Shimoga police festival preparations ಶಿವಮೊಗ್ಗ: ಮುಂಬರುವ ಗೌರಿ-ಗಣೇಶ (Gauri-Ganesha) ಮತ್ತು ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ ಶಿವಮೊಗ್ಗ ಪೊಲೀಸರು ಸಿದ್ಧತೆಗಳನ್ನು ಇನ್ನಷ್ಟು ಚುರುಕುಗೊಳಿಸಿದ್ದಾರೆ. ಈ ನಡುವೆ ಎಸ್‌ಪಿ ಮಿಥುನ್ ಕುಮಾರ್ ಕೂಡ ಭಾನುವಾರ ಫೀಲ್ಡ್ಗೆ ಇಳಿದು ಪೊಲೀಸರಿಗೆ ಅಗತ್ಯ ಕ್ರಮಗಳ ಬಗ್ಗೆ ಸೂಚನೆ ನೀಡಿ, ಜಯನಗರ ಪೊಲೀಸ್ ಠಾಣೆ ಸಿಬ್ಬಂದಿಗೆ ಬ್ರಿಫಿಂಗ್ ಮಾಡಿದ್ದಾರೆ. ಇತ್ತ ಭದ್ರಾವತಿ ಮತ್ತು ಆನವಟ್ಟಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೂರ್ವಭಾವಿ ಸಭೆಗಳನ್ನು ನಡೆಸಲಾಗಿದೆ.

ಎಸ್‌ಪಿ ಮಿಥುನ್ ಕುಮಾರ್ ಸೂಚನೆ
ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (Superintendent of Police) ಮಿಥುನ್ ಕುಮಾರ್ ಜಿ. ಕೆ. ಜಯನಗರ ಪೊಲೀಸ್ ಠಾಣೆಯ ಸಿಬ್ಬಂದಿಗೆ ನಿನ್ನೆದಿನ ವಾರದ ಬ್ರೀಫಿಂಗ್ ನಡೆಸಿದರು. ಈ ವೇಳೆ ಮಹತ್ವದ ಸೂಚನೆಗಳನ್ನು ನೀಡಿದ್ದಾರೆ. ‘ಮನೆ ಮನೆಗೆ ಪೊಲೀಸ್’ (Mane Manege Police) ಸೇವೆಯನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ತಿಳಿಸಿದ್ದಾರೆ.
ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು, ಸುರಕ್ಷತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಅಪರಿಚಿತರ ಬಗ್ಗೆ ಮಾಹಿತಿ ಲಭಿಸಿದರೆ ಕೂಡಲೇ ಮೇಲಾಧಿಕಾರಿಗಳಿಗೆ ತಿಳಿಸುವಂತೆ ಸೂಚಿಸಿದ್ದಾರೆ. ಹಾಗೆಯೇ, ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಣೆ ಬಗ್ಗೆ ಸಲಹೆಗಳನ್ನ ನೀಡಿದ್ದಾರೆ.
ಭದ್ರಾವತಿಯಲ್ಲಿ ಈದ್ ಮಿಲಾದ್ ಪೂರ್ವಭಾವಿ ಸಭೆ
ಭದ್ರಾವತಿ ಉಪವಿಭಾಗದ ಪೊಲೀಸ್ ಡಿವೈಎಸ್ಪಿ ನಾಗರಾಜ್ ಅವರ ನೇತೃತ್ವದಲ್ಲಿ, ಈದ್ ಮಿಲಾದ್ ಹಬ್ಬದ ಹಿನ್ನೆಲೆ ಮುಸ್ಲಿಂ ಸಮುದಾಯದ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಲಾಗಿದೆ. ಗೌರಿ-ಗಣೇಶ ಮತ್ತು ಈದ್ ಮಿಲಾದ್ ಹಬ್ಬ ಒಂದೇ ಸಮಯದಲ್ಲಿ ಬರುವುದರಿಂದ, ಎರಡೂ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸುವಂತೆ ಮನವಿ ಮಾಡಲಾಗಿದೆ. ಮೆರವಣಿಗೆಗಳಲ್ಲಿ ಜನಸಂದಣಿ ನಿಯಂತ್ರಣ, ಪ್ರಚೋದನಕಾರಿ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಬಳಸದಿರುವುದು, ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ವಿವಾದಾತ್ಮಕ ಪೋಸ್ಟ್‌ಗಳನ್ನು ಹಾಕದಂತೆ ಎಚ್ಚರಿಕೆ ನೀಡಲಾಗಿದೆ.
ಆನವಟ್ಟಿಯಲ್ಲಿ ಆಯೋಜಕರಿಗೆ ಮಾರ್ಗಸೂಚಿ
ಇತ್ತ ಆನವಟ್ಟಿ ಪೊಲೀಸ್ ಠಾಣೆಯ ಪಿಎಸ್‌ಐ ಚಂದನ್ ಚಲುವಯ್ಯ ಗಣೇಶ ಪ್ರತಿಷ್ಠಾಪನಾ ಆಯೋಜಕರ ಸಭೆ ನಡೆಸಿ ಹಲವು ಮಾರ್ಗಸೂಚಿಗಳನ್ನು ನೀಡಿದ್ದಾರೆ. ಗಣೇಶ ಮೂರ್ತಿಯ ವಿವರ, ಪ್ರತಿಷ್ಠಾಪನಾ ಸ್ಥಳ, ವಿದ್ಯುತ್ ಮತ್ತು ಮೈಕ್ ಲೈಸೆನ್ಸ್‌ಗಳ ಕುರಿತು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ತಿಳಿಸಿದ್ದಾರೆ. ಕರ್ಕಶ ಶಬ್ದವಿಲ್ಲದೆ ರಾತ್ರಿ 10 ಗಂಟೆಯೊಳಗೆ ಧ್ವನಿವರ್ಧಕಗಳನ್ನು ಆರಿಸುವುದು, ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ, ಮತ್ತು ಸಿಸಿ ಕ್ಯಾಮರಾ ಅಳವಡಿಕೆ (CCTV installation) ಮಾಡುವುದು ಸೇರಿದಂತೆ ಪ್ರಮುಖ ಸೂಚನೆಗಳನ್ನು ಆಯೋಜಕರಿಗೆ ನೀಡಿದ್ದಾರೆ.
Shimoga police festival preparations
Shimoga police are making preparations for the upcoming Gauri-Ganesha and Eid Milad festivals.
ಶಿವಮೊಗ್ಗ ಪೊಲೀಸ್, ಹಬ್ಬದ ಸಿದ್ಧತೆ, ಗೌರಿ ಗಣೇಶ, ಈದ್ ಮಿಲಾದ್, ಜಯನಗರ ಪೊಲೀಸ್, ಭದ್ರಾವತಿ ಪೊಲೀಸ್, ಆನವಟ್ಟಿ ಪೊಲೀಸ್, Shivamogga Malenadu news, Shimoga Police guidelines, Ganesha festival guidelines, Eid Milad meeting, Shimoga police, festival preparations, Gauri Ganesha, Eid Milad, law and order, police briefing, CCTV, #ShimogaNews, #FestivalPrep, #GaneshaFestival, #EidMilad, #ShimogaPolice, #LawAndOrder
