ನಗರದ ಈ ಆಸ್ಪತ್ರೆಯಲ್ಲಿ  ನೋವು ರಹಿತ ಹೆರಿಗೆ ಸೇವೆ : ಡಾ,ಪೃಥ್ವಿ ಬಿ.ಸಿ

prathapa thirthahalli
Prathapa thirthahalli - content producer

Shivamogga news : ಶಿವಮೊಗ್ಗ: ನಗರದ ಮಾತೃ ವಾತ್ಸಲ್ಯ ಆಸ್ಪತ್ರೆಗೆ, ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಖ್ಯಾತ ತಜ್ಞರಾದ ಡಾ. ಗೀತಾ ರವಿ ಹಾಗೂ ಡಾ. ಅಮಿತಾ ಹೆಗ್ಡೆ ಅವರು ಪೂರ್ಣಾವಧಿಯಾಗಿ ಸೇರ್ಪಡೆಯಾಗಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕರಾದ ಡಾ. ಪೃಥ್ವಿ ಬಿ.ಸಿ. ತಿಳಿಸಿದ್ದಾರೆ. ಈ ಸೇರ್ಪಡೆಯಿಂದ ರೋಗಿಗಳಿಗೆ ಉತ್ತಮ ಹಾಗೂ ಭರವಸೆಯ ಚಿಕಿತ್ಸೆ ಲಭ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಪೃಥ್ವಿ, ಡಾ. ಗೀತಾ ರವಿ ಮತ್ತು ಡಾ. ಅಮಿತಾ ಹೆಗ್ಡೆ ಅವರು ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಸುಮಾರು 35 ವರ್ಷಗಳ ಸುದೀರ್ಘ ಅನುಭವ ಹೊಂದಿದ್ದಾರೆ. ಅವರು ನೋವು ರಹಿತ ಹೆರಿಗೆ, ಬಂಜೆತನ ನಿವಾರಣೆ ಮತ್ತು ಲ್ಯಾಪ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಗಳಲ್ಲಿ ಪರಿಣಿತರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಈ ವೈದ್ಯರು ಕಳೆದ 20 ವರ್ಷಗಳಿಂದ ನೋವು ರಹಿತ ಹೆರಿಗೆಯಲ್ಲಿ ವಿಶೇಷ ಪರಿಣತಿ ಪಡೆದಿದ್ದಾರೆ ಎಂದರು.

ಮಾತೃ ವಾತ್ಸಲ್ಯ ಆಸ್ಪತ್ರೆಯಲ್ಲಿ ಕಡಿಮೆ ದರದಲ್ಲಿ ಸಹಜ ಹೆರಿಗೆ ಹಾಗೂ ಶಸ್ತ್ರಚಿಕಿತ್ಸೆ ಸೌಲಭ್ಯಗಳು ಲಭ್ಯವಿದ್ದು, ಹಿರಿಯ ವೈದ್ಯರ ಸೇರ್ಪಡೆಯಿಂದ ರೋಗಿಗಳಿಗೆ ಉತ್ತಮ ಸಲಹೆ ಮತ್ತು ಚಿಕಿತ್ಸೆ ಸಿಗಲಿದೆ ಎಂದು ಡಾ. ಪೃಥ್ವಿ ತಿಳಿಸಿದ್ದಾರೆ.

Shivamogga news :  ಮಾತೃವಾತ್ಸಲ್ಯ ಆರೋಗ್ಯ ಕಾರ್ಡ್​’ ಜಾರಿ

ರೋಗಿಗಳ ಅನುಕೂಲಕ್ಕಾಗಿ, ಮಾತೃ ವಾತ್ಸಲ್ಯ ಆಸ್ಪತ್ರೆಯು ವಿಶೇಷ ‘ಮಾತೃವಾತ್ಸಲ್ಯ ಆರೋಗ್ಯ ಕಾರ್ಡ್ ಅನ್ನು ಜಾರಿಗೊಳಿಸಿದೆ. ಈ ಕಾರ್ಡ್‌ ಹೊಂದಿದವರು ಆಸ್ಪತ್ರೆಯ ಒಳರೋಗಿ, ಹೆರಿಗೆ ಹಾಗೂ ಶಸ್ತ್ರಚಿಕಿತ್ಸಾ ವಿಭಾಗಗಳಲ್ಲಿ ರಿಯಾಯಿತಿ ಪಡೆಯಬಹುದು. ಆಸಕ್ತರು ಈ ಕಾರ್ಡ್ ಅನ್ನು ಆಸ್ಪತ್ರೆಯಲ್ಲಿ ಪಡೆದುಕೊಳ್ಳಬಹುದು ಎಂದು ಡಾ. ಪೃಥ್ವಿ ಮನವಿ ಮಾಡಿದರು.

Shivamogga news ಮಾತೃ ವಾತ್ಸಲ್ಯ ಸುದ್ದಿಗೋಷ್ಟಿ
Shivamogga news ಮಾತೃ ವಾತ್ಸಲ್ಯ ಸುದ್ದಿಗೋಷ್ಟಿ
Share This Article