ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 18 2025: RSS ಸ್ಥಾಪನೆಯಾದ 100 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಭದ್ರಾವತಿ ನಗರದಲ್ಲಿಂದು ವಿಜಯ ದಶಮಿ ಪಥ ಸಂಚಲನವನ್ನು ಆಯೋಜಿಸಲಾಗಿದೆ. ಸರ್ಕಾರ ಈ ಸಂಬಂಧ ತನ್ನದೆ ನಿಯಮ ಜಾರಿಗೆ ತಂದ ನಂತರ ನಡೆಯುತ್ತಿರುವ ಈ ಪಥ ಸಂಚಲನ ನಡೆಯಲಿದೆ.
ಪಥ ಸಂಚಲನವು ಹೊಸಮನೆ ಶಿವಾಜಿ ವೃತ್ತದಿಂದ ಹೊರಟು, ಬಿ.ಹೆಚ್. ರಸ್ತೆಯ ಮೂಲಕ ಸಾಗಿ ಲೋಯರ್ ಹುತಾ ಬಳಿ ಸಮಾಪ್ತಿಯಾಗಲಿದೆ. ಪಥ ಸಂಚಲನ ಸಾಗುವ ಪ್ರಮುಖ ರಸ್ತೆಗಳನ್ನು ಕೇಸರಿ ಬಂಟಿಂಗ್ಸ್‌ಗಳಿಂದ ಅಲಂಕರಿಸಲಾಗಿದ್ದು, ರಾತ್ರಿ ವೇಳೆಗೆ ವಿದ್ಯುತ್ ದೀಪಗಳಿಂದ ವೃತ್ತಗಳು ಮತ್ತು ರಸ್ತೆಗಳು ಕಂಗೊಳಿಸುವಂತೆ ಸಿಂಗರಿಸಲಾಗಿದೆ.

ಶಿವಮೊಗ್ಗದಲ್ಲಿ RSS ಪಥಸಂಚಲನ | ಗಣವೇಷಧಾರಿಗಳಾದ ಸಂಸದ, ಶಾಸಕರು | ಮಳೆ ನಡುವೆ ಹೇಗಿತ್ತು ಗೊತ್ತಾ ಮೆರವಣಿಗೆ
ಪಥ ಸಂಚಲನ ಮಾರ್ಗದುದ್ದಕ್ಕೂ ದೇಶದ ಶ್ರೇಷ್ಠ ಮಹಾಪುರುಷರಾದ ಡಾ. ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಸಮಾಜ ಸುಧಾರಕರಾದ ಬಸವಣ್ಣ, ಮಹರ್ಷಿ ವಾಲ್ಮೀಕಿ, ಭಗೀರಥ, ಹಾಗೆಯೇ ಕ್ರಾಂತಿಕಾರಿಗಳಾದ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ರಾಣಾ ಪ್ರತಾಪ್, ಡಾಕ್ಟರ್ ಜೀ ಮತ್ತು ಗೋಳ್ವಾಲ್ಕರ್ ಸೇರಿದಂತೆ ಅನೇಕ ಗಣ್ಯರ ಭಾವಚಿತ್ರವಿರುವ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಸ್ವಯಂ ಸೇವಕರಿಗೆ ಹೂವಿನ ಮಳೆ ಸುರಿಸಲು ಎರಡು ಕ್ವಿಂಟಾಲ್ ಹೂಗಳನ್ನು ಸಿದ್ಧಪಡಿಸಲಾಗಿದೆ.

ಮಸೀದಿ, ಮಂದಿರ, ಮೋಹನ್ ಭಾಗವತ್ ಮತ್ತು ಸಿಟಿ ರವಿ ಬಗ್ಗೆ ಆಯನೂರು ಮಂಜುನಾಥ್‌ರ ನಾಲ್ಕು ಮಾತು
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
