎಂ.ಆರ್.ಎಸ್ ಸರ್ಕಲ್ ಬಳಿ ತೆರಳುತ್ತಿದ್ದಾಗ, ಕಾರಿನಲ್ಲಿ ಬಂದ ಈಶ್ವರ್ ಮತ್ತು ಆತನ ತಂಡ ಬೈಕ್ ಅಡ್ಡಗಟ್ಟಿದೆ. ಕಾರಿನಿಂದ ಇಳಿದ ಈಶ್ವರ್ ಮತ್ತು ಇತರ ಐವರು ಗಣೇಶ್ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದಾಳಿ ನಡೆಸಿದ್ದಾರೆ. ಈ ವೇಳೆ ಕೀಲಿಯಿಂದ ಗಣೇಶ್ ಕಣ್ಣಿನ ಮೇಲ್ಭಾಗಕ್ಕೆ ಚುಚ್ಚಿದ್ದರಿಂದ ತೀವ್ರ ರಕ್ತಸ್ರಾವವಾಗಿದೆ. 

ಗಣೇಶ್‌ನ ಸ್ನೇಹಿತ ಬಿಡಿಸಲು ಬಂದರೂ ಬಿಡದ ಆರೋಪಿಗಳು, ಬಲವಂತವಾಗಿ ಗಣೇಶ್‌ನನ್ನು ಆಟೋವೊಂದರಲ್ಲಿ ಕೂರಿಸಿಕೊಂಡು ಪೊಲೀಸ್ ಠಾಣೆಗೆ ಹೋಗೋಣ ಎಂದು ಬೆದರಿಸಿದ್ದಾರೆ. ಆಟೋದಲ್ಲಿ ಸಾಗುವಾಗ ಸ್ಕ್ರೂ ಡ್ರೈವರ್‌ನಿಂದ ಗಣೇಶ್‌ನ ತೊಡೆ, ಬೆನ್ನು ಮತ್ತು ಕೈಗಳಿಗೆ ಚುಚ್ಚಿ ವಿಕೃತಿ ಮೆರೆದಿದ್ದಾರೆ. ಅಲ್ಲದೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡು ಗಣೇಶ್‌ನನ್ನು ಪೊಲೀಸರು ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಈ ಹಿನ್ನೆಲೆ ಶಿವಮೊಗ್ಗ ತುಂಗಾನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shivamogga news Brutal Assault in Kachinakatte