ಶಿವಮೊಗ್ಗ, malenadu today news : August 24 2025, ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಅವಕಾಶ ಇದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India – SBI) 5,000ಕ್ಕೂ ಹೆಚ್ಚು ಜೂನಿಯರ್ ಅಸೋಸಿಯೇಟ್ಸ್ (ಬ್ಯಾಂಕ್ ಕ್ಲರ್ಕ್) ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಸಂಬಂಧ ಪದವಿ ಪೂರ್ಣಗೊಳಿಸಿದ ಅಥವಾ ಅಂತಿಮ ವರ್ಷದಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ಇನ್ನು ಎರಡು ದಿನಗಳು ಮಾತ್ರ ಬಾಕಿ ಇದೆ. ರಾಜ್ಯದ ವಿವಿಧ ಕಡೆಗಳಲ್ಲಿ ಪರೀಕ್ಷೆಗಳು ನಡೆಯಲಿದ್ದು, ಪೂರ್ಣ ಮಾಹಿತಿಗಾಗಿ ಪಿಡಿಎಫ್ ಲಿಂಕ್ನಲ್ಲಿದೆ.

ಹೆಚ್ಚುವರಿ ಮಾಹಿತಿ
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಪಡೆದಿರಬೇಕು.
- ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರು.
- 20 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- OBC ಅಭ್ಯರ್ಥಿಗಳಿಗೆ 31 ವರ್ಷದವರೆಗೆ ಮತ್ತು SC/ST ಅಭ್ಯರ್ಥಿಗಳಿಗೆ 33 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
- ಅರ್ಜಿ ಸಲ್ಲಿಸಲು ಕೊನೆಯ ದಿನ ಆಗಸ್ಟ್ 26, 2025
SBI Recruitment 2025 Junior Associates Post
SBI recruitment 2025, junior associates, bank clerk jobs, ಎಸ್‌ಬಿಐ