ಶಿವಮೊಗ್ಗ ಹೊಸ ವರ್ಷ ಆಚರಣೆ : ಏಳು ಸೂಚನೆಗಳನ್ನ ನೀಡಿದ ಎಸ್​ಪಿ ಮಿಥುನ್ ಕುಮಾರ್ !ಏನದು

Shimoga New Year celebrations: SP Mithun Kumar issues seven instructions

ಶಿವಮೊಗ್ಗ ಹೊಸ ವರ್ಷ ಆಚರಣೆ : ಏಳು ಸೂಚನೆಗಳನ್ನ ನೀಡಿದ ಎಸ್​ಪಿ ಮಿಥುನ್ ಕುಮಾರ್ !ಏನದು
Shimoga New Year celebrations: SP Mithun Kumar issues seven instructions

SHIVAMOGGA  |  Dec 29, 2023  |  ಶಿವಮೊಗ್ಗದಲ್ಲಿಯು ಹೊಸ ವರ್ಷ ಆಚರಣೆಗೆ ಸಿದ್ದತೆಗಳು ಆರಂಭವಾಗಿದೆ. ಜನ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಯುವಕರು ಪಾರ್ಟಿಗೆ ರೆಡಿಯಾಗ್ತಿದ್ದಾರೆ. ಯುವತಿಯರು ಸಂಭ್ರಮಕ್ಕೆ ಅಣಿಯಾಗುತ್ತಿದ್ದಾರೆ. ಫ್ಯಾಮಿಲಿಗಳು ಟೂರ್​ಗೆ ಪ್ಲೇಸ್​ ಹುಡುಕುತ್ತಿದ್ದಾರೆ. ಈ ನಡುವೆ ಹೊಸವರ್ಷ ಆಚರಣೆ ಸಂಬಂಧ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಸಭೆ ನಡೆಸಿ ಕೆಲವೊಂದು ಸೂಚನೆಗಳನ್ನ ನೀಡಿದ್ದಾರೆ.  



ಹೊಸ ವರ್ಷ ಆಚರಣೆ

ದಿನಾಂಕಃ-28-12-2023 ರಂದು ಸಂಜೆ  ಮುಂಬರುವ ಹೊಸ ವರ್ಷ ಆಚರಣೆಯ  ಸಂಬಂಧ ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಮಿಥುನ್ ಕುಮಾರ್ ಜಿ.ಕೆ ಐಪಿಎಸ್,  ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ರವರ ನೇತೃತ್ವದಲ್ಲಿ, ಶಿವಮೊಗ್ಗ ನಗರದ ಹೋಟೆಲ್, ಕ್ಲಬ್ ಮತ್ತು ರೆಸೋರ್ಟ್ ಮಾಲೀಕರು ಹಾಗೂ ವ್ಯವಸ್ಥಾಪಕರ ಸಭೆಯನ್ನು ನಡೆಸಿ, ಈ ಕೆಳಕಂಡ ಸೂಚನೆಗಳನ್ನು ನೀಡಿದರು.

1) ಹೊಸ ವರ್ಷ ಆಚರಣೆ ಸಮಾರಂಭವನ್ನು ಆದಷ್ಟೂ ಶಿಸ್ತಿನಿಂದ, ಮಿತಿಯ ಒಳಗೆ ಆಚರಿಸಿ, ಮಿತಿಯನ್ನು ಮೀರಿದ್ದಲ್ಲಿ ಅಪಘಾತಗಳು ನಡೆಯುವ ಸಂಭವವಿರುತ್ತದೆ ಮತ್ತು ಸಂಭ್ರಮಾಚರಣೆಯನ್ನು ಬೆಳಗಿನ ಜಾವ 01:00 ಗಂಟೆಯ ಒಳಗಾಗಿ ಮುಕ್ತಾಯಗೊಳಿಸುವುದು. 

2) ವಾಹನ ಸವಾರರ ಸುರಕ್ಷತೆಯ ದೃಷ್ಠಿಯಿಂದ ಮಧ್ಯಪಾನ ಮಾಡಿ ವಾಹನವನ್ನು ಚಾಲನೆ ಮಾಡದೇ, ಮಧ್ಯಪಾನ ಮಾಡದೇ ಇರುವವರು ಮಾತ್ರ ವಾಹನ ಚಾಲನೆ ಮಾಡುವುದು ಸೂಕ್ತವಿರುತ್ತದೆ.

3) ಘನ ಸರ್ವೋಚ್ಚ ನ್ಯಾಯಾಲಯದ ಆದೇಶದನ್ವಯ ಹೊರಾಂಗಣದ ಸಂಭ್ರಮಾಚರಣೆಗಳಲ್ಲಿ ರಾತ್ರಿ 10 ಗಂಟೆಯ ವರೆಗೆ ನಿಗದಿ ಪಡಿಸಿದ ಶಬ್ದ ಮಿತಿಯ ಒಳಗೆ ಸೌಂಡ್ ಸಿಸ್ಟಂ ಗಳನ್ನು ಬಳಸುವುದು ಮತ್ತು ರಾತ್ರಿ 10 ಗಂಟೆಯ ನಂತರ ಕೇವಲ ಒಳಾಂಗಣ ಸಂಭ್ರಮಾಚರಣೆಗಳಲ್ಲಿ ಮಾತ್ರ ಶಬ್ದ ಮಿತಿಯ ಒಳಗೆ ಸೌಂಡ್ ಸಿಸ್ಟಂ ಗಳನ್ನು ಬಳಸುವುದು.

4) ಹೊಸ ವರ್ಷ ಆಚರಣೆ ಸಮಾರಂಭದ ಆಯೋಜಕರು, ಕಾರ್ಯಕ್ರಮದ ಬಗ್ಗೆ ಮುಂಚಿತವಾಗಿ ಪೊಲೀಸ್ ಇಲಾಖೆಯ  ಗಮನಕ್ಕೆ ತರುವುದು, ಕಾನೂನುನಿನ ಚೌಕಟ್ಟಿನ ಒಳಗೆ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಅಭ್ಯಂತರವಿರುದಿಲ್ಲ ಮತ್ತು ಕಾರ್ಯಕ್ರಮದಲ್ಲಿ ಯಾವುದೇ ರೀತಿಯ  ಮಾದಕ ವಸ್ತುಗಳನ್ನು ಬಳಸಬಾರದು.

READ : ಬೈಕ್​ನಲ್ಲಿ ರಿಪ್ಪನ್​ಪೇಟೆ ಕಡೆಗೆ ಹೋಗುತ್ತಿದ್ದ ಸಾಗರ ಯುವಕ ಸಾವು! ನಡುರಸ್ತೆಯಲ್ಲಿ ನಡೆದಿದ್ದೆ ಗೊಂದಲ?

5) ಹೊಸ ವರ್ಷದ ಆಚರಣೆಯಲ್ಲಿ ಭಾಗವಹಿಸುವವರ ಸುರಕ್ಷತೆಯ ದೃಷ್ಠಿಯಿಂದ, ಅಪಾಯವಿರುವ ಸ್ಥಳಗಳಾದ ಮೇಲಂತಸ್ತು (ಟಾಪ್ ರೂಫ್) ಗಳಲ್ಲಿ ಮತ್ತು ಎತ್ತರವಾದ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡವುದು ಸೂಕ್ತವಿರುವುದಿಲ್ಲ. ಆದ್ದರಿಂದ ಎಲ್ಲಾ ಸುರಕ್ಷತಾ ನಿಯಮಗಳನ್ನು ಮತ್ತು  ಮುಂಜಾಗ್ರತಾ ಕ್ರಮಗಳನ್ನು  ಪಾಲಿಸಿ, ಸುರಕ್ಷಿತವಾದ ಸ್ಥಳಗಳಲ್ಲಿಯೇ  ಕಾರ್ಯಕ್ರಮವನ್ನು ಆಯೋಜನೆ ಮಾಡುವುದು. 

6) ಸಾರ್ವಜನಿಕರ ಹಿತ ದೃಷ್ಠಿಯಿಂದ, ಸಂಭ್ರಮಾಚರಣೆಯನ್ನು ಕಾರ್ಯಕ್ರಮ ಆಯೋಜಿಸಿರುವ ಸ್ಥಳದ ಹೊರಗಡೆ, ರಸ್ತೆಬದಿಗಳಲ್ಲಿ ಮಾಡದೇ, ನಿಗದೀಪಡಿಸಿರುವ ಸ್ಥಳದ ಒಳಗಡೆಯೇ ಮಾಡುವಂತೆ ನೋಡಿಕೊಳ್ಳುವುದು ಕಾರ್ಯಕ್ರಮದ ಆಯೋಜಕರ ಜವಬ್ದಾರಿಯಾಗಿರುತ್ತದೆ.   

7) ಯಾವುದೇ ತುರ್ತು ಸಂದರ್ಭದಲ್ಲಿ ಅಥವಾ ಸಹಾಯಕ್ಕಾಗಿ ಕೂಡಲೇ ಹತ್ತಿರದ ಪೊಲೀಸ್ ಠಾಣೆ/ ಪೊಲೀಸ್ ಕಂಟ್ರೋಲ್ ರೂಂ ನಂಬರ್: 9480803300 / 08182-261413 ಅಥವಾ ತುರ್ತು ಸಹಾಯವಾಣಿ  112 ಗೆ ಕರೆ ಮಾಡುವಂತೆ ತಿಳಿಸಿದರು.