ದಿನಾಂಕ 17-01-2023 ರಂದು ಬೆಳಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ( Shimoga rural police ) ಠಾಣಾ ವ್ಯಾಪ್ತಿಯ ಬಿದರೆ ಗ್ರಾಮದ ವಾಸಿ ಪ್ರದೀಪ್ ರವರ ಮನೆಯಲ್ಲಿ ಕಳ್ಳತನವಾಗಿತ್ತು. ಅವರು ಮನೆ ಬಾಗಿಲಿಗೆ ಬೀಗ ಹಾಕಿಕೊಂಡು ಭದ್ರಾವತಿ ಗೆ ಹೋಗಿದ್ದರು. ದಿನಾಂಕ 27/01/2023 ರಂದು ವಾಪಾಸ್ ಬಂದು ಮನೆಯ ಮುಂಭಾಗಿಲಿಗೆ ಹಾಕಿದ್ದ ಬೀಗ ತೆಗೆದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ.
ಕಳ್ಳರು ಅಡಿಗೆ ಮನೆಯ ಬಾಗಿಲ ಚಿಲಕ ಮುರಿದು ಗಾಡ್ರೇಜ್ ಬೀರುವಿನಲ್ಲಿ ಇಟ್ಟಿದ್ದ 10 ಗ್ರಾಂ ತೂಕದ ಬಂಗಾರದ ಸರ, 4,000/- ರೂ ನಗದು ಹಣ ಮತ್ತು Smart Watch ಅನ್ನು ಕಳ್ಳತನ ಮಾಡಿಕೊಂಡು ಹೋಗಿರುದ್ದರು. ಈ ಸಂಬಂಧ 28/01/2023 ರಂದು ಗುನ್ನೆ ಸಂಖ್ಯೆ 0023/2023 ಕಲಂ 454, 457, 380 ಐಪಿಸಿ ಅನ್ವಯ ಕೇಸ್ ದಾಖಲಾಗಿತ್ತು.
BREAKING NEWS : ಶಿವಮೊಗ್ಗ ಜಿಲ್ಲಾ ಎಡಿಸಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ ವರ್ಗಾವಣೆ!
ಸದ್ಯ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಕೇವಲ 24 ಗಂಟೆಯ ಒಳಗಾಗಿ ಪ್ರಕರಣದ ಆರೋಪಿ ಪುನೀತ ಬಿನ್ ಗುರುಬಸಪ್ಪ, 19 ವರ್ಷ ಹರಳಹಳ್ಳಿ ಗ್ರಾಮ, ಹೊನ್ನಾಳಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಈತನನ್ನು ಬಂಧಿಸಲಾಗಿದೆ. ಈತನಿಂದ ಪ್ರಕರಣಕ್ಕೆ ಸಂಬಂಧಿಸಿದ ಅಂದಾಜು ಬೆಲೆ 40,000/- ರೂಗಳ 8 ಗ್ರಾಂ ತೂಕದ ಬಂಗಾರದ ಸರ, ರೂ 2800/- ನಗದು ಹಣ ಮತ್ತು ಅಂದಾಜು ಮೌಲ್ಯ 2,500/- ರೂ ಗಳ FIRE BOLTT ಕಂಪನಿಯ ಒಂದು ಸ್ಮಾರ್ಟ್ ವಾಚ್ ಅನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ. ಪ್ರಕರಣ ದಾಖಲಾದ 24 ಗಂಟೆಯ ಒಳಗಾಗಿ ಆರೋಪಿತರನ್ನು ಪತ್ತೆ ಹಚ್ಚಿ ದಸ್ತಗಿರಿ ಮಾಡಿದ ತನಿಖಾ ತಂಡದ ಉತ್ತಮ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರು ಶ್ಲಾಘಿಸಿ ಅಭಿನಂದಿಸಿರುತ್ತಾರೆ.
ಇದೇ ರೀತಿ ಮತ್ತೊಂದು ಪ್ರಕರಣವನ್ನು ಶಿವಮೊಗ್ಗ ಪೊಲೀಸರು ಭೇದಿಸಿದ್ದಾರೆ ಅದರ ವಿವರ ಇಲ್ಲಿದೆ ಓದಿ : Vinobanagar police station : ಮನೆ ಬೀಗದ ಕೀಯನ್ನು ಸಂಧು ಮೂಲೆಯಲ್ಲಿ ಇಟ್ಟು ಹೋಗಬೇಡಿ! ಹುಷಾರ್ ಹೀಗೂ ಆಗುತ್ತೆ ! 24 ಗಂಟೆಯಲ್ಲಿ ಕಳ್ಳರನ್ನ ಹಿಡಿದ ಪೊಲೀಸರು
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
