shivamogga manjunath rao ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ರವನ್ನು ಉಗ್ರರು ಕೊಂದ ಸಂದರ್ಭದಲ್ಲಿ, ಅವತ ಪತ್ನಿ ಪಲ್ಲವಿ ಹಾಗೂ ಮಗನನ್ನು ರಕ್ಷಿಸಿದ ವಿಡಿಯೋವೊಂದು ಮೊನ್ನೆಯೇ ಸೋಶಿಯಲ್ ಮೀಡಿಯಾ ಸೇರಿಕೊಂಡಿತ್ತು. ನಿನ್ನೆದಿನ ಈ ವಿಡಿಯೋದ ಬಗ್ಗೆ ಮಂಜುನಾಥ್ ರಾವ್ರವರ ಪತ್ನಿ ಪಲ್ಲವಿ ಖಚಿತ ಪಡಿಸಿದ್ದಾರೆ.
ಘಟನೆ ಬೆನ್ನಲ್ಲೆ ಸ್ಥಳೀಯರ ಮುಸ್ಲಿಮರು ನಮ್ಮ ರಕ್ಷಣೆಗೆ ಬಂದರು. ಒಬ್ಬರು ನನ್ನ ಮಗನನ್ನು ಬೆನ್ನ ಮೇಲೆ ಹೊತ್ತುಕೊಂಡು ಬಂದರು. ಇನ್ನೊಬ್ಬರು ನನ್ನನ್ನು ಕೈ ಹಿಡಿದುಕೊಂಡು ಕರೆದುಕೊಂಡು ಬಂದು ಆಸ್ಪತ್ರೆಗೆ ಸೇರಿಸಿದರು.
shivamogga manjunath rao ಅವರನ್ನು ಎಂದಿಗೂ ಮರೆಯಲ್ಲ
ಪಾಲ್ಗಾಮ್ನಲ್ಲಿ ಉಗ್ರಗಾಮಿಗಳು ಅವರನ್ನು ಸಹ ಕೊಲ್ಲುತ್ತಿದ್ದರು, ಅದರೆ ಅವರು ಬಿಸ್ಮಿಲ್ಲಾ ಎಂದು ಹೇಳುತ್ತಾ ಉಗ್ರರಿಂದ ಬಚಾವ್ ಆದರು. ಆನಂತರ ನಮ್ಮ ರಕ್ಷಣೆಗೆ ದಾವಿಸಿದರು, ಅವರನ್ನು ಯಾವತ್ತೂ ಮರೆಯಲ್ಲ ಎಂದು ಪಲ್ಲವಿ ಹೇಳಿದ್ದಾರೆ.
ಹಿಂದೂನಾ ಅಲ್ಲವಾ ಎಂದು ಕೇಳಿ ಕೊಂದ ಉಗ್ರರ ನಡುವೆ ಸ್ಥಳೀಯ ಮುಸ್ಲಿಮರು ಜೀವ ಉಳಿಸಲು ತಮ್ಮ ಜೀವ ಪಣವಾಗಿಟ್ಟಿದ್ದರ ಬಗ್ಗೆ ಪಲ್ಲವಿಯವರು ಮಾತನಾಡುವಾಗ ಭಾವುಕರಾಗಿದ್ದರು