ಸಾಗರ: ಬೈಕ್ ಅಪಘಾತದ, ಕಾರ್ಪೆಂಟರ್‌ಗೆ ಗಂಭೀರ ಗಾಯ
Shivamogga Fast news today live july 22 ಸಾಗರ: ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಅಣಲೆಕೊಪ್ಪ ಸೇತುವೆ ಬಳಿ ಸಿಗುವ ತಿರುವಿನಲ್ಲಿ ದ್ವಿಚಕ್ರ ವಾಹನಗಳ ನಡುವೆ ಡಿಕ್ಕಿಯಾಗಿದ್ದು, ಶ್ರೀಧರ ನಗರದ ಕಾರ್ಪೆಂಟರ್ ಸುಧೀರ್ ಆಚಾರಿ ಎಂಬವರಿಗೆ ಗಂಭೀರ ಗಾಯವಾಗಿದೆ. ಪುತ್ರಿಯೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ಗೆ ದಾಖಲಿಸಲಾಗಿತ್ತು. ಇದೀಗ ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತೀರ್ಥಹಳ್ಳಿ: ಮನೆಗೆ ನುಗ್ಗಿ ₹40,000 ನಗದು ಕಳ್ಳತನ /Shivamogga Fast news today live july 22
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನ ಕೋಣಂದೂರಿನ ಸೊನಗಾರೆ ಗ್ರಾಮದಲ್ಲಿನ ಮನೆಯೊಂದರಲ್ಲಿ ಕಳ್ಳತನ ನಡೆದಿದೆ. ಮನೆ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದ ಕಳ್ಳರು, ಸುಮಾರು ₹40,000 ಕ್ಯಾಶ್ ದೋಚಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಮನೆಯ ಮಾಲೀಕರು ತಮ್ಮ ಮಗಳ ಮನೆಗೆ ತೆರಳಿದ್ದರು. ಪಕ್ಕದ ಮನೆಯವರಿಂದ ವಿಚಾರ ತಿಳಿದ ಅವರು, ಈ ಸಂಬಂಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಡಿಪೋ ಎದುರು ಬೈಕ್ ಕಳ್ಳತನ
ಶಿವಮೊಗ್ಗ: ನಗರದ ಕೆಎಸ್‌ಆರ್‌ಟಿಸಿ ಡಿಪೋ (KSRTC Depot) ಮುಂದೆ ನಿಲ್ಲಿಸಿದ್ದ ಬಜಾಜ್ ಚಾಂಪಿಯನ್ ಬೈಕ್ ಕಳ್ಳತನವಾಗಿದೆ. ಕೆಎಸ್‌ಆರ್‌ಟಿಸಿ ಕಿರಿಯ ಸಹಾಯಕ ಸುಧೀಂದ್ರ ಶೆಣೈ ಸೇರಿದ್ದ ಬೈಕ್ ಕಳ್ಳತನವಾಗಿದ್ದು, ಈ ಕುರಿತಾಗಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ಕೊಟ್ಟಿದ್ದಾರೆ.
ಶಿವಮೊಗ್ಗ: ಕಾರಿನಲ್ಲಿ ತೆರಳುತ್ತಿದ್ದವರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ Shivamogga Fast news today live july 22
ಶಿವಮೊಗ್ಗ: ನಗರದ ಸಾಗರ ರಸ್ತೆಯಲ್ಲಿರುವ ಬಾರ್ ಒಂದರ ಮುಂದೆ ಕಾರಿನಲ್ಲಿ ತೆರಳುತ್ತಿದ್ದವರನ್ನ ಅಡ್ಡಗಟ್ಟಿ ಹಲ್ಲೆ ಮಾಡಲಾಗಿದೆ. ಉದ್ಯಮಿಗಳಾದ ಪ್ರದೀಪ್ ಮತ್ತು ಯೋಗೀಶ್ ಗೌಡ ಘಟನೆಯಲ್ಲಿ ಗಾಯಗೊಂಡಿದ್ದು, ವಿನೋಬನಗರ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸ್ತಿದ್ದಾರೆ.
Shivamogga Fast news today live july 22 Sagara accident, Carpenter injured, Anale Koppa Bridge, Thirthahalli theft, Cash stolen, Konanduru, Shivamogga bike theft, KSRTC depot, Sudheendra Shenoy, Shivamogga assault, Sagara road, Assault on businessmen, Pradeep, Yogeesh Gowda , #SagaraAccident #ThirthahalliTheft #ShivamoggaCrime #BikeTheft #AssaultCase #KarnatakaNews #CrimeNews #RoadSafety