#SAVEVISL : ಭದ್ರಾವತಿ ಉಕ್ಕಿನ ಕಾರ್ಖಾನೆ ಉಳಿಸಿ ಹೋರಾಟಕ್ಕೆ ಪೇಜಾವರ ಶ್ರೀಗಳ ಎಂಟ್ರಿ! ಫೆಬ್ರವರಿ 24 ಕ್ಕೆ ಭದ್ರಾವತಿ ಬಂದ್

Malenadu Today

MALENADUTODAY.COM | SHIVAMOGGA  | #KANNADANEWSWEB

savevisl : ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ವಿಐಎಸ್​ಎಲ್ (visl)​ ಕಾರ್ಖಾನೆಯನ್ನು ಉಳಿಸಿಕೊಳ್ಳುವ ಹೋರಾಟಕ್ಕೆ ಪೇಜಾವರ ಶ್ರೀಗಳ ಪ್ರವೇಶವಾಗಿದೆ. ಕಾರ್ಮಿಕರ ನಿಯೋಗದ ಮನವಿಗೆ ಸ್ಪಂದಿಸಿ ಹೋರಾಟದ ಸ್ಥಳಕ್ಕೆ ಆಗಮಿಸಿದ ಅವರು ಕಾರ್ಖಾನೆ ಉಳಿಸಲು ಪ್ರಯತ್ನಿಸುವುದಾಗಿ ಹೆಳಿದ್ಧಾರೆ.  

READ | ಸುಸೂತ್ರ ಚುನಾವಣೆಗೆ ಶಿವಮೊಗ್ಗ ಪೊಲೀಸರ ತೆರೆಮೆರೆ ಕೆಲಸ! ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಮೊಹಲ್ಲಾ ಸಭೆ! ಏನಿದು? ವಿವರ ಇಲ್ಲಿದೆ

ಉಕ್ಕಿನ ನಗರಿ  ಎಂಬ ಖ್ಯಾತಿ ಭದ್ರಾವತಿಗೆ ಶಾಶ್ವತವಾಗಿ ಉಳಿಯಬೇಕು ವಿಐಎಸ್‌ಎಲ್‌ ಕಾರ್ಖಾನೆ ಉಳಿಸುವಂತೆ ಬಿಜೆಪಿ ರಾಷ್ಟ್ರೀಯ ನಾಯಕರೊಂದಿಗೆ ಚರ್ಚಿಸುತ್ತೇನೆ  ಎಂದು  ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಕಾರ್ಮಿಕರ ಹೋರಾಟಕ್ಕೆ  ಭಗವಂತನ ಅನುಗ್ರಹ ದೊರೆಯಬೇಕು. ಆಕಸ್ಮಿಕವಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಭೇಟಿ ನೀಡಿದ್ದರು. ಅವರಿಗೆ ನಿಮ್ಮ ದುಃಖ ಮನವರಿಕೆ ಮಾಡಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಕಾರ್ಖಾನೆ ಉಳಿಸಿಕೊಡುವಂತೆ ಮನವಿ ಮಾಡಿದ್ದೇನೆ’ ಎಂದರು.‘

Malenadu Today

ಈ ಭಾಗದ ಜನಪ್ರತಿನಿಧಿಗಳು ಹಾಗೂ ಸರ್ಕಾರ ವಿಶೇಷ ಗಮನಹರಿಸಿ ಕೆಳವರ್ಗದ ಮಂದಿಯ ಬದುಕು ಮೂರಾಬಟ್ಟೆ ಆಗದಂತೆ ನೋಡಿಕೊಳ್ಳಬೇಕಿದೆ. ಎಲ್ಲರಿಗೂ ನೆಮ್ಮದಿಯ ಬದುಕು ಕೊಡಲು ವಿಶೇಷ ಮುತುವರ್ಜಿ ಹಾಗೂ ಕಾಳಜಿ ತೆಗೆದು ಕೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡುವೆ. ಎಲ್ಲರಿಗೂ ಶ್ರೇಯಸ್ಸು ಬಯಸಿ ಪ್ರಾರ್ಥಿಸುವೆ ಎಂದು ತಿಳಿಸಿದ್ರು.

READ |SHIVAMOGGA AIRPORT ಗೆ ಪ್ರಧಾನಿ ಮೋದಿ ಬರುವ ಮುನ್ನ, ವಾಯುಸೇನೆ ವಿಮಾನದ ಟ್ರಯಲ್​ ರನ್​! ಏನಿದು? ಏತಕ್ಕಾಗಿ? ಹೇಗೆ ನಡೀತು? ವಿವರ ಇಲ್ಲಿದೆ

ಫೆಬ್ರವರಿ 24 ಕ್ಕೆ ಭದ್ರಾವತಿ ಬಂದ್

ಈ ಮಧ್ಯೆ ಇದೇ ಫೆಬ್ರವರಿ 24  ರಂದು ಭದ್ರಾವತಿ ಸಂಪೂರ್ಣವಾಗಿ ಬಂದ್ ಮಾಡುವ ಕೇಂದ್ರ ಸರ್ಕಾರದ ಗಮನಸೆಳೆಯಲು ಕಾರ್ಮಿಕರು ಮುಂದಾಗಿದ್ದಾರೆ, ಈ ಹಿನ್ನಲೆಯಲ್ಲಿ ಸ್ವಯಂ ಪ್ರೇರಣೆಯಿಂದ ವರ್ತಕರು, ವ್ಯಾಪಾರಸ್ಥರು ತಮ್ಮ ವ್ಯವಹಾರ, ವಹಿವಾಟುಗಳನ್ನು  ಸ್ಥಗಿತಗೊಳಿಸುವ ಮೂಲಕ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಕೋರಿದ್ದಾರೆ. ಅಲ್ಲದೆ ಸಮಸ್ತ ನಾಗರೀಕರು ಸಹ ಹೋರಾಟ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com 

Share This Article