ಶಿವಮೊಗ್ಗ : ಶಿವಮೊಗ್ಗ ಶಾಸಕರು ಹಾಗೂ ಶಿಕ್ಷಣ ಸಚಿವರು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯವನ್ನು ಮಾಡದೆ ಕಾಲಹರಣ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ರಸ್ತೆ ತಡೆ ಚಳುವಳಿಯನ್ನು ನಡೆಸಲಾಗುತ್ತದೆ ಎಂದು ಎ ಐ ಎಂ ಐ ಎಂ ಪಕ್ಷದ ನಗರಾಧ್ಯಕ್ಷ ಮೊಹಮ್ಮದ್ ವಾಸಿಕ್ ಎಚ್ಚರಿಸಿದರು.
ಶಿವಮೊಗ್ಗ ಜೈಲ್ನಲ್ಲಿದ್ದ ಮಾಸ್ಕ್ ಮ್ಯಾನ್ಗೆ ಜಾಮೀನು! ಆದರೆ? ವಿಷಯ ಇನ್ನಷ್ಟಿದೆ!
ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಶಾಸಕ ಹಾಗೂ ಸಚಿವರು ಇಬ್ಬರೂ ಸಹ ಕಾಲಾ ಹರಣ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ರಸ್ತೆ, ಕುಡಿಯುವ ನೀರಿನ ಘಟಕ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿಲ್ಲ. ಶಿವಮೊಗ್ಗ ಶಾಸಕರು ಹಿಂದೂ ಮುಸ್ಲಿಂ ಎಂದು ಯಾವಾಗಲೂ ಅದರದ್ದೇ ವಿಚಾರವನ್ನು ಮಾತನಾಡುತ್ತಾರೆ. ಇತ್ತ ಸಚಿವರು ಅಭಿವೃದ್ಧಿಯ ಗೋಜಿಗೆ ಹೋಗುತ್ತಿಲ್ಲ ಎಂದು ಆಪಾದಿಸಿದರು.


ಹಾಗೆಯೇ ಶಿವಮೊಗ್ಗದ ಸವಾಯಿಪಾಳ್ಯ, ಇಲ್ಲಿಯಾಸ್ ನಗರ, ತುಂಗಾ ನಗರ, ಆರ್ ಎಂ ಎಲ್ ನಗರದ ರಸ್ತೆಗಳಲ್ಲಿ ವಾಹನ ಓಡಾಡುವುದಿರಲಿ, ಮನುಷ್ಯರು ಓಡಾಡುವುದು ಕಷ್ಟಕರವಾಗಿದೆ. ಇತ್ತ ಬೀದಿ ನಾಯಿಗಳ ಕಾಟದಿಂದ ಮಕ್ಕಳು ಶಾಲೆಗೆ ಹೋಗುವುದಕ್ಕೂ ತೊಂದರೆಯಾಗುತ್ತಿದೆ. ನಮ್ಮ ಮುಖ್ಯ ಧ್ಯೇಯ ಏನೆಂದರೆ ಶಿವಮೊಗ್ಗ ಅಭಿವೃದ್ಧಿಯಾಗಬೇಕು. ಶಿವಮೊಗ್ಗ ಅಭಿವೃದ್ದಿ ಆದರೆ ಏರ್‌ಪೋರ್ಟ್ ಹತ್ತಿರವಿರುವುದರಿಂದ ಇನ್ವೆಸ್ಟರ್ಸ್‌ಗಳು ಹೆಚ್ಚಾಗಿ ಬಂದು ಹೂಡಿಕೆ ಮಾಡುತ್ತಾರೆ. ಇದರಿಂದಾಗಿ ಅನೇಕ ಯುವಕರಿಗೆ ಉದ್ಯೋಗವಕಾಶ ದೊರೆಯುತ್ತದೆ. ಎಂದು ಅಭಿಪ್ರಾಯಪಟ್ಟರು.
ಹೀಗಾಗಿ ಶಾಸಕರು ಹಾಗೂ ಸಚಿವರು ವೋಟ್ ಬ್ಯಾಂಕ್ ಹಾಗೂ ಇನ್ನಿತರೇ ವಿಚಾರವನ್ನು ಹಿಡಿದುಕೊಂಡು ಕಾಲಹರಣ ಮಾಡದೆ ಅಭಿವೃದ್ದಿ ಕಡೆ ಗಮನ ಹರಿಸಬೇಕು. ನಾವು ನಿಮಗೆ ಅಭಿವೃದ್ದಿ ವಿಚಾರವಾಗಿ 15 ದಿನ ಗಡುವು ನೀಡುತ್ತಿದ್ದು, ಅದರೊಳಗೆ ಅಭಿವೃದ್ದಿ ಕಾರ್ಯವನ್ನು ಪ್ರಾರಂಭಿಸದಿದ್ದರೆ ರಸ್ತೆ ತಡೆ ಚಳುವಳಿ ನಡೆಸುವುದಾಗಿ ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಸಯ್ಯದ್ ಯಾಸಿನ್, ಶಾಭಾಝ್ ಖಾನ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
SHIVAMOGGA AIMIM party Warns MLA, & Minister


