ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 13, 2025 : ನೀವು ನಂಬುತ್ತೀರೋ ಇಲ್ಲವೋ! ಆದರೆ ವಿಚಾರವಂತೂ ಸತ್ಯ, ಶಿವಮೊಗ್ಗ ಒಂದರಲ್ಲೆ ಕಳೆದ 8 ತಿಂಗಳಿನಲ್ಲಿ ₹9 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಈ ಕುರಿತಾಗಿ ಮಾತನಾಡುತ್ತಾ, ಶಿವಮೊಗ್ಗದಲ್ಲಿ ಸೈಬರ್ ವಂಚನೆ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿವೆ ಎಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್‌ಪೆಕ್ಟರ್ ವಿರೂಪಾಕ್ಷಪ್ಪ ವೈ.ಎಸ್. ಮಾಹಿತಿ ನೀಡಿದ್ದಾರೆ.

ಕಳೆದ 8 ತಿಂಗಳುಗಳಲ್ಲಿ 9 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಜನರು ಕಳೆದುಕೊಂಡಿರುವ 86 ಪ್ರಕರಣಗಳು ದಾಖಲಾಗಿವೆ. ಆದರೆ, ದೂರು ನೀಡುವಲ್ಲಿನ ವಿಳಂಬದಿಂದಾಗಿ ಕೇವಲ 50 ಲಕ್ಷ ರೂಪಾಯಿಗಳನ್ನು ಮಾತ್ರ ಮರುಪಡೆಯಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಜಾಜ್ ಫೈನಾನ್ಸ್ ಲಿಮಿಟೆಡ್‌ನ ಸಹಯೋಗದಲ್ಲಿ ಸೂರ್ಯ ಕಂಫರ್ಟ್‌ನಲ್ಲಿ ನಡೆದ ‘ನಾಕೌಟ್ ಡಿಜಿಟಲ್ ಫ್ರಾಡ್’ ಸೈಬರ್ ವಂಚನೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ವರ್ಷವೂ 144 ಪ್ರಕರಣಗಳಲ್ಲಿ ಜನರು 11 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಕಳೆದುಕೊಂಡಿದ್ದರು, ಅದರಲ್ಲಿ ಕೇವಲ 2 ಕೋಟಿ ರೂಪಾಯಿ ಮಾತ್ರ ವಾಪಸ್ ಪಡೆಯಲು ಸಾಧ್ಯವಾಗಿತ್ತು ಎಂದು ವಿವರಿಸಿದರು.
ಸೈಬರ್ ವಂಚನೆ ನಡೆದ ನಂತರದ ಮೊದಲ 24 ಗಂಟೆಗಳು ಅತ್ಯಂತ ನಿರ್ಣಾಯಕವಾಗಿದ್ದು, ಈ ಅವಧಿಯಲ್ಲಿ ವಂಚಕರನ್ನು ಪತ್ತೆಹಚ್ಚುವ ಮತ್ತು ಹಣವನ್ನು ಮರಳಿ ಪಡೆಯುವ ಸಾಧ್ಯತೆಗಳು ಅಧಿಕವಾಗಿರುತ್ತವೆ. ಆದ್ದರಿಂದ, ಸಾರ್ವಜನಿಕರು ತಕ್ಷಣವೇ ದೂರು ದಾಖಲಿಸುವಂತೆ ಅವರು ಮನವಿ ಮಾಡಿದರು. (ಕ್ರಿಟಿಕಲ್)
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!