COTPA ಕಾಯ್ದೆ ಉಲ್ಲಂಘನೆ : ಶಿವಮೊಗ್ಗದಲ್ಲಿ 50 ಕ್ಕೂ ಹೆಚ್ಚು ಪ್ರಕರಣ ದಾಖಲು : ಸಂಗ್ರಹವಾದ ದಂಡವೆಷ್ಟು ಗೊತ್ತಾ..?

prathapa thirthahalli
Prathapa thirthahalli - content producer

Shivamogga news :  ಶಿವಮೊಗ್ಗದಲ್ಲಿ  COTPA (ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ) ಕಾಯ್ದೆಯನ್ನು ಉಲ್ಲಂಘಿಸಿದ ವಿವಿಧ ಅಂಗಡಿಗಳ ಮೇಲೆ ಅಧಿಕಾರಿಗಳು ನಿನ್ನೆ ದಿಡೀರ್ ದಾಳಿ​ ನಡೆಸಿದ್ದಾರೆ.

ಮಂಡ್ಲಿ ಮತ್ತು ಬೈಪಾಸ್ ರಸ್ತೆಯ ಸುತ್ತಮುತ್ತ ನಡೆದ ಈ ಕಾರ್ಯಾಚರಣೆಯಲ್ಲಿ ಕಾಯ್ದೆಯನ್ನು ಉಲ್ಲಂಘಿಸಿದ ವಿವಿಧ ಅಂಗಡಿಗಳ ಮೇಲೆ ಒಟ್ಟು 58 ಪ್ರಕರಣಗಳನ್ನು ದಾಖಲಿಸಲಾಗಿದೆ. ನಿಯಮ ಉಲ್ಲಂಘನೆಗಾಗಿ ಅಧಿಕಾರಿಗಳು ಒಟ್ಟು 6,150 ದಂಡವನ್ನು ಸಂಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ, ತಂಬಾಕು ಉತ್ಪನ್ನಗಳ ನಿಯಮಬಾಹಿರ ಜಾಹೀರಾತಿಗೆ ಸಂಬಂಧಿಸಿದ 7 ಫಲಕಗಳನ್ನು ಸಹ ತೆರವುಗೊಳಿಸಲಾಯಿತು.

- Advertisement -

ಈ ವಿಶೇಷ ತಂಡದ ನೇತೃತ್ವವನ್ನು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ. ನಾಗರಾಜ್ ನಾಯಕ್ ಅವರು ವಹಿಸಿದ್ದರು. ತಂಡದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಚಂದ್ರಶೇಖರ್, ವಿ.ಡಿ.ಎಲ್‌ನ ವೈದ್ಯಾಧಿಕಾರಿಗಳಾದ ಡಾ. ಹರ್ಷವರ್ಧನ್, ಹಿರಿಯ ಆರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಬಸವರಾಜ್, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರರಾದ ಹೇಮಂತರಾಜ್ ಅರಸ್ ಕೆ.ಎಂ., ಸಮಾಜ ಕಾರ್ಯಕರ್ತರಾದ ರವಿರಾಜ್, ಆರೋಗ್ಯ ಮೇಲ್ವಿಚಾರಕರಾದ ವಿಕಾಸ್ ಮತ್ತು ಮಹಾನಗರ ಪಾಲಿಕೆ, ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

Shivamogga news

Shivamogga news

 

 

Share This Article
Leave a Comment

Leave a Reply

Your email address will not be published. Required fields are marked *