ಶಿವಮೊಗ್ಗ | ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮೂತ್ರಶಾಸ್ತ್ರ (Urology) ವಿಭಾಗದಲ್ಲಿ ಅಪೂರ್ವ ಸಾಧನೆ ಮಾಡಿದೆ. ಪ್ರಾಸ್ಟೇಟ್ ಸಮಸ್ಯೆಯಿಂದ ಬಳಲುತ್ತಿದ್ದ ಬರೋಬ್ಬರಿ 1,000 ರೋಗಿಗಳಿಗೆ ಅತ್ಯಾಧುನಿಕ ‘TURP’ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರೈಸುವ ಮೂಲಕ ಆಸ್ಪತ್ರೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.
ಹಿರಿಯ ಮೂತ್ರಶಾಸ್ತ್ರ ತಜ್ಞರಾದ ಡಾ. ಪ್ರಭುಲಿಂಗ ವೈ. ಕೊಣ್ಣೂರ ಮತ್ತು ಡಾ. ಅವಿನಾಶ್ ಯು.ಕೆ. ಅವರ ನೇತೃತ್ವದ ತಂಡವು ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ನಡೆಸಿದೆ. ಈ ಹಿಂದೆ ಸಾಂಪ್ರದಾಯಿಕ ‘ಎಲೆಕ್ಟ್ರೋಕಾಟರಿ’ ಪದ್ಧತಿ ಬಳಸುತ್ತಿದ್ದ ಆಸ್ಪತ್ರೆ, ಇದೀಗ ಕ್ರಾಂತಿಕಾರಿ ‘100-ವ್ಯಾಟ್ ಹೋಲ್ಮಿಯಂ ಲೇಸರ್’ (Holmium Laser) ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇದರಿಂದ ರಕ್ತಸ್ರಾವ ತೀರಾ ಕಡಿಮೆ ಇರುವುದಲ್ಲದೆ, ರೋಗಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿದೆ. (Advanced Technology)
Sahyadri Narayana ಏನಿದು ಹೋಲ್ಮಿಯಂ ಲೇಸರ್ TURP?
ಇದನ್ನು ಲೇಸರ್ ಪ್ರಾಸ್ಟೇಟೆಕ್ಟಮಿ ಎಂದೂ ಕರೆಯುತ್ತಾರೆ. ಇದರಲ್ಲಿ ಶಕ್ತಿಶಾಲಿ ಲೇಸರ್ ಕಿರಣಗಳನ್ನು ಬಳಸಿ, ಅಡೆತಡೆ ಉಂಟುಮಾಡುವ ಮಾಂಸದ ಬೆಳವಣಿಗೆಯನ್ನು ನಿಖರವಾಗಿ ತೆಗೆದುಹಾಕಲಾಗುತ್ತದೆ. ಅದೇ ಸಮಯದಲ್ಲಿ ರಕ್ತನಾಳಗಳನ್ನು ಸೀಲ್ ಮಾಡುವುದರಿಂದ ರಕ್ತಸ್ರಾವ ತೀರಾ ಕಡಿಮೆ ಇರುತ್ತದೆ.
ಶಿವಮೊಗ್ಗದಲ್ಲಿ ಮಲೆನಾಡು ಕರಕುಶಲ ಉತ್ಸವ, ಯಾವಾಗ, ಏನೆಲ್ಲಾ ವಿಶೇಷತೆ ಇರಲಿದೆ
ಈ ಆಧುನಿಕ ವಿಧಾನದಿಂದ ಹಲವು ಪ್ರಯೋಜನಗಳಿವೆ. ರಕ್ತಸ್ರಾವ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಮತ್ತು ರಕ್ತ ತೆಳುವಾಗುವ ಮಾತ್ರೆಗಳನ್ನು ತೆಗೆದುಕೊಳ್ಳುವ ರೋಗಿಗಳಿಗೆ ಇದು ತುಂಬಾ ಸುರಕ್ಷಿತ. ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ, ನೋವು ಕಡಿಮೆ ಇರುತ್ತದೆ, ಕೆಥೆಟರ್ ಅಳವಡಿಕೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಂಗುವ ಅವಧಿ ಕೂಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ದೊಡ್ಡ ಗಾತ್ರದ ಪ್ರಾಸ್ಟೇಟ್ ಗ್ರಂಥಿಗಳಿಗೂ ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ.
ಕನ್ಸಲ್ಟೆಂಟ್ ಯೂರಾಲಜಿಸ್ಟ್ ಡಾ. ಅವಿನಾಶ್ ಯು.ಕೆ. ಮಾತನಾಡಿ, “ಈ ಹೊಸ ಯಂತ್ರದ ಪ್ರಯೋಜನಗಳು ರೋಗಿಗಳ ಚೇತರಿಕೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿವೆ. ನಿಖರವಾದ ಲೇಸರ್ ತಂತ್ರಜ್ಞಾನದಿಂದಾಗಿ ಅಡ್ಡಪರಿಣಾಮಗಳು ತೀರಾ ಕಡಿಮೆ. ರೋಗಿಗಳು ಶೀಘ್ರವಾಗಿ ತಮ್ಮ ದೈನಂದಿನ ಕೆಲಸಗಳಿಗೆ ಮರಳಬಹುದು ಮತ್ತು ಇಲ್ಲಿಯವರೆಗೆ ನಾವು ಕಂಡ ಫಲಿತಾಂಶಗಳು ಅತ್ಯಂತ ಆಶಾದಾಯಕವಾಗಿವೆ,” ಎಂದು ಹೇಳಿದರು.
ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರದ ಹರಿವು ಕಡಿಮೆಯಾಗುವುದು (weak stream), ರಾತ್ರಿ ವೇಳೆ ಪದೇ ಪದೇ ಮೂತ್ರಕ್ಕೆ ಹೋಗುವುದು ಅಥವಾ ಮೂತ್ರಕೋಶ ಸಂಪೂರ್ಣ ಖಾಲಿಯಾಗದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣುವಂತೆ ಇಬ್ಬರೂ ವೈದ್ಯರು ಸಲಹೆ ನೀಡಿದ್ದಾರೆ. ಆರಂಭದಲ್ಲೇ ರೋಗ ಪತ್ತೆಯಾದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಎಂದು ತಿಳಿಸಿದರು.
ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ ಜಾನ್ ಮಾತನಾಡಿ, 1,000 ಶಸ್ತ್ರಚಿಕಿತ್ಸೆ ಎಂಬುದು ಕೇವಲ ಸಂಖ್ಯೆಯಲ್ಲ, ಇದು ರೋಗಿಗಳು ನಮ್ಮ ಮೇಲಿಟ್ಟಿರುವ ನಂಬಿಕೆಯ ಪ್ರತೀಕ. ಹೋಲ್ಮಿಯಂ ಲೇಸರ್ ತಂತ್ರಜ್ಞಾನವು ದೊಡ್ಡ ಗಾತ್ರದ ಪ್ರಾಸ್ಟೇಟ್ ಗ್ರಂಥಿಗಳಿಗೂ ಅತ್ಯಂತ ನಿಖರ ಮತ್ತು ಸುರಕ್ಷಿತ ಚಿಕಿತ್ಸೆ ನೀಡುತ್ತದೆ” ಎಂದು ಡಾ. ಪ್ರಭುಲಿಂಗ ಕೊಣ್ಣೂರ ತಿಳಿಸಿದ್ದಾರೆ. ಮಲೆನಾಡು ಭಾಗದ ಜನರಿಗೆ ಈಗ ವಿಶ್ವದರ್ಜೆಯ ಲೇಸರ್ ಚಿಕಿತ್ಸೆ ಸ್ಥಳೀಯವಾಗಿಯೇ ಲಭ್ಯವಿರುವುದರಿಂದ ಬೆಂಗಳೂರಿನಂತಹ ನಗರಗಳಿಗೆ ಅಲೆಯುವ ಅವಶ್ಯಕತೆಯಿಲ್ಲ ಎಂದು ಆಸ್ಪತ್ರೆಯ ಎಂಡಿ ವರ್ಗೀಸ್ ಪಿ. ಜಾನ್ ಹರ್ಷ ವ್ಯಕ್ತಪಡಿಸಿದ್ದಾರೆ.
Sahyadri Narayana Hits 1,000 Prostate Surgeries


