ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 18 2025: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಗಾಂಜಾ ಬೆಳೆಯುತ್ತಿದ್ದ ಒಬ್ಬ ವ್ಯಕ್ತಿಯನ್ನು ಪೊಲೀಸರು ದಸ್ತಗಿರಿ ಮಾಡಿದ್ದಾರೆ. 2025ರ ಅಕ್ಟೋಬರ್ 17ರಂದು ದಿಂಡದಹಳ್ಳಿ ಗ್ರಾಮದ ಒಂದು ಜಮೀನಿನಲ್ಲಿ ಮಾದಕ ಸಸ್ಯಗಳನ್ನು ಬೆಳೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿತ್ತು.
ಶಿಕಾರಿಪುರ ಉಪ ವಿಭಾಗದ DySP ಕೇಶವ್ ಅವರ ಮೇಲ್ವಿಚಾರಣೆಯಲ್ಲಿ, ಶಿಕಾರಿಪುರ ಗ್ರಾಮಾಂತರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಆರ್ ಆರ್ ಪಾಟೀಲ್ ಅವರ ನೇತೃತ್ವದ ವಿಶೇಷ ತಂಡ ಈ ಕಾರ್ಯಾಚರಣೆ ನಡೆಸಿದೆ.

ಶಿಕಾರಿಪುರ : ಶಾಲೆ ಆವರಣದಲ್ಲಿದ್ದ ಮಕ್ಕಳ ಮೇಲೆ ಜೇನು ದಾಳಿ!
ದಾಳಿ ವೇಳೆ ಜಮೀನಿನಲ್ಲಿ 35,000/- ರೂಪಾಯಿ ಮೌಲ್ಯದ, 13 ಕೆಜಿ ತೂಕದ ಒಟ್ಟು 28 ಹಸಿ ಗಾಂಜಾ ಗಿಡಗಳನ್ನು (Marijuana Plants) ಪತ್ತೆ ಹಚ್ಚಿ ವಶಪಡಿಸಿಕೊಂಡಿದೆ. ಈ ಅಕ್ರಮ ಕೃತ್ಯದಲ್ಲಿ ಭಾಗಿಯಾಗಿದ್ದ ದಿಂಡದಹಳ್ಳಿ ಗ್ರಾಮದ 34 ವರ್ಷ ವಯಸ್ಸಿನ ಬಸವರಾಜ್ ಎಂಬ ಆರೋಪಿಯನ್ನು ತಕ್ಷಣವೇ ಬಂಧಿಸಲಾಯಿತು.
ಆರೋಪಿ ಬಸವರಾಜ್ ವಿರುದ್ಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ (NDPS Act – ಮಾದಕ ವಸ್ತುಗಳ ಕಾಯ್ದೆ) ಕಲಂ 8C, 20 (a) (i) ರ ಪ್ರಕಾರ ಪ್ರಕರಣವನ್ನು ದಾಖಲಿಸಲಾಗಿದೆ.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
ನ್ಯಾಮತಿಯಲ್ಲಿ ದಾವಣಗೆರೆ ಪೊಲೀಸರ ಕಾರ್ಯಾಚರಣೆ! ಶಿಕಾರಿಪುರದ ಇಬ್ಬರ ಬಂಧನ! ಏನಿದು!
