ಐಸ್‌ಕ್ರೀಂ ಕೇಳಿದ್ದಕ್ಕೆ ಗ್ಲಾಸ್​ನಿಂದ ಹೊಡೆದು ಹಲ್ಲೆ : ಏನಿದು ಪ್ರಕರಣ

prathapa thirthahalli
Prathapa thirthahalli - content producer

Shikaripura assault : ಶಿಕಾರಿಪುರ: ಐಸ್‌ಕ್ರೀಂ ಕೊಡಿಸುವಂತೆ ಕೇಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮೂವರು ಅಪರಿಚಿತ ಯುವಕರು ಒಬ್ಬರಿಗೆ ಹಲ್ಲೆ ನಡೆಸಿ ಗಾಯಗೊಳಿಸಿರುವ ಘಟನೆ ಶಿಕಾರಿಪುರ ಪಟ್ಟಣದ ಎಸ್.ಎಸ್. ರಸ್ತೆಯಲ್ಲಿ ನಡೆದಿದೆ. ಈ ಸಂಬಂಧ ಹಲ್ಲೆಗೊಳಗಾದ ವ್ಯಕ್ತಿ ಶಿಕಾರಿಪುರ ಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರು ಶಿಕಾರಿಪುರ ಟೌನ್‌ನ ಎಸ್.ಎಸ್. ರಸ್ತೆಯಲ್ಲಿರುವ ಅಂಗಡಿಯೊಂದರ ಮುಂಭಾಗದಲ್ಲಿ ಐಸ್‌ಕ್ರೀಂ ತಿನ್ನುತ್ತಾ ನಿಂತಿದ್ದರು. ಅದೇ ಸಮಯಕ್ಕೆ ಅಲ್ಲಿಗೆ ಬಂದ ಮೂವರು ಅಪರಿಚಿತ ವ್ಯಕ್ತಿಗಳಿಗೆ ದುರುದಾರರು ತಮಗೂ ಐಸ್‌ಕ್ರೀಂ ಕೊಡಿಸುವಂತೆ ಕೇಳಿದ್ದಾರೆ. ಅವರು ಐಸ್‌ಕ್ರೀಂ ಕೊಡಲು ನಿರಾಕರಿಸಿದಾಗ,ದೂರುದಾರ  ಪುನಃ ಕೇಳಿದ್ದಾರೆ. ಆಗ ಆ ಮೂವರಲ್ಲಿ ಇಬ್ಬರು ಆರೋಪಿತರು ದುರುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ. ಯಾಕೆ ಬೈಯುತ್ತಿದ್ದೀರ’ ಎಂದು ಪ್ರಶ್ನಿಸಿದ್ದಕ್ಕೆ, ಕೋಪಗೊಂಡ ಒಬ್ಬ ಆರೋಪಿತ, ಐಸ್‌ಕ್ರೀಂ ಗ್ಲಾಸ್‌ನಿಂದಲೇ ಅವರ ಮುಖಕ್ಕೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದಾಗಿ ದೂರುದಾರನ ಹಣೆಯ ಮುಂಭಾಗ, ಮೂಗಿನ ಭಾಗ ಮತ್ತು ಎಡಗಣ್ಣಿಗೆ ರಕ್ತಸ್ರಾವವಾಗಿ ಗಾಯಗಳಾಗಿವೆ. ಕೂಡಲೇ ಸ್ಥಳದಲ್ಲಿದ್ದವರು ಎಂಬುವವರು ಗಾಯಾಳುವನ್ನು ಶಿಕಾರಿಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದಾರೆ.

Shikaripura assault

Share This Article