11 ವರ್ಷದ ಹಿಂದೆ ನಾಪತ್ತೆಯಾಗಿದ್ದ ಅಪರಾಧಿಯನ್ನ ಹಿಡಿದು ತಂದ ಭದ್ರಾವತಿ ಪೊಲೀಸ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 22, 2024 ‌‌   ಕಳೆದ ಸುಮಾರು 11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬನನ್ನ ಭದ್ರಾವತಿ ಪೊಲೀಸರು ಇದೀಗ ಅರೆಸ್ಟ್‌ ಮಾಡಿದ್ಧಾರೆ.  ಕನ್ವಿಕ್ಷನ್ ವಾರೆಂಟ್ ಹೊಂದಿದ್ದ  ಆರೋಪಿಯನ್ನ ಇಲ್ಲಿನ ಹಳೇನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.  2011ನೇ ಸಾಲಿನ ಹಳೇ ನಗರ ಠಾಣೆಯಲ್ಲಿ ದಾಖಲಾಗಿದ್ದ  ಪ್ರಕರಣದಲ್ಲಿ 2ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿ ಪೆರುಮಾಳ್‌ಗೆ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ, ₹10 ಸಾವಿರ ದಂಡ … Read more

ಜಸ್ಟ್‌ ಟಿವಿ ರಿಮೋಟ್‌ ವಿಚಾರಕ್ಕೆ ಜೀವವನ್ನೆ ಕೊಟ್ಟ ಅಪ್ರಾಪ್ತೆ | ಏನಿದು ಪ್ರಕರಣ

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 21, 2024 ‌‌   ಟಿವಿ ರಿಮೋಟ್‌ಗಾಗಿ ಇಬ್ಬರ ನಡುವೆ ಕಿತ್ತಾಟ ನಡೆದು, ಇದೇ ವಿಚಾರಕ್ಕೆ ಅಜ್ಜಿ ಬೈದಳು ಎಂದು ನೊಂದು ಅಪ್ರಾಪ್ತೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಅಪ್ರಾಪ್ತೆ ಭದ್ರಾವತಿ ಕಲ್ಲಿಹಾಳ್‌ ನಿವಾಸಿಯಾಗಿದ್ದು ತನ್ನ ಅಜ್ಜಿಯ ಜೊತೆ ವಾಸವಿದ್ದು ಓದುತ್ತಿದ್ದಳು ಈ ನಡುವೆ ಘಟನೆ ನಡೆದ ದಿನ ಅಪ್ರಾಪ್ತೆ ಟಿವಿ ನೋಡುತ್ತಿದ್ದ ಸಂದರ್ಭ ಇನ್ನೊಂದು ಮಗು ಅಲ್ಲಿಗೆ ಬಂದಿದೆ. … Read more

ಭದ್ರಾವತಿ ರೈಸ್‌ಮಿಲ್‌ನಲ್ಲಿ ಸ್ಫೋಟ | ರಘು ಮೃತದೇಹ ಪತ್ತೆ | ನಡೆದಿದ್ದೇನು? | SP ಹೇಳಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 20, 2024 ‌‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಚನ್ನಗಿರಿ ರಸ್ತೆ ಬಳಿ ಇದ್ದ ರೈಸ್‌ ಮಿಲ್‌ ವೊಂದರಲ್ಲಿ ನಿನ್ನೆ ದಿನ ರಾತ್ರಿ ಸ್ಫೋಟ ಸಂಭವಿಸಿದೆ. ಅಲ್ಲಿ ನಡೆದಿದ್ದು ಏನು ಎನ್ನುವುದನ್ನ ವಿವರವಾಗಿ ಗಮನಿಸುವುದಾದರೆ, ಭದ್ರಾವತಿಯ ಚನ್ನಗಿರಿ ರಸ್ತೆಯ ಗಣೇಶ್ ರೈಸ್ ಮಿಲ್‌ನಲ್ಲಿ ಬಾಯ್ಲರ್ ಸ್ಫೋಟ ಸಂಭವಿಸಿ 7 ಜನರು ಗಾಯಗೊಂಡಿದ್ದಾರೆ ಎಂಬುದು ಮಾಹಿತಿ. ನಡೆದಿದ್ದೇನು? ಸೀಗೆಬಾಗಿಯಲ್ಲಿರುವ ಗಣೇಶ್‌ ರೈಸ್‌ ಮಿಲ್‌ನಲ್ಲಿ ಸಂಜೆ 7 ಗಂಟೆ … Read more

ಪ್ರಾಪರ್ಟಿ ರಿಟರ್ನ್‌ ಪರೇಡ್‌ ವೇಳೆ ಹೊರಬಿದ್ದ ಭದ್ರಾವತಿ MLA ಸಹೋದರನ ಕಾರು ಕಳ್ಳತನ ಕೇಸ್‌ | ನಡೆದಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 17, 2024 ‌‌  ಶಿವಮೊಗ್ಗ ಪೊಲೀಸ್‌ ಇಲಾಖೆ ನಿನ್ನೆದಿನ ಶಿವಮೊಗ್ಗದಲ್ಲಿ 2024 ರ ಅವಧಿಯಲ್ಲಿ ನಡೆದ ವಿವಿಧ ಕಳ್ಳತನ ಪ್ರಕರಣಗಳಲ್ಲಿ ವಶಪಡಿಸಿಕೊಳ್ಳಲಾದ ಪ್ರಾಪರ್ಟಿ ಪರೆಡ್‌ ನಡೆಸಿದೆ. ಈ ವೇಳೆ  ಭದ್ರಾವತಿ ಶಾಸಕ ಬಿಕೆ ಸಂಗಮೇಶ್‌ರವರ ಸಹೋದರನ ಕಾರು ಕಳ್ಳತನದ ಪ್ರಕರಣವನ್ನ ಭೇದಿಸಿದ ವಿಚಾರ ಬೆಳಕಿಗೆ ಬಂಧಿದೆ.  ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರವರ ಸಹೋದರ ಶಿವಕುಮಾರ್ ಎಂಬವರು ಖರೀದಿಸಿದ್ದ ಎರ್ಟಿಗಾ ಕಾರನ್ನು, ಶಿವಮೊಗ್ಗದ ಸೆಕೆಂಡ್‌ ಹ್ಯಾಂಡ್‌ ವಾಹನಗಳ ಶೋರೂಂನಿಂದ … Read more

ಖಾಲಿ ಜಾಗದಲ್ಲಿ ಕುತ್ತಿಗೆ ಹಿಸುಕಿ ಯುವಕನ ಕೊಲೆ | ತಂಗಿ ಗಂಡನಿಂದಲೇ ಸುಪಾರಿ?

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 14, 2024 ‌‌ ಶಿವಮೊಗ್ಗ ಜಿಲ್ಲೆ ಭಧ್ರಾವತಿ ತಾಲ್ಲೂಕು ಕಾರೇಹಳ್ಳಿ ಗ್ರಾಮದ ಬಳಿಯ ಓರ್ವನನ್ನ ಕೊಲೆ ಮಾಡಿ ಖಾಲಿ ಏರಿಯಾದಲ್ಲಿ ಎಸೆದುಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಇಲ್ಲಿನ ತಾಳಯೆಣ್ಣೆ ಪ್ಯಾಕ್ಟರಿ ಬಳಿ ಘಟನೆ ನಡೆದಿದೆ.  ವ್ಯಕ್ತಿಯೊಬ್ಬನನ್ನ ಕೊಲೆ ಮಾಡಿ ಇಲ್ಲಿ ಎಸೆಯಲಾಗಿದ್ದು, ಕೊಳೆತ ವಾಸನೆಯ ಜಾಡು ಹಿಡಿದ ರೈತರಿಗೆ ಮೃತದೇಹ ಕಾಣಿಸಿದೆ. ತಕ್ಷಣವೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಸ್ಥಳಕ್ಕೆ ಬಂದು ಪರಿಶೀಲನೆ … Read more

ತಾಲ್ಲೂಕು ಆಸ್ಪತ್ರೆಯಲ್ಲಿ ಸಿಗದ ಚಿಕಿತ್ಸೆ ? | ಗೇಟ್‌ ಮುಂದೆ ರೋಗಿ ಮಲಗಿಸಿ ಸಂಬಂಧಿಕರ ಆರೋಪ!? ಏನಿದು?

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 7, 2024 ‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಚಿಕಿತ್ಸೆ ಸಿಗದೇ ಆಸ್ಪತ್ರೆಯ ಬಾಗಿಲಲ್ಲಿಯೇ ಮಲಗಿಸಿದ ಪ್ರಸಂಗವೊಂದು ನಡೆದಿದೆ. ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದ ಯುವಕನೊಬ್ಬನಿಗೆ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡಿಲ್ಲ ಎಂಬುದು ಆರೋಪ. ಇದೇ ಕಾರಣಕ್ಕೆ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ ರೋಗಿಯನ್ನ ಆಸ್ಪತ್ರೆಯ ಬಾಗಿಲಲ್ಲಿ ಮಲಗಿಸಿದ್ದಾರೆ. ಆ ಬಳಿಕ ನಗರಸಭೆ ಮಾಜಿ ಸದಸ್ಯರೊಬ್ಬರು ಆಸ್ಪತ್ರೆಗೆ ಸಿಬ್ಬಂಧಿಗೆ ಕರೆ ಮಾಡಿ ಹೇಳಿ … Read more

ತಿಥಿಯೂಟದ ವೇಳೆ ಸಂಬಂಧಿಕರ ಗಲಾಟೆ, ಪೊಲೀಸರ ಎಂಟ್ರಿ | ಆಟೋ ಬಾಡಿಗೆ ವಿಚಾರಕ್ಕೆ ಕಿರಿಕ್‌ , 112 ಮಾಡಿದ್ದೇನು?

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024 ‌  ತಿಥಿಯೂಟದ ವೇಳೆ ಸಂಬಂಧಿಕರ ನಡುವೆ ಗಲಾಟೆಯಾಗಿ ಪೊಲೀಸರು ಮಧ್ಯಪ್ರವೇಶ ಮಾಡಿದ ಪ್ರಸಂಗವೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಲ್ಲಿ ನಡೆದಿದೆ. ಇಲ್ಲಿನ ನ್ಯೂಟೌನ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿಯೊಬ್ಬರು ತಮ್ಮ ಸಂಬಂಧಿಕರೊಬ್ಬರ ತಿಥಿಯೂಟ ಆಯೋಜಿಸಿದ್ದರು. ಈ ವೇಳೆ ತಿಥಿಯೂಟಕ್ಕೆ ಬಂದಿದ್ದ ಸಂಬಂಧಿಕರ ನಡುವೆ ಗಲಾಟೆಯಾಗಿದೆ. ಸ್ಥಳದಲ್ಲಿದ್ದವರು ಕೈ ಮೀರಿದ ಪರಿಸ್ಥಿತಿಯಲ್ಲಿ ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು … Read more

ಏರಿಯಾ ಯುವಕನಿಗೆ ಬುದ್ದಿವಾದ ಹೇಳಿದ್ದೆ ತಪ್ಪಾಯ್ತು | ನಗರಸಭೆ ಮಾಜಿ ಸದಸ್ಯನಿಗೆ ಬಿತ್ತು ಮಚ್ಚಿನೇಟು

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 6, 2024 ‌  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ಬುದ್ದಿವಾದ ಹೇಳಿದ್ದಕ್ಕೆ ನಗರಸಭೆ ಮಾಜಿ ಸದಸ್ಯನ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ಮಾಡಲಾಗಿದೆ.  ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆ ಕುರಿತಾಗಿ ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇಲ್ಲಿನ ನಿವಾಸಿ ನಗರಸಭೆ ಮಾಜಿ ಸದಸ್ಯರೊಬ್ಬರು, ತಮ್ಮ ಏರಿಯಾದ ನಿವಾಸಿ ಅನಿ ಎಂಬಾತನಿಗೆ ಬುದ್ದಿವಾದ ಹೇಳಿದ್ದರು.  ಅನಿ ಏರಿಯಾದಲ್ಲಿ ಕುಡಿದು ದಾಂಧಲೆ ನಡೆಸ್ತಿದ್ದ … Read more

ಮಾಲೀಕರಿಲ್ಲದ ವೇಳೆಯಲ್ಲಿ ಮನೆ ಬಾಗಿಲಿನಲ್ಲಿಯೇ ನಡೆದಿತ್ತು ಬ್ಲ್ಯಾಕ್‌ ಮ್ಯಾಜಿಕ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024 ‌ ಮನೆಯ ಮುಂದೆ ಮೀನು, ಮೊಟ್ಟೆ, ಗೊಂಬೆ ಇತ್ಯಾದಿಗಳನ್ನ ಬಳಸಿಕೊಂಡು ವಾಮಾಚಾರ ಮಾಡಿಸಿರುವ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ನಡೆದಿದೆ. ಇಲ್ಲಿನ ಅಂತರಗಂಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರತ್ನಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.  ಡಿಸೆಂಬರ್‌ 1 ರಂದು ಅಮಾವಾಸ್ಯೆಯ ದಿನ ಈ ಘಟನೆ ನಡೆದಿದೆ ಎನ್ನಲಾಗಿದೆ. ಇಲ್ಲಿನ ನಿವಾಸಿಯೊಬ್ಬರು ಮನೆಯಲ್ಲಿಲ್ಲದ ವೇಳೆ ಅವರ ಮನೆ ಬಾಗಿಲ … Read more

ಬಚ್ಚಲು ಮನೆಯಲ್ಲಿದ್ದ ಸಿಲಿಂಡರ್‌ ಸ್ಫೋಟ | ತೀವ್ರವಾಗಿ ಗಾಯಗೊಂಡಿದ್ದ ಕೇಶವಮೂರ್ತಿ ಸಾವು

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 4, 2024 ‌ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂ ಓಲ್ಡ್‌ ಟೌನ್‌  ನಲ್ಲಿ ಸಂಭವಿಸಿದ್ದ ಅಗ್ನಿಆಕಸ್ಮಿಕದಲ್ಲಿ ಗಾಯಗೊಂಡಿದ್ದ ಓರ್ವರು ಸಾವನ್ನಪ್ಪಿದ್ದಾರೆ.  ಹಳೇನಗರದ ಕಾಳಿಕಾಂಬ ದೇವಿ ದೇವಸ್ಥಾನ ರಸ್ತೆಯಲ್ಲಿ ಕಳೆದ ಶುಕ್ರವಾರ ಸಂಜೆ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಅನಾಹುತ ಸಂಭವಿಸಿತ್ತು. ಈ ಘಟನೆಯಲ್ಲಿ ಕೇಶವಮೂರ್ತಿ (60) ಎಂಬವರು ತೀವ್ರವಾಗಿ ಗಾಯಗೊಂಡಿದ್ದರು.    ಇದೀಗ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ವಿಕ್ಟೋರಿಯಾ ಆಸತ್ರೆಯಲ್ಲಿ ನಿನ್ನೆದಿನ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಗಾಯಗೊಂಡಿದ್ದ … Read more

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು