ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಮಹತ್ವದ ಸುದ್ದಿಯೊಂದು ಹೊರಬಿದ್ದಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆಗೆ ಹೋರಾಟಗಾರರು ಸಜ್ಜಾದ ಬೆನ್ನಲ್ಲೆ ಕೇಂದ್ರ ಸರ್ಕಾರ ಯೋಜನೆಗೆ ತಡೆ ಕೊಟ್ಟಿದೆ. ಈ ಸಂಬಂಧ ರಾಷ್ಟ್ರೀಯ ಸುದ್ದಿ ಮಾಧ್ಯಮ ಇಂಡಿಯಾ ಟುಡೆ ವರದಿ ಮಾಡಿದೆ. Sharavathi Pumped Storage Project
ಶಿವಮೊಗ್ಗದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ಗಳು ಎಲ್ಲೆಲ್ಲಿ ಇವೆ!?
ರಾಷ್ಟ್ರೀಯ ಮಾಧ್ಯಮದ ವರದಿ ಪ್ರಕಾರ, ಶರಾವತಿ 2000 ಮೆಗಾವ್ಯಾಟ್ ವಿದ್ಯುತ್ ಯೋಜನೆಯನ್ನು ಕೇಂದ್ರ ಸರ್ಕಾರ ಹೋಲ್ಡ್ನಟ್ಟಿದೆ. ಅಂದರೆ ತಾತ್ಕಾಲಿಕವಾಗಿ ಯೋಜನೆಯನ್ನು ತಡೆ ಹಿಡಿದಿದೆ. ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಶರಾವತಿ 2000 ಮೆಗಾವ್ಯಾಟ್ ಪಂಪ್ಡ್ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗೆ Sharavathi Pumped Storage Project ಗೆ ಇದರಿಂದ ಬ್ರೇಕ್ ಬಿದ್ದಂತಾಗಿದೆ. ಇತ್ತೀಚೆಗೆ ಯೋಜನೆಯ ಟೆಂಡರ್ ಕೂಡ ಆಗಿತ್ತು.

ಕೇಂದ್ರ ಪರಿಸರ ಸಚಿವಾಲಯ ಕಳೆದ ಅಕ್ಟೋಬರ್ 27 ರಂದು ನಡೆಸಿದ ಅರಣ್ಯ ಸಲಹಾ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತನ್ನ ತೀರ್ಮಾನವನ್ನು ಪ್ರಕಟಿಸಿದೆ ಎಂದು ವರದಿಯಾಗಿದ್ದು, ಈ ಬಗ್ಗೆ ಇನ್ನಷ್ಟೆ ಪೂರ್ತಿ ಮಾಹಿತಿ ಹೊರಬೀಳಬೇಕಿದೆ. ಪಶ್ಚಿಮ ಘಟ್ಟಗಳು ಜಗತ್ತಿನ 24 ಜಾಗತಿಕ ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ ಇದೆ ಕಾರಣಕ್ಕೆ ಕೇಂದ್ರ ಸರ್ಕಾರ ಯೋಜನೆಯನ್ನು ತಡೆಹಿಡಿದಿದೆ ಎನ್ನಲಾಗುತ್ತಿದೆ.

ಶರಾವತಿ ವಿಚಾರದಲ್ಲಿ ಉಗ್ರಹೋರಾಟಕ್ಕೆ ಅಣಿ! ಶಿವಮೊಗ್ಗದಲ್ಲಿ ದುಂಡು ಮೇಜಿನ ಸಭೆ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
