ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಶಿವಮೊಗ್ಗ ಜಿಲ್ಲಾ ಸಮಿತಿಯಲ್ಲಿ ಮಹತ್ವದ ಬದಲಾವಣೆ

Shimoga district committee of Karnataka Rashtra Samithi to undergo major changes

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಶಿವಮೊಗ್ಗ ಜಿಲ್ಲಾ ಸಮಿತಿಯಲ್ಲಿ ಮಹತ್ವದ ಬದಲಾವಣೆ

KARNATAKA NEWS/ ONLINE / Malenadu today/ Jun 25, 2023 SHIVAMOGGA NEWS

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವೂ ವಿಧಾನಸಭಾ ಚುನಾವಣೆಯ ಬಳಿಕ ರಾಜ್ಯಾದ್ಯಂತ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ಪುನಃರಚಿಸುತ್ತಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾ ಸಮಿತಿಯನ್ನು ನೂತನವಾಗಿ ರಚಿಸಲಾಗಿದೆ

ಪ್ರಸ್ತುತ 7 ಜನರಿರುವ ಈ ಸಮಿತಿಗೆ ಶಿವಮೊಗ್ಗ ಗ್ರಾಮೀಣದವರಾದ  ಪ್ರಭು ಎಸ್. ಕೆ. ಅವರು ಜಿಲ್ಲಾಧ್ಯಕ್ಷರಾಗಿದ್ದು, ತೀರ್ಥಹಳ್ಳಿಯ ಅರುಣ್ ಕಾನಹಳ್ಳಿಯವರು ಉಪಾಧ್ಯಕ್ಷರು, ಭದ್ರಾವತಿಯ ಶಬರೀಶ್ ಎಂ. ಅವರು ಜಿಲ್ಲಾ ಪ್ರಧಾನ ಕಾರ್ಯುದರ್ಶಿಯಾಗಿ, ಶಿಕಾರಿಪುರದ ರವಿಕುಮಾರ್ ನಾಯಕ್, ಶಿವಮೊಗ್ಗದ ನಿರಂಜನ ಇ. ಮತ್ತು ಶ್ರೀ ರಫೀಕ್ ಅಹ್ಮದ್ ಅವರುಗಳು ಕಾರ್ಯದರ್ಶಿಗಳಾಗಿ ಮತ್ತು ಭದ್ರಾವತಿಯ ಪ್ರದೀಪ್ ವೈ. ಅವರು ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.


ಹಾವೇರಿಯಿಂದ ಕೆ.ಇ. ಕಾಂತೇಶ್​ ಲೋಕಸಭೆಗೆ ಸ್ಪರ್ಧೆ ! ಪುತ್ರನ ವಿಚಾರದಲ್ಲಿ ಮಹತ್ವದ ಹೇಳಿಕೆ ನೀಡಿದ ಕೆ.ಎಸ್​.ಈಶ್ವರಪ್ಪ

ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ರವರ ಪುತ್ರ ಕೆ.ಇ. ಕಾಂತೇಶ್​ ಹಾವೇರಿಯಿಂದ ಲೊಕಸಭೆಗೆ ಸ್ಪರ್ಧಿಸುತ್ತಾರೆ. ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬ ಮಾಹಿತಿ ಚರ್ಚೆಗೆ ಬಂದಿತ್ತು. ಆದರೆ ಈ ಬಗ್ಗೆ ಅಧಿಕೃತವಾದ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಈ ಬಗ್ಗೆ ಮಾತನಾಡಿರುವ ಕೆ.ಎಸ್​.ಈಶ್ವರಪ್ಪ ‘ನನ್ನ ಪುತ್ರ ಕಾಂತೇಶ್ ಹಾವೇರಿಯಿಂದ ಲೋಕಸಭೆಗೆ ಬಿಜೆಪಿಯಿಂದ ಸ್ಪರ್ಧಿಸಲು ಅಪೇಕ್ಷೆ ಪಟ್ಟಿರುವುದು ನಿಜ ಎಂದಿದ್ದಾರೆ. 

ಹಾಲಿ ಸಂಸದ ಶಿವಕುಮಾರ್ ಉದಾಸಿ ಚುನಾವಣೆಗೆ ನಿಲ್ಲುವುದಿಲ್ಲ ಅಂತ ಹೇಳಿದ್ದಾರೆ. ಆದರೆ ಅಂತಿಮವಾಗಿ ಪುತ್ರನಿಗೆ ಟಿಕೆಟ್‌ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದಿದ್ದಾರೆ ಕೆ.ಎಸ್. ಈಶ್ವರಪ್ಪ 

ಹಾವೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಈಶ್ವರಪ್ಪನವರು ಈ ವಿಚಾರ ತಿಳಿಸಿದ್ದಾರೆ.  ಕಾಂತೇಶ್​ ಹಾವೇರಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎನ್ನುತ್ತಿದ್ದಾನೆ. ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದಿದ್ದಾರೆ. 


ಯುವಕನ ಕತ್ತು ಸೀಳಿ ರಕ್ತ ಕುಡಿದು ದೃಶ್ಯ ರೆಕಾರ್ಡ್​ ಮಾಡಿಸಿದ ಆರೋಪಿ! ದೇಶದೆಲ್ಲೆಡೆ ಸಂಚಲನ ಮೂಡಿಸಿದ ವಿಡಿಯೋ! VIRAL

ಯುವಕನೊಬ್ಬನ ಕತ್ತು ಸೀಳಿ , ರಕ್ತ ಕುಡಿದ ವ್ಯಕ್ತಿಯೊಬ್ಬ ಅದನ್ನ ವಿಡಿಯೋ ರೆಕಾರ್ಡ್​​ ಮಾಡಿದ ಘಟನೆಯೊಂದು ಇವತ್ತು ದೇಶದೆಲ್ಲಡೆ ಸುದ್ದಿಯಾಗುತ್ತಿದೆ. ಚಿಕ್ಕಬಳ್ಳಾಪುರ ದಲ್ಲಿ ನಡೆದ ಘಟನೆಯ ದೃಶ್ಯ ಬೀಭತ್ಸವಾಗಿದ್ದು, ಮೊಬೈಲ್​ಗಳಲ್ಲಿ ಹರಿದಾಡುತ್ತಿದೆ. 

ನಡೆದಿದ್ದೇನು?

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ನಡೆದ ಘಟನೆ ಇದಾಗಿದೆ ಎಂದು ಹೇಳಲಾಗುತ್ತಿದೆ. 

ದೃಶ್ಯದಲ್ಲಿ ವ್ಯಕ್ತಿಯೊಬ್ಬ ಇನ್ನೊಬ್ಬ ಕತ್ತು ಸೀಳಿದ್ದು, ಆತನ ಮೇಲೆ ಹಲ್ಲೆ ಮಾಡುತ್ತಿದ್ದಾನೆ. ಅಲ್ಲದೆ ಆತನ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಕುಡಿಯುತ್ತಿದ್ದಾನೆ. ಅಲ್ಲದೆ ವಿಡಿಯೋ ತೆಗೆಯುತ್ತಿದ್ದ ವ್ಯಕ್ತಿಗೆ ಈತನನ್ನ ಸಾಯಿಸೋಣವಾ ಅಂತಾ ತೆಲುಗಿನಲ್ಲಿ ಮಾತನಾಡುತ್ತಿದ್ಧಾನೆ. ಮಾತನಾಡುತ್ತಿರುವ ಪದಗಳಲ್ಲಿ ಅಕ್ರಮ ಸಂಬಂಧದ ವಿಚಾರದ ಬಗ್ಗೆ ಪ್ರಸ್ತಾಪಿಸಿದ್ದಾನೆ. ಸದ್ಯ ಘಟನೆಯಲ್ಲಿ ಹಲ್ಲೆಗೊಳಗಾದವ ಬದುಕುಳಿದಿದ್ದು, ಆರೋಪಿಯನ್ನ ಸಹ ಪೊಲೀಸರು ಬಂಧಿಸಿದ್ದಾರೆ. 


ಭದ್ರಾವತಿಯಲ್ಲಿ ಬೈಕ್ ಕದಿಯುತ್ತಿದ್ದ ಕೋಳಿ ಅರೆಸ್ಟ್ ! ಬಗೆಹರಿಯಿತು ಎರಡು ಕೇಸ್​! ಪ್ರಕರಣದ ವಿವರ ಇಲ್ಲಿದೆ

ಭದ್ರಾವತಿ ತಾಲ್ಲೂಕಿನ  ಹಳೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೆನರಾ ಬ್ಯಾಂಕ್ ಎಟಿಎಂ ಮುಂದೆ ನಡೆದಿದ್ದ ಬೈಕ್​ ಕಳ್ಳತನ ಪ್ರಕರಣವನ್ನು ಭದ್ರಾವತಿ ಪೊಲೀಸರು ಭೇದಿಸಿದ್ದಾರೆ. 

ಇಲ್ಲಿನ ನಿವಾಸಿಯೊಬ್ಬರು ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ಬೈಕ್​ನ್ನ   ಕಳ್ಳರು ಕಳ್ಳತನ ಮಾಡಿದ್ದರು  ಈ ಸಂಬಂಧ 379 ಐಪಿಸಿ ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ  ತನಿಖಾ ತಂಡವು ದಿನಾಂಕ:24/6/2023 ರಂದು ಆರೋಪಿಯನ್ನ ಬಂಧಿಸಿದ್ಧಾರೆ.  ಪ್ರಭು @ ಕೋಳಿ,  28 ವರ್ಷ, ಬೆಳಕಟ್ಟೆ ಗ್ರಾಮ ಶಿವಮೊಗ್ಗ ಬಂಧಿತ ಆರೋಪಿ. 

ಆರೋಪಿತನಿಂದ ಭದ್ರಾವತಿ ಹಳೆ ನಗರ ಪೊಲೀಸ್ ಠಾಣೆಯ 01 ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ 01 ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಸೇರಿ ಒಟ್ಟು 02 ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು 80,000/- ರೂ ಗಳ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.  


ಕೇವಲ 14 ಸೆಕೆಂಡ್​ನಲ್ಲಿಯೇ ದಾಖಲೆ ಬರೆದ ಭದ್ರಾವತಿಯ 2 ನೇ ಕ್ಲಾಸ್ ಬಾಲಕ!

ಭದ್ರಾವತಿಯ ಬಾಲಕನೊಬ್ಬ ಕೇವಲ 14 ಸೆಕೆಂಡ್​ನಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನ ಹೇಳುವ ಮೂಲಕ ರೆಕಾರ್ಡ್​ ಬುಕ್​​ನಲ್ಲಿ ದಾಖಲೆ ಮೆರೆದಿದ್ಧಾನೆ. 

ಭದ್ರಾವತಿ ತಾಲ್ಲೂಕಿನ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ 2ನೇ ತರಗತಿ ವಿದ್ಯಾರ್ಥಿ ಸಿ. ವೀರ್‌ನಾರಾಯಣ್‌ಸಿಂಗ್ ಒಎಂಜಿ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ತನ್ನ ಸಾಧನೆ ದಾಖಲಿಸಿದ್ದಾನೆ. ಈತನಿಗೆ ಇನ್ನೂ 7 ವರ್ಷ 3 ತಿಂಗಳು, ಈತ ಕೇವಲ 14 ಸೆಕೆಂಡ್​ಗಳಲ್ಲಿ ದೇಶದ ಎಲ್ಲಾ ರಾಜ್ಯಗಳ ಹೆಸರನ್ನು ಹೇಳಿದ್ದಾನೆ. 

ಇದೇನು ಸುಲಭದ ಕೆಲಸ ಅಂದುಕೊಂಡವರು, ಟೈಮರ್​ ಇಟ್ಟುಕೊಂಡು ಎಲ್ಲಾ ರಾಜ್ಯಗಳ ಹೆಸರನ್ನ ಹೇಳುವ ಪ್ರಯತ್ನ ನಡೆಸಬಹುದು.ಕಳೆದ ಏಪ್ರಿಲ್​ನಲ್ಲಿ ಈ ಸಂಬಂಧ ದಾಖಲೆ ರೆಕಾರ್ಡ್​ ಮಾಡಿದ್ದ ಬಾಲಕನಿಗೆ ಇದೀಗ ಪ್ರಮಾಣಪತ್ರ ದೊರಕಿದೆ.  ವೀರ್‌ನಾರಾಯಣ್‌ಸಿಂಗ್ ತಾಲೂಕಿನ ದೇವರನರಸೀಪುರ ಗ್ರಾಮದ ನಿವಾಸಿಗಳಾದ ಸಿ. ಚರಣ್‌ಸಿಂಗ್ ಮತ್ತು ಆರ್. ದಿವ್ಯರಾಣಿ ದಂಪತಿ ಪುತ್ರನಾಗಿದ್ದಾನೆ.