Sand tender meeting june 24/ ಮರಳು ಟೆಂಡರ್ ಲಾಟರಿ ಸಭೆ ಮುಂದೂಡಿಕೆ/ ಮುಂದಿನ ದಿನಾಂಕ ಇಲ್ಲಿದೆ

ajjimane ganesh

Sand tender meeting/ ಮರಳು ಟೆಂಡರ್ ಲಾಟರಿ ಸಭೆ ಮುಂದೂಡಿಕೆ

ಶಿವಮೊಗ್ಗ: ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994, ತಿದ್ದುಪಡಿ ನಿಯಮಗಳು 2023 ರನ್ವಯ ನಡೆಸಲಾಗುತ್ತಿರುವ ಮರಳು ಟೆಂಡರ್ ಪ್ರಕ್ರಿಯೆಯಲ್ಲಿ ಯಶಸ್ವಿ ಟೆಂಡರ್‌ದಾರರನ್ನು ಲಾಟರಿ ಮೂಲಕ ಆಯ್ಕೆ ಮಾಡುವ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆಯನ್ನು ಮುಂದೂಡಲಾಗಿದೆ. ಈ ಹಿಂದೆ ಜೂನ್ 24, 2025 ರಂದು ಮಧ್ಯಾಹ್ನ 12:00 ಗಂಟೆಗೆ ನಿಗದಿಪಡಿಸಲಾಗಿದ್ದ ಈ ಸಭೆಯನ್ನು, ಇದೀಗ ಜುಲೈ 1, 2025 ರಂದು ಬೆಳಿಗ್ಗೆ 11:30 ಗಂಟೆಗೆ ಮುಂದೂಡಲಾಗಿದೆ.

- Advertisement -
Sand tender meeting
Sand tender meeting

Sand tender meeting postponed

ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿಗಳು ಮತ್ತು ಸರ್ಕಾರದ ಮಾರ್ಗಸೂಚಿಗಳ ಅನ್ವಯ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 23 ಮರಳು ಬ್ಲಾಕ್‌ಗಳ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. Technical ಮತ್ತು Financial Bid ನಲ್ಲಿ ಆಯ್ಕೆಯಾಗಿರುವ ಬಿಡ್‌ದಾರರಿಗೆ ಮರಳು ಬ್ಲಾಕ್‌ಗಳನ್ನು ಹಂಚಿಕೆ ಮಾಡುವ ಉದ್ದೇಶದಿಂದ ಈ ಸಭೆಯನ್ನು ಆಯೋಜಿಸಲಾಗಿದೆ.ಸಭೆಯು ಶಿವಮೊಗ್ಗ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆಯಲಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆಯಾ ಮರಳು ಬ್ಲಾಕ್‌ಗಳಿಗೆ ಆಯ್ಕೆಯಾಗಿರುವ ಬಿಡ್‌ದಾರರ ಸಮ್ಮುಖದಲ್ಲಿ ಲಾಟರಿ ಮೂಲಕ ಯಶಸ್ವಿ ಬಿಡ್‌ದಾರರನ್ನು ಆಯ್ಕೆ ಮಾಡಲಾಗುವುದು. ಬಿಡ್‌ದಾರರು ಆಧಾರ್ ಪ್ರತಿಯೊಂದಿಗೆ ಖುದ್ದಾಗಿ ಹಾಜರಾಗುವಂತೆ ಸೂಚಿಸಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *