ಕಲ್ಟ್​ ಕ್ಲಾಸಾ… ಮಾಸಾ…., ಜೈದ್​ ಖಾನ್​​ ಏನಂದ್ರು..?

This Article Written by / Prathapa thirthahalli / ಡಿಸೆಂಬರ್ 23, 2025

Zaid Khan cult Movie Grand Premiere jan 23

ಶಿವಮೊಗ್ಗ :  ಬನಾರಸ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ನಟ ಜೈದ್ ಖಾನ್ ಅಭಿನಯದ ಕಲ್ಟ್​​  ಸಿನಿಮಾ 2026ರ ಜನವರಿ 23ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

Zaid Khan cult Movie Grand Premiere jan 23
Zaid Khan cult Movie Grand Premiere jan 23

 

ಶಿವಮೊಗ್ಗ ಚಟ್ ಪಟ್ ನ್ಯೂಸ್, ಭದ್ರಾವತಿಯಲ್ಲಿ ಜೂಜಾಟದ ದೂರು, ರಿಪ್ಪನ್‌ಪೇಟೆಯಲ್ಲಿ ಭೀಕರ ಅಪಘಾತ,ಕೆಎಸ್ಆರ್ಟಿಸಿ ಕಿರುಕುಳ!

ಇಂದು ನಗರದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಈ ಕುರಿತು ಚಿತ್ರದ ನಾಯಕ ನಟ ಜೈದ್ ಖಾನ್ ಮಾಹಿತಿ ನೀಡಿ ಇತ್ತೀಚಿನ ಯುವಜನತೆ ‘ಕಲ್ಟ್’ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಈ ಹೆಸರನ್ನು ಇಡಲಾಗಿದೆ. ‘ಕಲ್ಚರ್’ ಎಂಬ ಪದದಿಂದಲೇ ‘ಕಲ್ಟ್’ ಎಂಬ ಪದ ಹುಟ್ಟಿಕೊಂಡಿದ್ದು, ಇದಕ್ಕೆ ಮಾಸ್ ಎಂಬ ಅರ್ಥವೂ ಇದೆ. ಈ ಚಿತ್ರದಲ್ಲಿ ನಾಯಕನ ಪಾತ್ರವು  ಮಾಸ್ ಆಗಿರಲಿದ್ದು, ಸಿನಿಮಾವು ರೊಮ್ಯಾಂಟಿಕ್ ಹಾಗೂ ಆಕ್ಷನ್ ಅಂಶಗಳಿಂದ ಕೂಡಿದೆ ಎಂದರು

ಹಾಗೆಯೇ  ಸಿನಿಮಾದ ಕಥಾಹಂದರವು ಪ್ರೀತಿಯಲ್ಲಿ ಮೋಸಹೋಗುವ ಎಳೆಯೊಂದನ್ನು ಹೊಂದಿದ್ದು,  ನಾನು ಮಾಧವ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ.  ನಾನು ಈ ಚಿತ್ರದಲ್ಲಿ ಮೂರು ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು  ಇಡೀ ಕುಟುಂಬ ಕುಳಿತು ನೋಡಬಹುದಾದ ಸುಂದರ ಚಿತ್ರ ಇದಾಗಿದೆ ಎಂದರು.ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು, ಈಗಾಗಲೇ ಬಿಡುಗಡೆಯಾಗಿರುವ ಮೂರು ಹಾಡುಗಳು ಸೂಪರ್ ಹಿಟ್ ಆಗಿವೆ. ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಾಣಲಿದೆ ಎಂದರು. ಈ ವೇಳೆತಮ್ಮ ವೈಯಕ್ತಿಕ ಪಯಣದ ಬಗ್ಗೆ ಮಾತನಾಡಿದ ಜೈದ್ ಖಾನ್, 2017ರಲ್ಲಿ ಬಾಂಬೆಯಲ್ಲಿ ಸಿನಿಮಾ ತರಬೇತಿ ಪಡೆದಿದ್ದಾಗಿ ತಿಳಿಸಿದರು. ತಮ್ಮ ತಂದೆಗೆ ಮಗ ಉದ್ಯಮಿಯಾಗಲಿ ಎಂಬ ಆಸೆಯಿತ್ತು ಹಾಗೂ ಅವರಿಗೆ ಸಿನಿಮಾ ಅಥವಾ ರಾಜಕೀಯ ಕ್ಷೇತ್ರ ಅಷ್ಟಾಗಿ ಇಷ್ಟವಿರಲಿಲ್ಲ. ತಮಗೆ ಬಾಲಿವುಡ್‌ಗೆ ಹೋಗುವ ಹಲವು ಅವಕಾಶಗಳಿದ್ದರೂ, ಕನ್ನಡದ ಮೇಲಿನ ಪ್ರೀತಿಯಿಂದಾಗಿ ಇಲ್ಲಿಯೇ ಮುಂದುವರಿಯುತ್ತಿದ್ದೇನೆ ಎಂದರು.

ಚಿತ್ರದ ನಟಿ ಮಲೈಕಾ ಮಾತನಾಡಿ, ಈ ಸಿನಿಮಾದಲ್ಲಿ  ತಾನು ಎರಡು ಶೇಡ್‌ಗಳಲ್ಲಿ ನಟಿಸಿರುವುದಾಗಿ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ವಿಎಫ್ಎಕ್ಸ್ ಆಧಾರಿತ ಚಿತ್ರಗಳು ಹೆಚ್ಚಾಗಿ ಬರುತ್ತಿದ್ದು, ಕುಟುಂಬ ವರ್ಗವನ್ನು ಸೆಳೆಯುವ ಚಿತ್ರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ‘ಕಲ್ಟ್’ ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರು ಮೆಚ್ಚುವಂತಹ ಕೌಟುಂಬಿಕ ಚಿತ್ರವಾಗಿದೆ ಎಂದು ಹೇಳಿದರು. ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಚಿತಾ ರಾಮ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ‘ಉಪಾಧ್ಯಕ್ಷ’ ಚಿತ್ರದ ಖ್ಯಾತಿಯ ಅನಿಲ್ ಕುಮಾರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ‘ಲೋಕಿ ಸಿನಿಮಾಸ್’ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ ಎಂದರು.

Zaid Khan cult Movie Grand Premiere jan 23

Zaid Khan cult Movie Grand Premiere jan 23
Zaid Khan cult Movie Grand Premiere jan 23

 

This Article Written by / Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮುಂದಿನ ಸುದ್ದಿ ಒದಿ